ಹಿಪ್ಪುನೇರಳೆ ಹಾಗೂ ರೇಷ್ಮೆ ಹುಳು ತಳಿಗಳ ಸಂಶೋಧನೆ ಕಾರ್ಯ ರೇಷ್ಮೆ ಹುಳು ಹೊಸ ತಳಿ ಬಿಡುಗಡೆ ಶೀಘ್ರ

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜ.25:
ಕೇಂದ್ರ ರೇಷ್ಮೆ ಮಂಡಳಿಯಲ್ಲಿ ಪ್ರಸ್ತುತ ವಾತಾವರಣಕ್ಕೆ ಬೇಕಾಗಿರುವ ಹೊಸ ಹಿಪ್ಪುನೇರಳೆ ಹಾಗೂ ರೇಷ್ಮೆ ಹುಳು ತಳಿಗಳ ಸಂಶೋಧನೆ ಕಾರ್ಯ ಮುಕ್ತಾಯದ ಹಂತದಲ್ಲಿದ್ದು, ಮುಂಬರುವ ದಿನಗಳಲ್ಲಿ ಹವಾಮಾನ ವೈಪರಿತ್ಯ ಸವಾಲುಗಳನ್ನು ನಿಭಾಯಿಸುವ ಹೊಸ ತಳಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ರೇಷ್ಮೆ  ಮಂಡಳಿ ತಾಂತ್ರಿಕ ನಿರ್ದೇಶಕ ಡಾ.ಬಿ.ಟಿ.ಶ್ರೀನಿವಾಸ್ ಹೇಳಿದರು.
ನಗರದ ಕೃಷಿ ತಂತ್ರಜ್ಞರ ಸಂಸ್ಥೆ ಸಭಾಂಗಣದಲ್ಲಿ ಮಂಗಳವಾರ ಸಂಶೋಧನಾ ವಿಸ್ತರಣಾ ಕೇಂದ್ರ, ಕೇಂದ್ರ ರೇಷ್ಮೆ ಮಂಡಳಿ ವತಿಯಿಂದ “ಜಾಗತಿಕ ಹವಾಮಾನ ವೈಪರಿತ್ಯ ಬದಲಾವಣೆಯಿಂದ ರೇಷ್ಮೆ ಕೃಷಿಯ ಮೇಲೆ ಉಂಟಾಗುವ ಸವಾಲುಗಳು ಹಾಗೂ ಅವುಗಳ ನಿರ್ವಹಣೆ” ಕುರಿತಾದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ರೇಷ್ಮೆ ಗೂಡಿನ ಉತ್ಪಾದನೆ ಜೊತೆಗೆ ಇದರ ಇತರೆ ಬಹುಪಯೋಗಿ ಅವಲಂಬನೆಗಳನ್ನು (ಃಥಿ ಠಿಡಿoಜuಛಿಣ) ಸಹ ಸಂಶೋಧಿಸಿ ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು ಎಂದರು.
ರೇಷ್ಮೆ ಈಗ ಕಲ್ಪವೃಕ್ಷವಾಗಿದೆ. ಹಿಪ್ಪು ನೇರಳೆ ಚಹಾ, ಪ್ರೂಟ್ ಜಾಮ್, ಜ್ಯೂಸ್ ಹಾಗೂ ರೇಷ್ಮೆ ಗೂಡಿನಲ್ಲಿರುವ ಕೋಶದಿಂದ ಸತ್ವಯುತ ಪದಾರ್ಥಗಳಿಂದ ಬಿಸ್ಕತ್‍ಗಳು ಹಾಗೂ ಔಷಧಿ ತಯಾರಿಕೆ, ಮೀನಿನ ಆಹಾರವಾಗಿ ಬಳಕೆ ಮಾಡಲು ಕೇಂದ್ರ ಆಹಾರ ಸಂಶೋಧನಾ ಸಂಸ್ಥೆಯೊಂದಿಗಿನ ಕಾರ್ಯವು ಪ್ರಗತಿಯಲ್ಲಿದ್ದು, ಶೀಘ್ರವೇ ಮಾರುಕಟ್ಟೆಗೆ ಲಭ್ಯವಾಗುವುದು ಎಂದು ಹೇಳಿದರು.
ಸಿ.ಎಸ್.ಆರ್.ಟಿ.ಐ ಮೈಸೂರಿನ ವಿಜ್ಞಾನಿ ಡಾ.ಅರುಣಕುಮಾರ್, ಹಿಪ್ಪು ನೇರಳೆಯಲ್ಲಿನ ರೋಗ ಹಾಗೂ ಕೀಟಭಾಧೆಯಲ್ಲಿನ  ಸಮಸ್ಯೆಗಳು ಹಾಗೂ ಪರಿಹಾರಗಳನ್ನು ತಿಳಿಸಿದರು. ಹಿರಿಯ ತಾಂತ್ರಿಕ ಸಹಾಯಕ ಡಾ.ಮಲ್ಲಿಕಾರ್ಜುನ್, ರೇಷ್ಮೆ ಹುಳುಗಳಿಗೆ ತಗಲುವ ರೋಗ ಮತ್ತು ಕೀಟಬಾಧೆಗಳ ನಿಯಂತ್ರಣ ಕುರಿತು ವಿವರಿಸಿದರು. ಹಿರಿಯ ತಾಂತ್ರಿಕ ಸಹಾಯಕ ಜಸ್ಟಿನ್ ಕುಮಾರ್, ನಿವೃತ್ತ ಹಿರಿಯ ವಿಜ್ಞಾನಿ ಡಾ.ತಿಪ್ಪೇಸ್ವಾಮಿ ಅವರು ವಿಷಯ ಮಂಡನೆ ಹಾಗೂ ರೈತರ ಪ್ರಶ್ನೆಗಳಿಗೆ ಸಲಹೆ ನೀಡಿದರು.
ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನು ಸಂಶೋಧನಾ ವಿಸ್ತರಣಾ ಕೇಂದ್ರದ ವಿಜ್ಞಾನಿ ಡಾ.ವೈ.ಶ್ರೀನಿವಾಸಲು ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪಡೆದ ಕೃಷಿ ಪಂಡಿತ ಬಿ.ಜಿ.ಕೆರೆಯ ಎಸ್.ಸಿ.ವೀರಭದ್ರಪ್ಪ ಅವರನ್ನು ಸನ್ಮಾನಿಸಲಾಯಿತು. ನಿರಂಜನಮೂರ್ತಿ ನಿರೂಪಿಸಿದರು ಹಾಗೂ ಕೆ.ಬಿ.ಶಿವಣ್ಣ ವಂದಿಸಿದರು.
ಕಾರ್ಯಾಗಾರದಲ್ಲಿ ಚಿತ್ರದುರ್ಗ, ತುಮಕೂರು, ದಾವಣಗೆರೆ, ಬಳ್ಳಾರಿ, ವಿಜಯನಗರ, ಹಾವೇರಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ರೇಷ್ಮೆ ಕೃಷಿಕರು ಸೇರಿದಂತೆ ಆರು ಜಿಲ್ಲೆಗಳಿಂದ  ಒಟ್ಟು 130 ರೇಷ್ಮೆ ಕೃಷಿಕರು ಹಾಗೂ 40 ಸಿಬ್ಬಂದಿಗಳು ಹಾಜರಾಗಿದ್ದರು.
[t4b-ticker]

You May Also Like

More From Author

+ There are no comments

Add yours