ಪರಿಶಿಷ್ಟ ಪಂಗಡದ ವಿಧವೆಯ ಪುನರ್ ವಿವಾಹ  3 ಲಕ್ಷ ಪ್ರೋತ್ಸಾಹ ಧನದ ಚೆಕ್ ವಿತರಣೆ:ಓ.ಪರಮೇಶ್ವರಪ್ಪ

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ಫೆ.12:
ಪರಿಶಿಷ್ಟ ಪಂಗಡದ ವಿಧವೆಯರ ಪುನರ್ ವಿವಾಹ ಪ್ರೋತ್ಸಾಹಧನದ ಅಡಿಯಲ್ಲಿ ಹೊಳಲ್ಕೆರೆ ತಾಲ್ಲೂಕು ಚನ್ನಪಟ್ಟಣ ಗ್ರಾಮದ ಕೆ.ಮಂಜುಳಾ ಕೋಂ ರಂಗಸ್ವಾಮಿ ಅವರು ಪುನರ್ ವಿವಾಹವಾಗಿದ್ದು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಸೋಮವಾರ ರೂ.3 ಲಕ್ಷಗಳ ಪ್ರೋತ್ಸಾಹ ಧನದ ಚೆಕ್ ವಿತರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಓ.ಪರಮೇಶ್ವರಪ್ಪ, ಪರಿಶಿಷ್ಟ ಪಂಗಡದ ವಿಧವೆಯರ ಮನೋಸ್ಥೈರ್ಯವನ್ನು ಬಲಪಡಿಸಿ ಅವರಿಗೆ ಜೀವನೋಪಾಯದಲ್ಲಿ ನೆರವಾಗುವ ನಿಟ್ಟಿನಲ್ಲಿ ಪುನರ್ ವಿವಾಹವಾದಲ್ಲಿ ಅಂತಹವರಿಗೆ ಸರ್ಕಾರದ ವತಿಯಿಂದ ರೂ.3 ಲಕ್ಷಗಳ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇದು ಅತ್ಯಂತ ಉತ್ತಮವಾದ ಪರಿಣಾಮಕಾರಿ ಕಾರ್ಯಕ್ರಮವಾಗಿದೆ. ಮಹಿಳೆಯರ ಪುನಶ್ಚೇತನ ಹಾಗೂ ಆರ್ಥಿಕ ಸದೃಢತೆಯನ್ನು ಶಕ್ತಿಗೊಳಿಸಲು ಇಂತಹ ಕಾರ್ಯಕ್ರಮಗಳು ಅತ್ಯುತ್ತಮವಾಗಿವೆ ಎಂದು ತಿಳಿಸಿದ ಅವರು, ದಂಪತಿಗಳು ಜೀವನದ ಹಿಂದಿನ ಎಲ್ಲಾ ಘಟನೆಗಳನ್ನು ಮರೆತು ಸಹಬಾಳ್ವೆಯ ಮಾದರಿ ಜೀವನ ನಿರ್ವಹಣೆ ಮಾಡುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕ ದಯಾನಂದ, ವಿಷಯ ನಿರ್ವಾಹಕಿ ನಾಗರತ್ನಮ್ಮ ಇದ್ದರು.
[t4b-ticker]

You May Also Like

More From Author

+ There are no comments

Add yours