ಸಿಎಂ ಸಿದ್ದರಾಮಯ್ಯ ಅವರ ಕೆಲಸಗಳನ್ನು‌ ಜನರು ಮರೆಯಲ್ಲ:ಟಿ.ರಘುಮೂರ್ತಿ

 

ಚಳ್ಳಕೆರೆ ಕ್ಷೇತ್ರದ ಶಾಶ್ವತ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಿದ ಸಿಎಂ ಸಿದ್ದರಾಮಯ್ಯರನ್ನು ಜನರು ಮರೆಯಲು ಸಾಧ್ಯವಿಲ್ಲ: ಟಿ.ರಘುಮೂರ್ತಿ

ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ಅವರು ನೀಡಿದ ಅನುದಾನದಿಂದ ಚಳ್ಳಕೆರೆ ಕ್ಷೇತ್ರದಲ್ಲಿ ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಯಿತು ಎಂದು ಶಾಸಕ ಟಿ.ರಘುಮೂರ್ತಿ ಸ್ಮರಿಸಿದರು.

ಚಳ್ಳಕೆರೆ ಕ್ಷೇತ್ರದಲ್ಲಿ ನಾನು ಮೂರು ಬಾರಿ ಗೆಲುವು ಸಾಧಿಸಲು 2013 ರಿಂದ 2018 ರ ವರೆಗೆ ಮಾಡಿ ಅಭಿವೃದ್ಧಿ ಕಾರ್ಯಗಳಿಂದ ಎಂದು ತಿಳಿಸಲು ಬಯಸುತ್ತೇನೆ. ಅಂದು ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯ ಅವರು ಅನುದಾನ ಹೊಳೆ ಹರಿಸಿದರು ಆಗ ಚಳ್ಳಕೆರೆಯಲ್ಲಿ ನಡೆದ ಶಾಶ್ವತ ಕಾರ್ಯಗಳನ್ನು ಜನರು ಈಗಲೂ ಸಹ ನೆನೆಯುತ್ತಾರೆ.

ನಮ್ಮ ಭಾಗದ ಬಹುದಿನದ ಕನಸಾಗಿರುವ ಭದ್ರಾ ಯೋಜನೆಯಿಂದ ಈ ಭಾಗದ ಜಿಲ್ಲೆಗಳಾದ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆ ನೀರು ಒದಗಿಸುತ್ತೆ.. ಕರ್ನಾಟಕ ರಾಜ್ಯದ ಅತ್ಯಂತ ಮಹತ್ವದ ಯೋಜನೆಗಳಲ್ಲಿ ಇದೂ ಕೂಡಾ ಒಂದು.. ಮಧ್ಯ ಕರ್ನಾಟಕದ ಐದೂವರೆ ಲಕ್ಷ ಎಕರೆ ಕೃಷಿ ಪ್ರದೇಶಕ್ಕೆ ಈ ಯೋಜನೆ ನೀರು ಕೊಡಲಿದೆ. ಜೊತೆಗೆ ಈ ಭಾಗದ 367 ಕೆರೆಗಳಿಗೆ ನೀರು ತುಂಬಿಸಲಿದೆ. ಈ ಯೋಜನೆಯಿಂದ 787 ಗ್ರಾಮಗಳಿಗೆ ಪ್ರಯೋಜನ ಆಗಲಿದೆ. ಒಟ್ಟಾರೆ 75 ಲಕ್ಷ ಜನರಿಗೆ ಈ ಯೋಜನೆಯಿಂದ ನೇರವಾಗಿ ಅನುಕೂಲ ಆಗುತ್ತದೆ ಎಂದು ಅಂದಾಜು ಮಾಡಲಾಗಿದ್ದು ಈ ಯೋಜನೆಗೆ ಅತ್ಯಂತ ಹೆಚ್ಚಿಮ ಅನುದಾನ ನೀಡುವ ಮೂಲಕ ವೇಗದಿಂದ ಕೆಲಸ ಮಾಡಿದ್ದು ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ಎಂದು ಜನರು ಅರಿತುಕೊಳ್ಳಬೇಕು.
ಭದ್ರಾ ಯೋಜನೆಯಿಂದ ಚಳ್ಳಕೆರೆ ಮತ್ತು ಮೊಳಕಾಲ್ಮುರು ಕ್ಷೇತ್ರಕ್ಕೆ ವಿ.ವಿ.ಸಾಗರದಿಂದ ಶಾಶ್ವತ ಕುಡಿಯುವ ನೀರಿಗಾಗಿ 0.25 ಟಿಎಂಸಿ ನೀರನ್ನು ನೀಡಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ.

ಇತಿಹಾಸದಲ್ಲಿ ಇಂತಹ ಬರಗಾಲದಲ್ಲಿ ವಿ.ವಿ.ಸಾಗರದ ನೀರನ್ನು ವೇದಾವತಿ ನದಿ ಪಾತ್ರಕ್ಕೆ ಹರಿಸುವ ಕೆಲಸ ಮಾಡಿದ್ದು ಈ‌ ಮಹತ್ವದ ಕಾರ್ಯ ಸಿಎಂ ಕಾರಣ ಎಂದು ಪ್ರತಿಯೊಂದು ಸಿಎಂ ಕಾರ್ಯಗಳನ್ನು ಹಾಡಿಹೊಗಳಿದರು.

ಸಿಎಂ ಸಿದ್ದರಾಮಯ್ಯ ಅವರು ತುಂಗಾಭದ್ರಾ ಹಿನ್ನೀರು ಯೋಜನೆ ಮೂಲಕ ಚಳ್ಳಕೆರೆ, ಮೊಳಕಾಲ್ಮುರು, ಪಾವಗಡ ಶಿರಾ ಕ್ಷೇತ್ರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ 2013 ರಲ್ಲಿ 2300 ಕೋಟಿಗೆ ಪ್ರಾಜೆಕ್ಟ್ ಮಾಡಿಸಿ ಎರಡ್ಮೂರು ತಿಂಗಳ ಪೂರ್ಣ ಕೆಲಸ ಮುಗಿದು ನೀರು ಹರಿಯಲು ಸಿದ್ದರಾಮಯ್ಯನವರೇ ನೇರವಾಗಿ ಕಾರಣರಾಗಿದ್ದು ಚಳ್ಳಕೆರೆ ಕ್ಷೇತ್ರ ಸೇರಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜನರು ಸಿದ್ದರಾಮಯ್ಯ ಅವರ ಕೈ ಬಲಪಡಿಸಲು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರನ್ನು ಗೆಲ್ಲಿಸಲು ಕಂಕಣ ಬದ್ದವಾಗಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಬಿ.ಎನ್.ಚಂದ್ರಪ್ಪ ಅವರಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಸಂಸದರಾಗಿದ್ದ ಸಂದರ್ಭದಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಾರೆ. ಅವರ ಮಾಡಿದ ಕೆಲಸವನ್ನು ಜನರು ಮರೆತಿಲ್ಲ. ಈ. ಬಾರಿ ಎಲ್ಲಾ ಶಾಸಕರು ಒಗ್ಗಟ್ಟಿನಿಂದ ಅತ್ಯಧಿಕ ಲೀಡ್ ಕೊಡಿಸುವ ಕೆಲಸವನ್ನು ಮಾಡುತ್ತೇವೆ. ಚಂದ್ರಪ್ಪ ಗೆಲುವನ್ನು ಯಾರು ತಪ್ಪಿಸಲು ಆಗಲ್ಲ. ಬಿಜೆಪಿ ಆಡಳಿತ ಬೆಲೆ ಏರಿಕೆಯಿಂದ ಜನರು ರೋಸಿ ಹೋಗಿದ್ದು ಬದಲಾವಣೆ ಬಯಸಿದ್ದಾರೆ ಎಂದು ಹೇಳಿದರು.

[t4b-ticker]

You May Also Like

More From Author

+ There are no comments

Add yours