ಎಲ್ಲಾ ಕಡೆಯಲ್ಲಿ ಜನ 30 ವರ್ಷದ ಸಮಸ್ಯೆ ಹೇಳತ್ತಿದ್ದಾರೆ:ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

 

ಚಿತ್ರದುರ್ಗ : 30 ವರ್ಷದಿಂದ ಇರುವ ಸಮಸ್ಯೆಯನ್ನು ಸರಿಪಡಿಸುವ ಅದಕ್ಕೆ ತೇಪೇ ಹಚ್ಚುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಶಾಸಕ ಕೆ.ಸಿ.ವಿರೇಂದ್ರ ತಿಳಿಸಿದರು.

ನಗರದ ಐಯ್ಯಣ್ಣ ಪೇಟೆಯ ವಾಸವಿ ಸೂಲ್ಕ್ ಮುಂಭಾಗದ ತ್ಯಾಗರಾಜ್ ಮಾರುಕಟ್ಟೆ ನಿರ್ಮಾಣದ ಶಂಕುಸ್ಥಾಪನೆಯನ್ನು ನೇರವೇರಿಸಿ ಮಾತನಾಡಿದ ಶಾಸಕರು, ನಾನು ಈಗ ಹೊಸದಾಗಿ ಶಾಸಕನಾಗಿದ್ದೇನೆ, ಹೋದ ಕಡೆಯಲ್ಲಿ ಎಲ್ಲಾ 30 ವರ್ಷದ ಸಮಸ್ಯೆಯನ್ನು ಜನತೆ ಹೇಳುತ್ತಾರೆ ಅವುಗಳನ್ನು ಸರಿಪಡಿಸುವ ಮತ್ತು ತೇಪೇ ಹಚ್ಚುವ ಕಾರ್ಯವನ್ನು ಮಾಡಲಾಗುತ್ತಿದೆ. ಅದಕ್ಕೆ ಎಲ್ಲರೂ  ಸಹಕಾರವನ್ನು ನೀಡಬೇಕು, ಹಿರಿಯರು ಸಲಹೆಯನ್ನು ನೀಡಬೇಕು, ನಮ್ಮ ತಂದೆಯವರೊಂದಿಗೆ ಓಡಾಡಿದವರು ಸಹಾ ಇದ್ದಾರೆ. ಸಲಹೆಯನ್ನು ನೀಡಿ ಮಾಡಿಕೊಂಡು ಹೋಗುತ್ತೇನೆ ಎಂದರು.

ಈಗ ಚುನಾವಣೆ ಮುಗಿದಿದೆ, ನನಗೆ ಎಷ್ಟು ಮತ ಬಂದಿತ್ತು ಯಾರು ಮತವನ್ನು ಹಾಕಿದ್ದಾರೆ ಎಂಬುದು ನನ್ನ ಗಮನದಲ್ಲಿ ಇಲ್ಲ, ಇದರ ಬಗ್ಗೆ ಯೋಚನೆಯನ್ನು ಸಹಾ ಮಾಡುವುದಿಲ್ಲ, ಚಿತ್ರದುರ್ಗದ ಸಮಸ್ತ ಜನತೆ ಹೆಚ್ಚಿನದಾಗಿ ನನ್ನನು ಆಯ್ಕೆ ಮಾಡಿದ್ದಾರೆ. ಈಗ ನಾನು ಇಡೀ ಚಿತ್ರದುರ್ಗಕ್ಕೆ ಶಾಸಕ, ಆ ಭಾಗದಲ್ಲಿ ಮತಗಳು ಜಾಸ್ತಿ ಬಂದಿತ್ತು ಈ ಭಾಗದಲ್ಲಿ ಕಡಿಮೆ ಬಂದಿತ್ತು ಎಂಬ ಮಾತುಗಳು ನನ್ನ ಬಳಿ ಇಲ್ಲ, ಅದನ್ನು ಯಾರು ಸಹಾ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ತ್ವರಿತಗತಿಯಲ್ಲಿ ಚಿತ್ರದುರ್ಗವನ್ನು ಅಭೀವೃದ್ದಿಯ ಕಡೆಗೆ ತೆಗೆದುಕೊಂಡು ಹೋಗೋಣ ನಾವೆಲ್ಲಾ ಸೇರಿ ನವ ಚಿತ್ರದುರ್ಗವನ್ನು ನಿರ್ಮಾಣ ಮಾಡೋಣ ಎಂದು ಶಾಸಕ ವಿರೇಂದ್ರ ತಿಳಿಸಿದರು.
ನಾನು ಇಲ್ಲಿಗೆ ಬರುವಾಗ ಹಲವಾರು ಜನತೆ ಈ ಮಾರುಕಟ್ಟೆ ನಿರ್ಮಾಣದ ಬಗ್ಗೆ ವಿಧ ವಿಧವಾದ ಮಾತುಗಳನ್ನು ಹೇಳಿದರು, ಅವರಿಗೆ ಮಾತನ್ನು ನೀಡಿದ್ದೇನೆ ತ್ವರಿತಗತಿಯಲ್ಲಿ ಮಾರುಕಟ್ಟೆಯನ್ನು ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ಸೂಚನೆ ನೀಡಿದ ಶಾಸಕ ಕೆ.ಸಿ.ವಿರೇಂದ್ರ ಈ ಜಾಗದ ಕೂನೆಯಲ್ಲಿ ಮರವೊಂದು ಇದನ್ನು ಶಾಲೆಯ ಮಕ್ಕಳು ಬಳಕೆ ಮಾಡುತ್ತಾರೆ ಈ ಹಿನ್ನಲೆಯಲ್ಲಿ ಗುತ್ತಿಗೆದಾರರು ಅದನ್ನು ಉಳಿಸಿಕೊಂಡು ಮಾರುಕಟ್ಟೆಯನ್ನು ನಿರ್ಮಾಣ ಮಾಡುವಂತೆ ತಿಳಿಸಿದರು.
ನಗರಸಭೆಯ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಮಾತನಾಡಿ, ಈ ಮಾರುಕಟ್ಟೆ ಪುರಾತನವಾಗಿದ್ದು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಈ ಮಾರುಕಟ್ಟೆ ಈ ಹಿಂದೆ ಚಿತ್ರದುರ್ಗಕ್ಕೆ ಒಂದೇ ಆಗಿತ್ತು, ಇದನ್ನು ಉತ್ತಮವಾಗಿ ನಿರ್ಮಾಣ ಮಾಡಬೇಕಿದೆ, ಶಾಸಕರ ಬಗ್ಗೆ ಈ ಹಿಂದೆ ಹಲವಾರು ಜನತೆ ವಿವಿಧ ರೀತಿಯಲ್ಲಿ ಮಾತನಾಡಿದ್ದರು, ಈಗ ಅವರ ಕಾರ್ಯು ವೈಖರಿ ಏನು ಎಂಬುದು ಗೊತ್ತಾಗುತ್ತಿದೆ. ಚಿತ್ರದುರ್ಗಕ್ಕೆ ಅತಿ ಅಗತ್ಯವಾದ ಮೆಡಿಕಲ್ ಕಾಲೇಜು, ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ಬಳಿ ಹೋಗಿ ಅನುಮತಿಯನ್ನು ತಂದಿದ್ದಾರೆ. ಇವುಗಳು ತ್ವರಿತಗತಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ. ಯುವ ಜನತೆ ಬದಲಾಗಬೇಕಿದೆ, ಒಂದೇ ಪಕ್ಷಕ್ಕೆ ನಿಷ್ಠೆಯಾಗಬಾರದು, ವಿರೇಂದ್ರರವರಿಗೆ ಶೇ.೭೫ ರಷ್ಟು ಮತಗಳು ಬಂದಿದೆ. ಚಿತ್ರದುರ್ಗದಲ್ಲಿ ಇನ್ನೂ ಮುಂದೆ ತ್ವರಿತಗತಿಯಲ್ಲಿ ಕಾಮಗಾರಿಗಳು ನಡೆಯಲಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಾಗರಾಜ್, ನಗರಸಭಾ ಸದಸ್ಯರಾದ ಹರೀಶ್, ವೆಂಕಟೇಶ್, ಮಾಜಿ ಸದಸ್ಯರಾದ ಡಿ.ಸಿ.ಸುರೇಶ್, ರಾಜೇಶ್, ಕಾಂಗ್ರೇಸ್ ಮುಖಂಡರಾದ ಎನ್.ಡಿ.ಕುಮಾರ್, ನಿತಿನ್, ಇಫಾಲ್, ಗುತ್ತಿಗೆದಾರರಾದ ಕುಮಾರ್, ಹೇಮಂತ್ ವಸಂತ ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours