ಪಪ್ಪಾಯ ಬೆಳೆಯಲ್ಲಿ ಅನುಸರಿಸಬೇಕಾದ ಬೇಸಾಯ ಕ್ರಮಗಳು

 

ಚಿತ್ರದುರ್ಗ,ಫೆಬ್ರವರಿ22:
 “ಪಪ್ಪಾಯ ಬೆಳೆಯಲ್ಲಿ ಅನುಸರಿಸಬೇಕಾದ ಬೇಸಾಯ ಕ್ರಮಗಳು” ಕುರಿತು ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ (ಹಾರ್ಟಿ ಕ್ಲಿನಿಕ್) ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ಸಲಹೆ ನೀಡಲಾಗಿದೆ.
ಗಿಡನೆಡುವ ಕ್ರಮ: ಪಪ್ಪಾಯ ಬೆಳೆಯುವ ಪ್ರದೇಶವನ್ನು ಚೆನ್ನಾಗಿ ಉಳುಮೆ ಮಾಡಿ ಕಳೆರಹಿತವಾಗಿ ಭೂಮಿಯನ್ನು ಹದಮಾಡಿಕೊಂಡು 8*8 ಅಡಿ ಅಂತರದಲ್ಲಿ 11/2*11/2 ಅಡಿ ಗ್ರಾತದ ಗುಂಡಿಗಳನ್ನು ತೆಗೆಯಬೇಕು. ಆ ಗುಂಡಿಗಳಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ಮಣ್ಣುಗಳನ್ನು ಸಮ ಪ್ರಮಾಣದಲ್ಲಿ ಬೆರೆಸಿ ತುಂಬಬೇಕು.
 ಸಸಿಗಳನ್ನು  ಗುಂಡಿಯ ಮಧ್ಯಭಾಗದಲ್ಲಿ ನೆಡಬೇಕು. ಸಸಿಗಳಿಗೆ ನಂತರ ಆಸರೆ ಕಡ್ಡಿಯನ್ನು ಕಟ್ಟಬೇಕು. ಪಪ್ಪಾಯ ಸಸಿ ನಾಟಿಮಾಡಲು ಜೂನ್ ಮತ್ತು ಜುಲೈ ತಿಂಗಳು ಉತ್ತಮವಾದ ಕಾಲವಾಗಿದೆ.
ಗೊಬ್ಬರ: ಪಪ್ಪಾಯ ಗಿಡದಲ್ಲಿ ಕಾಂಡದ ಮತ್ತು ಹೂವಿನ ಬೆಳವಣಿಗೆಯೂ ಒಟ್ಟಿಗೆ ಇರುತ್ತದೆ. ಪ್ರತಿಯೊಂದು ಎಲೆಯೂ ಹೂ  ಆಗುವ ಸಾಮಥ್ರ್ಯವನ್ನು ಹೊಂದಿರುತ್ತದೆ. ಪ್ಪಪಾಯ ಗಿಡ ಯಾವಾಗಲೂ ಬೆಳೆವಣೆಗೆಯಲ್ಲಿ ಇರುವುದರಿಂದ ಪೂರಕವಾಗಿ ಸಾಕಷ್ಟು ಪೋಷಕಾಂಶಗಳನ್ನು ನೀಡುವುದು ಅತ್ಯವಶ್ಯಕ. ನಿಗದಿತ ಅವಧಿಯ ಅಂತರದಲ್ಲಿ ಪೋಷಕಾಂಶವನ್ನು ಕೊಡುತ್ತಿರಬೇಕು. ಸಂಶೋಧನೆಗಳ ಪ್ರಕಾರ ರಂಜಕ ಪೋಷಕಾಂಶ ಪಪ್ಪಾಯಿಯ ಇಳುವರಿಯಲ್ಲಿ ಸಾರಜನಕ, ಪೊಟ್ಯಾಷ್ ಪೋಷಕಾಂಶಗಳಿಗಿಂತ ಹೆಚ್ಚಿನ ಪರಿಣಾಮ ಬೀರುತ್ತದೆ. ಒಂದು ಗಿಡಕ್ಕೆ ಒಂದು ವರ್ಷಕ್ಕೆ 500 ಗ್ರಾಂ ಸಾರಜನಕ ಮತ್ತು 250 ಗ್ರಾಂ ರಂಜಕ ನೀಡಬೇಕು. ಪ್ರತಿ ಪಪ್ಪಾಯ ಗಿಡಕ್ಕೂ ಎರಡು ತಿಂಗಳ ಅಂತರದಲ್ಲಿ ರಸಗೊಬ್ಬರ ನೀಡಬೇಕು.
ಅಮೋನಿಯಂ ಸಲ್ಫೇಟ್ ಅನ್ನು ಪ್ರತಿ ಎರಡು ತಿಂಗಳಿಗೊಮ್ಮೆ 200 ಗ್ರಾಂ ನೀಡಬೇಕು. ಒಂದು ವರ್ಷದಲ್ಲಿ ಒಟ್ಟು 1.200 ಕಿ.ಗ್ರಾಂ ರಸಗೊಬ್ಬರ ನೀಡಬೇಕು. ಸಿಂಗಲ್ ಸೂಪರ್ ಫಾಸ್ಫೇಟ್ ಅನ್ನು ಎರಡು ತಿಂಗಳಿಗೊಮ್ಮೆ  90 ಗ್ರಾಂ ನೀಡಬೇಕು. ಒಂದು ವರ್ಷದಲ್ಲಿ ಒಟ್ಟು 0.540 ಕಿ.ಗ್ರಾಂ ರಸಗೊಬ್ಬರ ನೀಡಬೇಕು.
ಮ್ಯೂರಿಯೇಟ್ ಆಫ್ ಪೊಟ್ಯಾಷ್‍ಅನ್ನು ಎರಡು ತಿಂಗಳಿಗೊಮ್ಮೆ 140 ಗ್ರಾಂ ನೀಡಬೇಕು.  ಒಂದು ವರ್ಷದಲ್ಲಿ ಒಟ್ಟು 840 ಕಿ.ಗ್ರಾಂ ರಸಗೊಬ್ಬರ ನೀಡಬೇಕು.
 ರಸಗೊಬ್ಬರಗಳನ್ನು ಗಿಡದ ಪಾತಿಗಳಲ್ಲಿ ನೀಡಿ, ಚೆನ್ನಾಗಿ ಮಣ್ಣಿನಲ್ಲಿ ಕಲಸಬೇಕು. ಪ್ರತಿ ಗಿಡಕ್ಕೆ ಪ್ರತಿ ವರ್ಷ ಎರಡು ಬುಟ್ಟಿ ಕೊಟ್ಟಿಗೆ ಗೊಬ್ಬರ ಕೊಡಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8310656925 ಹಾಗೂ ತೋಟಗಾರಿಕೆ ಅಧಿಕಾರಿಗಳನ್ನು, ಜಿಲ್ಲಾ ಹಾರ್ಟಿಕ್ಲಿನಿಕ್‍ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours