ಹೊಳಲ್ಕೆರೆ ತಾಲೂಕಿನ ವಿವಿಧ ಕಡೆಗಳಲ್ಲಿ ನಮ್ಮ ಮನೆ ತಿರಂಗ ಕಾರ್ಯಕ್ರಮ

 

ವರದಿ: ಎಸ್.ವೇದಮೂರ್ತಿ
ಹೊಳಲ್ಕೆರೆ :  ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಲ್ಲಿ ನಮ್ಮ ಮನೆ ತಿರಂಗ ಕಾರ್ಯಕ್ರಮ ಕುರಿತು ಜನಜಾಗೃತಿಗೊಳಿಸುವ ನಿಟ್ಟಿನಲ್ಲಿ ಶಾಲೆ ಕಾಲೇಜು ಪುರಸಭೆ ವ್ಯಾಪ್ತಿಗಳ ವಾರ್ಡ್ಗಳಲ್ಲಿ ಉಚಿತವಾಗಿ ತಿರಂಗ ಧ್ವಜಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಪುರಸಭೆಯ ವ್ಯಾಪ್ತಿಯಲ್ಲಿರುವ ಎಲ್ಲಾ ವಾರ್ಡ್ಗಳಲ್ಲಿ ಪುರಸಭೆಯಿಂದ ಸದಸ್ಯರು ಉಚಿತವಾಗಿ ತಿರಂಗ ಧ್ವಜಗಳನ್ನು ಮನೆಗಳಿಗೆ ತೆರಳಿ ವಿತರಣೆ ಮಾಡಿದರು. ಇನ್ನು ತಾಲೂಕಿನ ಹಲವಾರು ಶಾಲೆ ಕಾಲೇಜುಗಳಲ್ಲಿ ತಿರಂಗ ಧ್ವಜಗಳ ಪ್ರದರ್ಶನ ಕೈಗೊಳ್ಳುವ ಮೂಲಕ ಹರ್ ಘರ್ ತಿರಂಗ ಕಾರ್ಯಕ್ರಮ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.

ಇನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳು ಪಟ್ಟಣದಲ್ಲಿ ತಿರಂಗ ಜಾಗೃತಿ ಆಭಿಯಾನ ಕೈಗೊಂಡು ಜನರಲ್ಲಿ ಜಾಗೃತಿ ಮೂಡಿಸಿದರು. ತಾಲೂಕು ವಿಶ್ವ ಹಿಂದು ಪರಿಷತ್ ಪಟ್ಟಣದ ಗಣಪತಿ ಕಲ್ಯಾಣ ಮಂಟಪದಿAದ ಕಾಲಭೈರವೇಶ್ವರ ದೇವಸ್ಥಾನ, ಬಸ್ ನಿಲ್ದಾಣ ಸೇರಿದಂತೆ ಪಟ್ಟಣದ ರಾಜಬೀದಿಗಳಲ್ಲಿ ತಿರಂಗ ಯಾತ್ರ ಕೈಗೊಂಡು ಜನಜಾಗೃತಿ ಮೂಡಿಸಲಾಗಿತ್ತು. ತಾಲೂಕಿನ ಶಿವಗಂಗ ವಿದ್ಯರತ್ನ ಶಾಲೆಯ ವಿದ್ಯಾರ್ಥಿಗಳಿಂದ ಸಸಿಗಳನ್ನು ಹಾಕುವ ಮೂಲಕ ತಿರಂಗ ಕುರಿತು ಜಾಗೃತಿ ಮೂಡಿಸಲಾಗಿತ್ತು.
ಪುರಸಭೆ ವ್ಯಾಪ್ತಿಯಲ್ಲಿ ಪುರಸಭೆ ಅಧ್ಯಕ್ಷ ಆರ್.ಎ.ಆಶೋಕ್, ಉಪಾಧ್ಯಕ್ಷ ಕೆ.ಸಿ.ರಮೇಶ್, ಸದಸ್ಯರಾದ ಹೆಚ್.ಆರ್.ನಾಗರತ್ನವೇದಮೂರ್ತಿ, ಪಿ.ಆರ್.ಮಲ್ಲಿಕಾರ್ಜುನ್, ಡಿ.ಎಸ್.ವಿಜಯ್, ಬಿ.ಎಸ್.ರುದ್ರಪ್ಪ ಎಲ್.ವಿಜಯಸಿಂಹ ಖಾಟ್ರೋತ್, ಮಮತ ಜಯಸಿಂಹ ಖಾಟ್ರೋತ್, ಪಿ.ಹೆಚ್.ಮುರುಗೇಶ್, ಶಬೀನ ಆಶ್ರವುಲ್ಲಾ, ಸೈಯದ್ ಸಜೀಲ್, ಸೈಯದ್ ಮನ್ಸೂರ್, ಪೂರ್ಣೀಮಾ ಬಸವರಾಜ್, ಸುಧಾಬಸವರಾಜ್, ಸವಿತ ನರಸಿಂಹಖಾಟ್ರೋತ್, ಬಿ.ವಸಂತ ಆರ್.ರಾಜಪ್ಪ, ನಾಮನಿರ್ದೇಶಿತ ಸದಸ್ಯರಾದ ಕೆ.ಆರ್.ರಾಜಪ್ಪ, ಹೆಚ್.ಮಹೇಶ್, ಮುಖ್ಯಾಧಿಕಾರಿ ಎ.ವಾಸಿಂ, ಆರೋಗ್ಯಾಧಿಕಾರಿ ಶೌಕತ್ ಅಲಿ, ನಾಗಭೂಷನ್, ದೇವರಾಜ್, ಲೋಕೇಶ್, ಕುಮಾರ್, ರವಿಕುಮಾರ್ ಸೇರಿದಂತೆ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಶಿವಮೂರ್ತಿ, ಕಾರ್ಯದರ್ಶಿ ರುದ್ರಪ್ಪ, ತಾ.ಪಂ.ಮಾಜಿ ಅಧ್ಯಕ್ಷ ಮೋಹನ್ ನಾಗರಾಜ್, ವಕೀಲರಾದ ಎಸ್.ವೇದಮೂರ್ತಿ, ವಿಶ್ವ ಹಿಂದು ಪರಿಷತ್ ನಿಂದ ಶಿವಮೊಗ್ಗ ವಲಯ ಸಂಚಾಲ ಚಂದ್ರಶೇಖರ್, ಹಿಂದು ಮಹಾಗಣಪತಿ ಕಾರ್ಯದರ್ಶಿ ಬೈರೇಶ್ ಸೇರಿದಂತೆ ಹಲವಾರು ನಾಗರಿಕರು ಪಾಲ್ಗೊಂಡಿದ್ದರು.

[t4b-ticker]

You May Also Like

More From Author

+ There are no comments

Add yours