ಎಲ್ಲಾ ಸಮಾಜದವರ ಹಿತಾ ಕಾಯುವ ಕೆಲಸ ಬಿಜೆಪಿಯಿಂದ ಮಾತ್ರ ಸಾಧ್ಯ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ:ಒಂದೇ ಜಾತಿಗೆ ಸಿಮೀತವಾಗದೇ ಎಲ್ಲಾ ಧರ್ಮ ಮತ್ತು ಜಾತಿಯನ್ನು ಸಮಾನವಾಗಿ ಕಾಣುವ ಏಕೈಕ ಪಕ್ಷ  ಬಿಜೆಪಿ ಆಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ತಾಲೂಕಿನ ಮಲ್ಲಪುರ ಗೊಲ್ಲರಹಟ್ಟಿಯಲ್ಲಿ  ಬಿಜೆಪಿ ಪಕ್ಷದ ವತಿಯಿಂದ ಏರ್ಪಡಿಸಿದ್ದ ಬಿಜೆಪಿ ಬೂತ್ ವಿಜಯ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಡೀ ದೇಶದಲ್ಲಿ ಕೇವಲ ಚುನಾವಣೆಗೆ ಅಷ್ಟೆ ಸಿಮೀತವಾಗದೇ  ಸದಾ ಒಂದಲ್ಲ ಒಂದು ಕಾರ್ಯಕ್ರಮ ಮೂಲಕ ಜನರ ಮಧ್ಯೆ ಬಿಜೆಪಿ ಪಕ್ಷ ಕೆಲಸ ಮಾಡಿಕೊಂಡು ಬರುತ್ತಿದೆ. ದೇಶದಲ್ಲಿ ಶಾಂತಿ ನೆಲೆಸಬೇಕೆಂದರೆ ಅದು ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ. ಎಲ್ಲಾ ಜಾತಿಗಳಿಗೆ ಸಮಾನವಾಗಿ ಅವಕಾಸ ಕಲ್ಪಿಸುವ ಪಕ್ಷವಾಗಿ ಹೊರಹೊಮ್ಮಿದೆ.
ನಮ್ಮ ನೆಚ್ಚಿನ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಭಾರತ ದೇಶಕ್ಕೆ ಒಂದು ಹೆಮ್ಮೆ ತಂದಿದ್ದಾರೆ‌. ಪ್ರಪಂಚದ ಇತರೆ ದೇಶಗಳು ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದ್ದಾರೆ. ನಮ್ಮ ವಿರೋಧ ಪಕ್ಷ ಅಧಿಕಾರ ಇದ್ದ ಸಂದರ್ಭದಲ್ಲಿ ಪ್ರಪಂಚದ ಇತರೆ ದೇಶಗಳು ನಮ್ಮ ಭಾರತವನ್ನು ಗೇಲಿ ಮಾಡಿತ್ತಿದ್ದರು. ಆದರೆ ಮೋದಿ ಪ್ರಧಾನಿಯಾಗಿ  ಚೀನಾ ಸೇರಿ ಎಲ್ಲಾ ದೇಶಗಳ ನಮ್ಮ ಭಾರತದ ಬಗ್ಗೆ ಮಾತನಾಡಲು ಯೋಚನೆ ಮಾಡುವಂತಹ ಪರಿಸ್ಥಿತಿ ಮೋದಿ ನಿರ್ಮಾಣ ಮಾಡಿದ್ದಾರೆ.
ಕೋವಿಡ್ ನಿಂದ ನಲುಗಿದ ಭಾರತದ 83 ಕೋಟಿ ಜನತೆ ಉಚಿತವಾಗಿ ಅಕ್ಕಿ ನೀಡುತ್ತಿರುವುದು ಪ್ರಧಾನಿ ಮೋದಿ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. 120 ಕೋಟಿ ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಮುಖಾಂತೆವ ಜನರ ಆರೋಗ್ಯ ಕಾಪಾಡುವ ಕೆಲಸ ಕೇಂದ್ರ ಸರ್ಕಾರ ಮಾಡಿರುವುದ ಜನರು ಮರೆತಿಲ್ಲ ಎಂದರು.
ರೈತರಿಗೆ ಕೇಂದ್ರ ಸರ್ಕಾರದಿಂದ 6 ಸಾವಿರ, ರಾಜ್ಯ  ಸರ್ಕಾರದಿಂದ 4 ಸಾವಿರ ಒಟ್ಟು ರೈತರಿಗೆ ಬಿತ್ತನೆಗೆ ಅನುಕೂಲವಾಗಲಿದೆ ಎಂದು ಬಿಜೆಪಿ ಸರ್ಕಾರ ಪ್ರತಿ ವರ್ಷ  ಒಟ್ಟು 10 ಸಾವಿರ ರೈತರ ಖಾತೆಗೆ ಹಣ ಜಮಾವಾಗುತ್ತದೆ. ಫಸಲ್ ಭೀಮಾ ಯೋಜನೆಯಿಂದ ಲಕ್ಷಾಂತರ ರೈತರಿಗೆ ಬೆಳೆಯ ವಿಮೆ ಸೌಲಭ್ಯ ದೊರಕಿದೆ. ರಾಜ್ಯ ಸರ್ಕಾರದಿಂದ ರೈತರ, ಕಾರ್ಮಿಕರ, ಕೂಲಿ ಮಾಡುವವರ  ಮಕ್ಕಳಿಗೆ ಸ್ಕಾಲರ್ಶಿಪ್ ವ್ಯವಸ್ಥೆ ಮಾಡಿದ್ದ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲಿದೆ‌.
ಮೋದಿ ಅವರು ಕಾಶ್ಮೀರಕ್ಕೆ ವಿಶೇಷ ಸ್ಥಾನ‌ಮಾ‌ನ ನೀಡಿದ್ದು ಐತಿಹಾಸಿಕನ ಘಳಿಗೆ ಆಗಿದೆ. ಮುಂದಿನ ದಿನದಲ್ಲಿ ಮತ್ತೆ ಬಿಜೆಪಿ ಕೇಂದ್ರದಲ್ಲಿ  ಅಧಿಕಾರಕ್ಕೆ ಬಂದರೆ  ಪಾಕಿಸ್ತಾನ ಒತ್ತುವರಿ ಮಾಡಿಕೊಂಡಿರುವ  ಗಡಿಯನ್ನು ಮತ್ತೆ ಮರಳಿ ಪಡೆಯುವ ಕೆಲಸ ಮಾಡಲಾಗುತ್ತದೆ.

ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಸಾವಿರಾರು ಕೋಟಿ ಹಣದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಯಾವುದೇ ಜಾತಿಯನ್ನು ನೋಡದೆ ದ್ವೇಷ ರಾಜಕಾರಣ ಮಾಡದೇ ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ರಸ್ತೆಗಳು ಪಾರ್ಕ್ ಗಳು,  ಚಕ್ ಡ್ಯಾಂ ಗಳು, ಅಲಂಕಾರಿಕ ಬೀದಿ ದೀಪಗಳು, ಶಾಲಾ ಕಟ್ಟಡಗಳು, ಮನೆಗಳು ಕ್ಷೇತ್ರ ಅಭಿವೃದ್ಧಿಗೆ ಐದು ವರ್ಷ ಶ್ರಮಿಸಿದ್ದೇನೆ.  ಜೊತೆಗೆ
ಚಿತ್ರದುರ್ಗ ಮತ್ತು ಹಿರಿಯೂರು ವಿಧಾನಸಭಾ ಕ್ಷೇತ್ರ ಎಲ್ಲಾ  ಹಳ್ಳಿಗಳಿಗೆ ವಿ.ವಿ.ಸಾಗರ ನೀಡಲು ಸಿಎಂ ಬಸವರಾಜ್ ಬೊಮ್ಮಾಯಿ ಅವರು   595ಕೋಟಿ ಹಣವನ್ನು ಸರ್ಕಾರ ನೀಡಿರುವುದು ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಆಗಿಲಿದ್ದು ಮುಂದಿನ ದಿನದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಎಲ್ಲಾರೂ ಶ್ರಮಿಸಿ ಎಂದು ಕರೆ ನೀಡಿದರು.
 ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಆಗಿರುವ ಅಭಿವೃದ್ಧಿ ಯೋಜನೆಗಳನ್ನು  ಪ್ರತಿ ಮನೆಗೆ ಮುಟ್ಟಿಸುವ ಕೆಲಸ  ನಮ್ಮ ಕಾರ್ಯಕರ್ತರು ಮಾಡದಾಗ ನಾವು ಮರಳಿ ಅಧಿಕಾರಕ್ಕೆ ಬಂದು ವಿಜಯೋತ್ಸವ ಆಚರಿಸಲು ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ‌. ಕೋವಿಡ್  ಲಸಿಕೆ, ಆಯುಷ್ಮಾನ್ ಭಾರತ್ ಕಾರ್ಡ, ಉಚಿತ ಪಡಿತರ ಯೋಜನೆ, ರೈತರ 6 ಸಾವಿರ ಯೋಜನೆ, ಹೌಸ್ ಫರ್ ಹಾಲ್  ಮತ್ತು ಕ್ಷೇತ್ರದ ಶಾಸಕರ ಅಭಿವೃದ್ಧಿ  ಕಾರ್ಯವನ್ನು  ಜನರಿಗೆ ಮನವರಿಕೆ ಮಾಡಿದರೆ ಮಾತ್ರ ಪಕ್ಷ ಬಲಗೊಂಡು ಜನರು ಪರಿವರ್ತನೆ ಆಗಿ ಬಿಜೆಪಿ ಪರ ಮತ ಚಲಾಯಿಸುತ್ತಾರೆ ಅದರ ನಿಟ್ಟಿನಲ್ಲಿ  ಕೆಲಸ ಮಾಡಬೇಕಿದೆ ಎಂದು ಕಾರ್ಯಕರ್ತರಿಗೆ ತಿಳಿಸಿದರು‌.
ಮಲ್ಲಪುರ ಗೊಲ್ಲರಹಟ್ಟಿ   ಬೂತ ಅಧ್ಯಕ್ಷ ತಿಪ್ಪೇಸ್ವಾಮಿ ಅವರ ಮನೆಯ ಪಕ್ಷದ ಬಾವುಟ ಹಾರಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅಧ್ಯಕ್ಷತೆ ಕಲ್ಲೇಶಯ್ಯ ಗ್ರಾಮಾಂತರ ಮಂಡಲ ಅಧ್ಯಕ್ಷರು, ಈ ಸಂದರ್ಭದಲ್ಲಿ
ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಜಿ.ಟಿ.ಸುರೇಶ್, ಮುಖಂಡ ಸಿದ್ದಾರ್ಥ ಗುಂಟಾರ್ಪಿ,   ಗ್ರಾಮಂತರ ಮಂಡಲ‌ ಅಧ್ಯಕ್ಷ ಕಲೇಶಯ್ಯ,ಗ್ರಾಮಂತರ ಮಂಡಲ ಉಪಾಧ್ಯಕ್ಷರಾದ ಚಂದ್ರಿಕಾ ಲೋಕನಾಥ್, ಮಂಡಲ ಉಸ್ತುವಾರಿಗಳಾದ ಶ್ರೀಮತಿ ಎ. ರೇಖಾ, ಶಿವಣ್ಣ ಚಾರ್, ಪ್ರಧಾನ ಕಾರ್ಯದರ್ಶಿಗಳಾದ ವಸಂತ, ವೀರೇಶ್, ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು  ಗ್ರಾಮ ಪಂಚಾಯತಿ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.
[t4b-ticker]

You May Also Like

More From Author

+ There are no comments

Add yours