ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಎನ್‍ಎಸ್‍ಎಸ್ ಸಹಕಾರಿ -ಪ್ರಾಂಶುಪಾಲ ಪ್ರೊ.ಬಿ.ಟಿ. ತಿಪ್ಪೇರುದ್ರಸ್ವಾಮಿ

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ಸೆ.27:
ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಎನ್‍ಎಸ್‍ಎಸ್ ಸಹಕಾರಿ ಎಂದು ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಬಿ.ಟಿ. ತಿಪ್ಪೇರುದ್ರಸ್ವಾಮಿ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನ ಅಂಬೇಡ್ಕರ್ ಜ್ಞಾನ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಸೇವಾ ಯೋಜನೆ-1 ಮತ್ತು 2ರ ವತಿಯಿಂದ ಆಯೋಜಿಸಿದ್ದ ಎನ್‍ಎಸ್‍ಎಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆ ಸಮೃದ್ಧ ರಾಷ್ಟ್ರ ನಿರ್ಮಾಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ ಎಂದು ತಿಳಿಸಿದ ಅವರು, ರಾಷ್ಟ್ರೀಯ ಸೇವಾ ಯೋಜನೆಯ ಇತಿಹಾಸ ಮತ್ತು ಅದರ ಪ್ರಸ್ತುತತೆ ಬಗ್ಗೆ ತಿಳಿಸಿದರು.
ಸಂಜೀವನಿ ಜೀವ ರಕ್ಷಕ ಟ್ರಸ್ಟ್ ಅಧ್ಯಕ್ಷೆ ಡಾ. ಸೌಮ್ಯ ಮಂಜುನಾಥ್ ಮಾತನಾಡಿ,  ಮಹಾತ್ಮ ಗಾಂಧಿಯವರ ಜನ್ಮ ಶತಮಾನೋತ್ಸವದ ಸ್ಮರಣೆಗಾಗಿ ಸ್ಥಾಪಿಸಲ್ಪಟ್ಟ ರಾಷ್ಟ್ರೀಯ ಸೇವಾ ಯೋಜನೆಯ ಸದೃಢ ಸಮಾಜ ನಿರ್ಮಾಣದಲ್ಲಿ ಅಪೂರ್ವ ಕೊಡುಗೆ  ನೀಡುತ್ತದೆ. ಪ್ರಸುತ್ತ ಸನ್ನಿವೇಶದಲ್ಲಿ ಎನ್‍ಎಸ್‍ಎಸ್ ಶಿಬಿರಗಳ ಆಯೋಜನೆಯಿಂದ ನೈರ್ಮಲ್ಯ ಭಾತೃತ್ವ, ವ್ಯಕ್ತಿತ್ವ ವಿಕಸನ ಮುಂತಾದ ಪ್ರಯೋಜನಗಳು ಲಭಿಸುತ್ತವೆ ಎಂದರು.
ಕಾಲೇಜು ಪ್ರಾಧ್ಯಾಪಕರ ಸಂಘದ ಕಾರ್ಯದರ್ಶಿ ಪ್ರೊ.ಎಲ್. ನಾಗರಾಜಪ್ಪ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಇಂತಹ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ  ಹೊಂದಾಣಿಕೆ ಮನೋಭಾವ, ಜ್ಞಾನ, ನಾಯಕತ್ವ ಗುಣ ಮುಂತಾದವು ಮೂಡುತ್ತವೆ ಎಂದು ಅಭಿಪ್ರಾಯಪಟ್ಟರು.
ವೇದಿಕೆ ಕಾರ್ಯಕ್ರಮ ಮುನ್ನ ಕಾಲೇಜಿನ ಮುಂಭಾಗದಲ್ಲಿ ಧ್ವಜಾರೋಹಣ ನೆರೆವೆರಿತು.ರಾಮೇಶ್ವರ್ ಮತ್ತು ಪವನ್ ಅವರ ಆಕರ್ಷಕ ಕವಾಯತು ನೆರೆದಿದ್ದವರ ಮನಸೆಳೆಯಿತು.
ಕಾರ್ಯಕ್ರಮದಲ್ಲಿ ಪತ್ರಾಂಕಿತ ವ್ಯವಸ್ಥಾಪಕ ಮಾರ್ಟಿನ್ ಸ್ಯಾಮುಲ್, ಎನ್‍ಎಸ್‍ಎಸ್ ಘಟಕಗಳ ಅಧಿಕಾರಿಗಳಾದ ಡಾ.ವಿ. ಪ್ರಸಾದ್ ಮತ್ತು ಪ್ರೋ.ಬಿ.ಕೆ.ಬಸವರಾಜು, ಪ್ರೋ. ಮಹಬೂಬ್ ಭಾಷಾ, ಡಾ. ನಾಗವರ್ಮ, ಪ್ರೋ.ನಯಾಜ್ ಅಹ್ಮದ್, ಪ್ರೋ. ರಹಮತ್, ಪ್ರೋ. ಮಂಜುನಾಥ, ಸ್ವಯಂ ಸೇವಕಿ ಪವಿತ್ರ, ಕವನ, ಅಭಿಷೇಕ್, ರಮೇಶ, ರಕ್ಷಿತ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
[t4b-ticker]

You May Also Like

More From Author

+ There are no comments

Add yours