ಮುರುಘಾ ಶರಣರ ಜಾಮೀನು ಜೊತೆಗೆ ಏಳು ಷರತ್ತುಗಳು

 

Bangalore:ಹೈಕೋರ್ಟ್ ಡಾ.ಶಿವಮೂರ್ತಿ ಮುರುಘಾ  ಶರಣರಿಗೆ ( Shivamurthy Murugha )  ಶ್ರೀಗಳಿಗೆ ಏಳು ಷರತ್ತುಗಳನ್ನು ಹೈಕೋರ್ಟ್ ವಿಧಿಸಿದೆ. ಅದರಂತೆ, ಚಿತ್ರದುರ್ಗ ಮುರುಘಾ ಮಠಕ್ಕೆ ಶ್ರೀಗಳು ಪ್ರವೇಶಿಸುವಂತಿಲ್ಲ. ಪಾಸ್‌ಪೋರ್ಟ್ ಅನ್ನು ಕೋರ್ಟ್ ವಶಕ್ಕೆ ನೀಡಬೇಕು. ಇಬ್ಬರ ಶ್ಯೂರಿಟಿಗಳನ್ನು ಒದಗಿಸಬೇಕು ಎಂದು ಹೈಕೋರ್ಟ್​ ಸೂಚಿಸಿದೆ.

ಇದನ್ನೂ ಓದಿ:ಮುರುಘಾ ಶರಣರಿಗೆ ಜಾಮೀನು ಮಂಜೂರು

ಇಷ್ಟೇ ಅಲ್ಲದೆ, ಕೋರ್ಟ್‌ ವಿಚಾರಣೆಗೆ‌ ವಿಡಿಯೋ ಕಾನ್ಫರೆನ್ಸ್ ಮೂಲಕ‌ ಹಾಜರಾಗಬೇಕು. ಇಂತಹ ಕೃತ್ಯಗಳನ್ನು ಪುನರಾವರ್ತನೆ ಮಾಡುವಂತಿಲ್ಲ ಎಂದು ಕೋರ್ಟ್ ಸೂಚನೆ ನೀಡಿದೆ. ಆದಾಗ್ಯೂ, ಮುರುಘಾಶ್ರೀ ಬಿಡುಗಡೆ ಸದ್ಯಕ್ಕೆ ಅನುಮಾನವಾಗಿದೆ.
ಜಾಮೀನು ಸಿಕ್ಕಿದ್ದು ಯಾವ ಪ್ರಕರಣದಲ್ಲಿ?
ನಜರಾಬಾದ್​​​​ನ 2 ಪ್ರಕರಣದಲ್ಲಿ 2 ಕೇಸ್​ ದಾಖಲಾಗಿತ್ತು. 2 ಪ್ರಕರಣಕ್ಕೆ ಸಂಭಂಧಿಸಿದಂತೆ 1 ಎಫ್​ಐಆರ್​ ದಾಖಲಾಗಿತ್ತು. ಈ ಪ್ರಕರಣದಲ್ಲಿ ಮುರುಘ ಶ್ರೀಗೆ ಜಾಮೀನು ಸಿಕ್ಕಿದೆ ಎಂದು ಸಂತ್ರಸ್ತೆ ಪರ ವಕೀಲ ಶ್ರೀನಿವಾಸ್​ ಮಾಹಿತಿ ನೀಡಿದ್ದಾರೆ. ಮೈಸೂರಿನಲ್ಲಿ ದಾಖಲಾಗಿದ್ದ ಈ ಕೇಸ್​ ಚಿತ್ರದುರ್ಗಕ್ಕೆ ವರ್ಗಾವಣೆ ಆಗಿತ್ತು.

2022ರ ಅಕ್ಟೋಬರ್ 13ರಂದು 2ನೇ ಫೋಕ್ಸೋ ಕೇಸ್ ದಾಖಲಾಗಿತ್ತು. ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಮಠದ ಅಡುಗೆ ಸಹಾಯಕಿಯಿಂದ ದಾಖಲಾಗಿದ್ದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿತ್ತು.

[t4b-ticker]

You May Also Like

More From Author

+ There are no comments

Add yours