ಎಲ್ಲಾ ಸಮಾಜದವರು ಒಟ್ಟಾಗಿ ಗಣೇಶೋತ್ಸವ ಮಾಡಿದರೆ ಶಾಂತಿ ನೆಲೆಯುರುತ್ತದೆ:ಸಚಿವ ಬಿ.ಶ್ರೀರಾಮುಲು

 

ಮೊಳಕಾಲ್ಮುರು: ಭಾವೈಕ್ಯತೆಯಿಂದ ಕೂಡಿರುವಂತಹ ನಮ್ಮ ಭವ್ಯ ರಾಷ್ಟ್ರದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಪ್ರತಿಯೊಬ್ಬರ ಮನದಲ್ಲಿ ಹಾಸು ಹೊಕ್ಕಗಿವೆ  ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.

ಮೊಳಕಾಲ್ಮುರು ಪಟ್ಟಣದಲ್ಲಿ  ಹಿಂದೂ ಮಹಾಗಣಪತಿ ಮೆರವಣಿಗೆ ಸಂದರ್ಭದಲ್ಲಿ ಮಾತನಾಡಿ   ಆಧ್ಯಾತ್ಮಿಕ ಮತ್ತು ಧಾರ್ಮಿಕ ನೆಲೆಗಟ್ಟಲ್ಲಿ ಜಗತ್ತಿನಲ್ಲಿ ಭಾರತ ಮೇಲ್ಪಂತ್ತಿ ಹಾಕಿದೆ. ಇಂತಹ ಸಂದರ್ಭದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಸಾಮರಸ್ಯದಂತ ಜೀವನ ನಡೆಸಬೇಕಾದರೆ ಸಮಾಜದ  ಎಲ್ಲರೂ ಕೂಡ ಒಗ್ಗೂಡಿ ಇಂತಹ ಧಾರ್ಮಿಕ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಗಣೇಶೋತ್ಸವದ ಮೂಲಕ ಅರ್ಥಪೂರ್ಣವಾಗಿ ಆಚರಿಸಿದಾಗ ಶಾಂತಿ ನೆಮ್ಮದಿ ನೆಲೆಯುರುತ್ತದೆ.

no

ಈ ವರ್ಷ ಗಣೇಶೋತ್ಸವ  ಆಚರಣೆಯಿಂದ ಮೊಳಕಾಲ್ಮರು ಮತ್ತು ಚಳ್ಳಕೆರೆ ತಾಲೂಕಿನಲ್ಲಿ ಒಳ್ಳೆ ಮಳೆ ಬೆಳೆಯಾಗಿ ರೈತನ ಬದುಕು ಹಸನಾಗಲಿ ಪ್ರತಿಯೊಬ್ಬರೂ ಕೂಡ ನೆಮ್ಮದಿಯಿಂದ ಬಾಳುವಂತಾಗಲಿ ಎಂದು ಹಾರೈಸಿದರು.

ಸರ್ವಧರ್ಮ ಗಣಪತಿ ಗಣೇಶೋತ್ಸವದಲ್ಲಿ ಮಾತನಾಡಿ ಈ ವರ್ಷ ಸಮೃದ್ಧಿಯಾಗಿ ಮಳೆಯಾಗಿದೆ ರೈತನ ಬಿತ್ತಿದಂತ ಬೆಳೆಗಳು ಕಣ್ಣಿಗೆ ಮುದ ನೀಡುತ್ತಿವೆ ವರುಣನ ಕೃಪೆಯಿಂದ ರೈತನ ಮುಖದಲ್ಲಿ ಮಂದಹಾಸ ಕಾಣುತ್ತಿದೆ ಅತಿ ಮಳೆಯಿಂದ ಕೆಲವು ಕಡೆ ಬೆಳೆ ಹಾನಿಯಾಗಿದೆ.  ಸಾರ್ವಜನಿಕರ ಮನೆಗಳು ಬಿದ್ದಿವೆ ರಸ್ತೆಗಳು ಹಾಳಾಗಿವೆ ಎಲ್ಲವುಗಳನ್ನು ಕೂಡ  ಪರಿಶೀಲಿಸಿ ನೊಂದವರಿಗೆ ಪರಿಹಾರ ಕಲ್ಪಿಸಿ ಸಾಂತ್ವಾನ ಹೇಳುವಂತೆ ಚಳ್ಳಕೆರೆ ತಹಶೀಲ್ದಾರ್  ಎನ್ ರಘುಮೂರ್ತಿ ಅವರಿಗೆ ಮತ್ತು ಮೊಣಕಾಲ್ಮೂರು ತಹಶೀಲ್ದಾರ್ ಗೆ  ಸೂಚಿಸಿದರು.

ಚಳ್ಳಕೆರೆ ತಹಶೀಲ್ದಾರ್  ಎನ್. ರಘುಮೂರ್ತಿ ಮಾತನಾಡಿ  ಮೊಳಕಾಲ್ಮೂರು ಕ್ಷೇತ್ರದ ತಳಕು ಮತ್ತು ನಾಯಕನಹಟ್ಟಿ ಹೋಬಳಿಯ ವ್ಯಾಪ್ತಿಯಲ್ಲಿ ಸಿಡಿಲು ಬಡಿದು ಒಂದು ಜೀವ ಹಾನಿಯಾಗಿದೆ. 192 ಮನೆಗಳು ಬಿದ್ದಿವೆ 164 ಎಕರೆ ತೋಟಗಾರಿಕಾ ಮತ್ತು ಕೃಷಿ ಬೆಳೆ ಹಾಳಾಗಿದೆ ಇವೆಲ್ಲವುಗಳ ಅಂದಾಜನ್ನು ತಯಾರು ಮಾಡಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಸಚಿವರ ಆಶಯದಂತೆ ನೊಂದ ಸಂತ್ರಸ್ತರಿಗೆ ಅತಿ ಶೀಘ್ರದಲ್ಲಿ ಪರಿಹಾರವನ್ನು ಕಲ್ಪಿಸಲಾಗುವುದು.  ಉಳಿದಂತೆ ಲೋಕೋಪಯೋಗಿ , ಪಂಚಾಯತ್ ರಾಜ್ ಇಲಾಖೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು,  ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿರುವ ಬಗ್ಗೆ ನಿಖರವಾದ ಮಾಹಿತಿ ಸಲ್ಲಿಸುವಂತೆ ಸಚಿವರು ಸೂಚಿಸಿದರು.

ಶೋಭ ಯಾತ್ರೆ ಸಂದರ್ಭದಲ್ಲಿ ಅಂದಾಜು ಸಾವಿರಾರು  ಜನ ಪಾಲ್ಗೊಂಡಿದ್ದು ಸ್ವತಃ ಸಚಿವರು ಟ್ರ್ಯಾಕ್ಟರ್ ಚಾಲಯಿಸಿ  ಚಾಲನೆ ನೀಡಿದರು. ಸಚಿವರಿಗೆ ಚಳ್ಳಕೆರೆ ತಹಶೀಲ್ದಾರ್ ಎನ್. ರಘುಮೂರ್ತಿ ಸಾತ್ ನೀಡಿದರು. ಮೊಳಕಾಲ್ಮುರು ತಹಶೀಲ್ದಾರ್ ಸುರೇಶ್ ಕುಮಾರ್, ಎಸ್ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಪಾಪೇಶ್ ನಾಯಕ,  ಬಿ ಜೆ ಪಿ ಮಂಡಲ ಅಧ್ಯಕ್ಷ ಡಾಕ್ಟರ್ ಮಂಜುನಾಥ್,  ನಗರ ಘಟಕದ ಅಧ್ಯಕ್ಷ ಕಿರಣ್ ಗಾಯಕ್ವಾಡ್ ಪ್ರಧಾನ ಕಾರ್ಯದರ್ಶಿ ಹೇಮಂತ್ ಕುಮಾರ್ ಇದ್ದರು.

[t4b-ticker]

You May Also Like

More From Author

+ There are no comments

Add yours