ಮಾಜಿ ಎಂಎಲ್ಸಿ ರಘು ಆಚಾರ ಹಣದಲ್ಲಿ 50 ಜನ ರೈತರ ತಂಡ ಇಸ್ರೇಲ್ ಪ್ರವಾಸ

 

 

 

 

ಚಿತ್ರದುರ್ಗ : ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಮಾಜಿ ಎಂಎಲ್ಸಿ   ರಘು ಆಚಾರ್ ಕ್ಷೇತ್ರದಲ್ಲಿ  ಆ್ಯಕ್ಟಿವ್ ಆಗಿದ್ದಾರೆ. ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಹಿಡಿತ ಸಾಧಿಸಲು ಬಿಡಾರ ಹೂಡಿರುವ  ರಘು ಆಚಾರ್ ರಾಜಕೀಯ ದಾಳಗಳನ್ನು ಹುರುಳಿಸುವ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.  ಪ್ರತಿ ನಿತ್ಯವೂ ಗ್ರಾಮೀಣ ಭಾಗದಲ್ಲಿ  ಸುತ್ತಾಟ  ಮಾಡಿ ಯಾವ ರೀತಿ ಕಂಟ್ರೋಲ್ ಮಾಡಬಹುದು ಎಂಬ ಪ್ಲಾನ್ ಮಾಡುತ್ತಿದ್ದಾರೆ.

 

 

ಕಳೆದ  ಕೇಲವು ತಿಂಗಳುಗಳ ಹಿಂದೆ ರೈತರ  ಸಂಕಷ್ಟ ಆಲಿಸಿರುವ ಮಾಜಿ ಎಂಎಲ್ಸಿ  ರಘು ಆಚಾರ್ ಈ ಮೊದಲು ಉಚಿತ ‌ಬಿತ್ತನೆ  ಮಾಡಿವ  ಮೂಲಕ ರೈತರಿಗೆ ಸ್ವಲ್ಪ ನೇರವಾಗಿದ್ದರು. ಇದೀಗ ಬೇರೆಯದ್ದೇ ಪ್ಲಾನ್ ಮಾಡಿದ್ದಾರೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 50 ಮಂದಿ ರೈತರನ್ನ ಇಸ್ರೇಲ್ ಗೆ ಕಳುಗಿಸಲು ಮಾಜಿ ಎಂಎಲ್ಸಿ  ರಘು ಆಚಾರ್ ಸಜ್ಜಾಗಿದ್ದಾರೆ. ಅಲ್ಲದೆ ಇಂದು ಚಿತ್ರದುರ್ಗ ನಗರದಲ್ಲಿ ಸುದ್ದಿ ಗೋಷ್ಠಿ ನಡೆಸಿ ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ರಘು ಆಚಾರ್ ಕ್ಷೇತ್ರದ 50 ಮಂದಿ ಅನ್ನದಾತರನ್ನ ಇಸ್ರೇಲ್ ಗೆ ಕಳುಹಿಸುತ್ತಿದ್ದೇನೆ. ಇಸ್ರೇಲ್ ನಲ್ಲಿ ಆಧುನಿಕ ಕೃಷಿ ತಂತ್ರಜ್ಞಾನ ಅಧ್ಯಯನಕ್ಕಾಗಿ 50 ರೈತರ ತಂಡ ಕಳುಹಿಸುತ್ತಿದ್ದೇನೆ ಎಂದಿದ್ದಾರೆ. ಅಲ್ಲದೆ ರಘು ಆಚಾರ್ ಸ್ವಂತ ಖರ್ಚಿನಲ್ಲಿ ಕಳುಹಿಸುತ್ತಿದ್ದು, ಕೃಷಿ ಸಮಗ್ರ ಸುಧಾರಣೆ ದೃಷ್ಠಿಯಿಂದ ಈ ಯೋಜನೆ ಮಾಡಿದ್ದಾರೆ. ವಿಶ್ವದಲ್ಲೇ ಕೃಷಿ ಕ್ಷೇತ್ರದಲ್ಲಿ ಮಾದರಿಯಾಗಿರುವ ಇಸ್ರೇಲ್ ದೇಶದಲ್ಲಿ ಅತ್ಯಾಧುನಿಕ ಮತ್ತು  ಯಶಸ್ವಿ ಕೃಷಿ ಪದ್ದತಿ ಅಭ್ಯಾಸ ಮಾಡಲು ರಘು ಆಚಾರ್ ಮುಂದಾಗಿದ್ದಾರೆ. ಇಸ್ರೇಲ್ ಮಾದರಿಯ ಕೃಷಿ ಚಿತ್ರದುರ್ಗ ಕ್ಷೇತ್ರದಲ್ಲಿ ಪರಿಚಯಿಸಲು ಈ ಯೋಜನೆ ರೂಪಿಸಿದ್ದಾಗಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours