ಚಿಕ್ಕ ಪುಟ್ಟ ಸಮಸ್ಯೆಗಳಿಗೆ ನ್ಯಾಯಲಯಕ್ಕೆ ಹೋಗಬೇಡಿ, ಅನ್ಯೋನ್ಯತೆಯಿಂದ ತಮ್ಮಲ್ಲೇ ಬಗೆಹರಿಸಿಕೊಳ್ಳಿ:ತಹಶೀಲ್ದಾರ್ ಎನ್.ರಘುಮೂರ್ತಿ

 

ಚಳ್ಳಕೆರೆ: ಪ್ರತಿಯೊಂದು ಗ್ರಾಮಗಳು ವಿವಾದಗಳಿಂದ ಮುಕ್ತವಾದಾಗ ಮಾತ್ರ ನ್ಯಾಯಾಲಯಗಳಿಗೆ ಮತ್ತು ಸರ್ಕಾರಿ ಕಚೇರಿಗಳಿಗೆ ಕೆಲಸದ  ಹೊರೆ ಕಮ್ಮಿಯಾಗುತ್ತದೆ ಪ್ರತಿಯೊಂದು ಸಣ್ಣ ಪುಟ್ಟ ವಿವಾದಗಳಿಗೂ ನ್ಯಾಯಾಲಯ ಮತ್ತು ಸರ್ಕಾರಿ ಕಚೇರಿಗಳ ಮೊರೆ ಹೋಗುವುದನ್ನು ಸಾರ್ವಜನಿಕರು ಬಿಡಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು‌.

ಇಂದು ದೊಡ್ಡ ಚೆಲ್ಲೂರು 88,17ಕೊನಿಗರಹಳ್ಳಿ3 ರಲ್ಲಿ ದಾರಿ ವಿವಾದಕ್ಕೆ ಸಂಬಂಧಿಸಿದಂತೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಸರ್ವೇ ರವರಿಂದ ನಕಾಶ ಕಂಡ ದಾರಿ ಅಳತೆ ಮಾಡಿಸಿ ನಕಾಶ ಕಂಡ ಒತ್ತುವರಿಯ ಸ್ವರೂಪವನ್ನು ಗ್ರಾಮಸ್ಥರಿಗೆ ತಿಳಿಸಿ ಸರ್ಕಾರಿ ಸ್ವಾಮ್ಯದ ಕಾಲುದಾರಿ ಕಳ್ಳ ಕರಾಬು ಮತ್ತ ರಾಜು ಕಾಲುವೆ ಮುಂತಾದ ಸ್ವತ್ತುಗಳು ಸಾರ್ವಜನಿಕರಿಗೆ ಅತಿ ಉಪಯುಕ್ತವಾದವು ಇವುಗಳನ್ನು ಯಾವುದೇ ಕಾರಣಕ್ಕೂ ಸ್ವಾರ್ಥಕ್ಕೋಸ್ಕರ ಉಪಯೋಗಿಸಿಕೊಳ್ಳಕೂಡದು ರೈತನಿಗೂ ಮತ್ತು ಈ ಸ್ವತ್ತುಗಳಿಗೂ ಭಾವನಾತ್ಮಕವಾದ ಸಂಬಂಧವಿದೆ ನಿಯಮಾವಳಿಗಳಲ್ಲಿ ಕೂಡ ಈ ಸ್ವತ್ತುಗಳನ್ನು ಅತಿಕ್ರಮಿಸಿ ಕೊಡದೆಂದು ನಿರ್ದೇಶನ ಇದೆ ಇದರ ಅನುಸಾರ ನಿಯಮಾವಳಿಗನುಸಾರವಾಗಿ ಕಾನೂನಿನ ಕ್ರಮ ಕೈಗೊಳ್ಳುವ ಬದಲು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವ ಪರಿಪಾಠವನು ಕಂದಾಯ ಇಲಾಖೆ ಮೈಗೂಡಿಸಿಕೊಂಡಿದೆ ಇದರ ಅನುಸಾರ ಈಗಾಗಲೇ 48 ಗ್ರಾಮಗಳಲ್ಲಿ ಸಾರ್ವಜನಿಕರ ಮನವೊಲಿಸಿ ದಾರಿಗಳನ್ನು ಬಿಡಿಸಲಾಗಿದೆ ಹಾಗಾಗಿ ಯಾವುದೇ ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳದೆ ಕ್ರಮಿಸಿಕೊಂಡಿರುವಂತ ಇಂತಹ ಸ್ವತ್ತುಗಳನ್ನು ಸರ್ಕಾರಕ್ಕೆ ಒಪ್ಪಿಸಿ ಸಹಬಾಳ್ವೆಗೆ ದಾರಿಯಾಗಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿದರು ಅದರಂತೆ ಅತಿಕ್ರಮಿಸಿಕೊಂಡಂತ ಮೂರು ಸ್ವತ್ತುಗಳನ್ನು ಸರ್ಕಾರಕ್ಕೆ ಮುಕ್ತಗೊಳಿಸಿದೆ.

ಗ್ರಾಮ ಮಟ್ಟದಲ್ಲಿ ರಾಜಿ ಮುಖಾಂತರ ಕೆಲವೊಂದು ಸಿವಿಲ್ ಸ್ವರೂಪದ ವಿವಾದಗಳನ್ನು ಬಗೆಹರಿಸಿಕೊಳ್ಳುವುದು ಇಂದಿನ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದೆ ಈಗಾಗಲೇ ರೈತರು ಬೆಳೆ ನಷ್ಟ ಮತ್ತು ಬೆಲೆ ಏರುಪೇರಿಂದ ಐರಣ್ಣಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನ್ಯಾಯಾಲಯ ಮತ್ತು ಸರ್ಕಾರಿ ಕಚೇರಿಗೆ ಹೋದರೆ ವೃತ ಸಣ್ಣಪುಟ್ಟ ಖರ್ಚನ್ನು ಬರಿಸಬೇಕಾಗುತ್ತದೆ ಇದರಿಂದ ಇನ್ನೂ ಸಾರ್ವಜನಿಕರು ಹೊರೆ ಹೊರಬೇಕಾಗುತ್ತದೆ. ಆದುದರಿಂದ ಪ್ರತಿಯೊಬ್ಬ ಸಾರ್ವಜನಿಕರು ಮಾನವೀಯತೆ ಮತ್ತು ಅಂತಕರಣದಿಂದ ನನ್ನ ಪುಟ್ಟ ವಿವಾದಗಳಿಗೆ ಗಂಭೀರ ಸ್ವರೂಪ ನೀಡದೆ ಗ್ರಾಮಮಟ್ಟದಲ್ಲೇ ಬಗೆಹರಿಸಿಕೊಳ್ಳಬೇಕೆಂದು ಎಂದರು.

ಈ ಸಂದರ್ಭದಲ್ಲಿ ತಾಲೂಕ್ ಸರ್ವೇಯರ್ ಪ್ರಸನ್ನ ಕುಮಾರ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours