ಮಳಲಿ, ವಡ್ಡರಪಾಳ್ಯ ರಸ್ತೆ ಕಾಮಗಾರಿಗೆ ಚಾಲನೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ: ಮೆ:21:  ಮಳೆ ವಾತವರಣ ನೋಡಿಕೊಂಡು ಗುಣಮಟ್ಟದ ಮತ್ತು ವಿಶಾಲವಾದ ರಸ್ತೆಗಳನ್ನು ನಿರ್ಮಾಣ ಮಾಡಿ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಭೀಮಸಮುದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ  ವಡ್ಡರ ಪಾಳ್ಯ ಮತ್ತು ಮಳಲಿ ಗ್ರಾಮಗಳಲ್ಲಿ 2.90 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ಸೇರಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಲ್ಲಿ ವಡ್ಡರ ಪಾಳ್ಯಕ್ಕೆ  40 ಅನುದಾನ ನೀಡಲಾಗಿದೆ.  15 ಲಕ್ಷ ಸಿ.ಸಿ ರಸ್ತೆ, 5 ಲಕ್ಷ  ಚರಂಡಿ,12 ಲಕ್ಷ ಅಂಗನವಾಡಿ ಕೇಂದ್ರ, 3 ಲಕ್ಷ ಮಾಸ್ಕ್ ದೀಪ,  5 ಲಕ್ಷ ಕುಡಿಯುವ ನೀರಿನ  ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿದೆ. ಹಾಗೂ ಶಾಸಕರ ಅನುದಾನದಲ್ಲಿ 10 ಲಕ್ಷ ಎರಡು ದೇವಸ್ಥಾನಗಳ ಅಭಿವೃದ್ಧಿಗೆ ನೀಡಿದ್ದು ಜೊತೆಗೆ ಅನೇಕ‌ ಸಿ.ಸಿ. ರಸ್ತೆಗಳು ಮಾಡಿದ್ದರು ಸಹ ದೊಡ್ಡ ಹಳ್ಳಿ ಆಗಿರುವುದರಿಂದ  ಸಮಾರು 2 ಕೋಟಿ ಹಣ ನೀಡಿದರೆ ಎಲ್ಲಾ ರಸ್ತೆಗಳು ಪೂರ್ಣವಾಗಲಿವೆ. ಮುಂದಿನ ದಿನದಲ್ಲಿ ಹಣ ವ್ಯವಸ್ಥೆ ನೋಡಿಕೊಂಡು ಸಿ.ಸಿ.ರಸ್ತೆ ಮಾಡಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.
ಗ್ರಾಮೀಣ ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ಧಿ ಇಲಾಖೆಯ 2.50 ಕೋಟಿ ಅನುದಾನದಲ್ಲಿ ಡಾಂಬರೀಕರಣ ರಸ್ತೆ ಮಾಡಲಾಗುತ್ತಿದೆ. ಅಮೃತಪುರ ರಸ್ತೆಯಿಂದ ಮಳಲಿ ವರೆಗೆ ಡಾಂಬರೀಕರಣ ರಸ್ತೆ. ಸಿಂಗಾಪುರ ರಸ್ತೆ, ತೊಡರನಾಳ್ ರಸ್ತೆಗಳನ್ನು ಮಾಡಲಾಗುತ್ತಿದೆ. ಇದರಲ್ಲಿ ವಿಶೇಷವಾಗಿ ಮಳಲಿ ಗ್ರಾಮದ ಜನರು  ಅನೇಕ ವರ್ಷಗಳಿಂದ ರಸ್ತೆಗೆ ಬೇಡಿಕೆ ಇಡುತ್ತಿದ್ದರು ಅದಕ್ಕಾಗಿ ಈಗ ಕಾಲ ಕೂಡಿದ್ದು ಉತ್ತಮ ರಸ್ತೆ ಮಾಡಲಾಗುವುದು ಎಂದರು.
ಮಳೆ ನೋಡಿಕೊಂಡು ಕಾಮಗಾರಿ ಪೂರ್ಣಗೊಳಿಸಿ: ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು ಮಳೆ ಬಿಡುವು  ನೋಡಿಕೊಂಡ ಕಾಮಗಾರಿ ಮಾಡಬೇಕು. ರಸ್ತೆಯ ಪಕ್ಕದ ಎಲ್ಲಾ ಗಿಡಗಳನ್ನು ತೆಗೆದು ವಿಶಾಲವಾಗಿ ರಸ್ತೆ ನಿರ್ಮಾಣ ಮಾಡಬೇಕು. ಹಣ ಕಡಿಮೆ ಬಂದರೆ ನೀಡುತ್ತೇನೆ ಆದರೆ ಗುಣಮಟ್ಟದಲ್ಲಿ ರಾಜೀ ಇಲ್ಲ ಎಂದು ತಿಳಿಸಿದರು.
ವೃದ್ದರು ಮತ್ತು ಮಕ್ಕಳ ಬಗ್ಗೆ ಎಚ್ಚರ: ಕಳೆದ ಹಲವು ವರ್ಷಗಳ ನಂತಹ ಉತ್ತಮ ಮಳೆಯಾಗಿದೆ. ಕೆರೆಗಳು, ಗೊಕಟ್ಟೆಗಳು, ಚಕ್ ಡ್ಯಾಂ ಗಳು ತುಂಬಿವೆ. ಇಂತಹ ಸಂದರ್ಭದಲ್ಲಿ  ಮಕ್ಕಳ ಆಟವಾಡಿಕೊಂಡು ಹೋಗಿ ನೀರು ಪಾಲಗಿರುವ ಸಾಕಷ್ಟು ಉದಾಹರಣೆ ಇವೆ.ಆದ್ದರಿಂದ ಮಕ್ಕಳ ಬಗ್ಗೆ  ಪೋಷಕರು ನಿಗಾ  ವಹಿಸಬೇಕು. ವೃದ್ದರನ್ನು ಸಹ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ  ಮಾಜಿ ಜಿಲ್ಲಾ ಪಂಚಾಯತ ಸದಸ್ಯೆ  ಜಯ ಪ್ರತಿಭಾ, ಭೀಮಸಮುದ್ರ  ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾರ್ವತಮ್ಮ,ಉಪಾಧ್ಯಕ್ಷ ಶರತ್ ಪಾಟೀಲ್,  ಮಂಜುನಾಥ್, ಎನ್.ಪ್ರಕಾಶ್, ರಾಘವೇಂದ್ರ, ಕೆ.ಎಸ್.ಸಿಂಧೂಕುಮಾರಿ, ಗೀತಮ್ಮ, ಸಾಕಮ್ಮ,  ಮುಖಂಡರಾದ ರಮೇಶ್, ನವೀನ್, ಕೃಷ್ಣಮೂರ್ತಿ, ರಾಮಣ್ಣ, ಹನುಮಂತಪ್ಪ, ಮಂಜುನಾಥ್, ಪ್ರಭು ಮತ್ತು ಗ್ರಾಮಸ್ಥರು ಇದ್ದರು.
[t4b-ticker]

You May Also Like

More From Author

+ There are no comments

Add yours