ಈ‌ ಸ್ವತ್ತು ವಿತರಣೆಗೆ ಮೀನಾಮೇಷ, ಪೌರಯುಕ್ತರ ನಡೆಗೆ ಶಾಸಕ‌ ಟಿ.ರಘುಮೂರ್ತಿ ಕಿಡಿ

 

ಚಳ್ಳಕೆರೆ:ನಾಗರೀಕರಿಗೆ ಕಬ್ಬಿಣದ ಕಡಲೆಯಾಗಿರುವ ಇ-ಸ್ವತ್ತು ದಾಖಲೆ : ಜಿಲ್ಲಾಧಿಕಾರಿ ಮತ್ತು ಯೋಜನಾ ನಿರ್ದೇಶಕ ಸೂಚನೆಯ ಪಾಲನೆಗೆ ಪೌರಾಯುಕ್ತ ಮೀನಾಮೇಷ : ಸರ್ಕಾರಕ್ಕೆ ದೂರು ಸಲ್ಲಿಸುವ ಎಚ್ಚರಿಕೆ ನೀಡಿದ ಶಾಸಕ ರಘುಮೂರ್ತಿ.

ಚಳ್ಳಕೆರೆ-೩೦ ಚಳ್ಳಕೆರೆ ನಗರಸಭೆಯ (Municipality Challakere)ಆಡಳಿತಕ್ಕೆ ಚುರುಕು ನೀಡುವುದಲ್ಲದೆ, ಪಾರದರ್ಶಕತೆಯನ್ನು ಕಾಪಾಡುತ್ತಾ, ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕೆನ್ನುವ ಒತ್ತಾಸೆಯಿಂದ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹಾಗಾಗ ಜನಸಂಪರ್ಕ ಸಭೆ ನಡೆಸಿ ನಗರಸಭೆ ಪೌರಾಯುಕ್ತರೂ ಸೇರಿದಂತೆ ಸಿಬ್ಬಂದಿ ವರ್ಗವನ್ನು ಸರಿದಾರಿಯಲ್ಲಿ ನಡೆಸುವ ಎಲ್ಲಾ ಪ್ರಾಮಾಣಿಕ ಯತ್ನವನ್ನು ಮಾಡುತ್ತಾ ಬಂದಿದ್ಧಾರೆ. ನಗರಸಭೆ ವ್ಯಾಪ್ತಿಯಲ್ಲಿ ೫ ಜನಸಂಪರ್ಕ ಸಭೆ ನಡೆದರೂ ಸಹ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆಯಲ್ಲಿ ಒಂದು ಹಂತದಲ್ಲಿ ಶಾಸಕರು ಪೌರಾಯುಕ್ತ ಸಿ.ಚಂದ್ರಪ್ಪನವರ ವಾದವನ್ನು ಬಲವಾಗಿ ಖಂಡಿಸಿದ ಘಟನೆ ನಡೆಯಿತು.

ಇದನ್ನೂ ಓದಿ: ಡೇತ್ ನೋಟ್ ನಲ್ಲಿ ಇಬ್ಬರ ಹೆಸರು,ಆ ವ್ಯಕ್ತಿಗಳು ಈ ಊರಿನವರು?

ನಗರಸಭೆ ಆವರಣದಲ್ಲಿ ಶನಿವಾರ ಎಂದಿನಂತೆ ಜನಸಂಪರ್ಕ ಸಭೆಗೆ ಆಗಮಿಸಿದ ಶಾಸಕ ಟಿ.ರಘುಮೂರ್ತಿಯವರನ್ನು ಪೌರಾಯುಕ್ತ ಸಿ.ಚಂದ್ರಪ್ಪ ಹಾಗೂ ಸಿಬ್ಬಂದಿ ವರ್ಗ ಸ್ವಾಗತಿಸಿ ಶಾಸಕರ ಅಧ್ಯಕ್ಷತೆಯಲ್ಲಿ ಐದನೇ ಜನಸಂಪರ್ಕ ಸಭೆ ನಡೆಯುತ್ತಿದ್ದು, ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗ್ಗೆ ಶಾಸಕರ ಸಮಕ್ಷಮದಲ್ಲಿ ವಿವರಿಸುವಂತೆ ಪೌರಾಯುಕ್ತರು ವಿನಂತಿಸಿದರು.


ಸಭೆಗೆ ಪ್ರಾರಂಭವಾಗುತ್ತಲೇ ಶಾಸಕ ಟಿ.ರಘುಮೂರ್ತಿ, ೨೮ ಆಗಸ್ಟ್ ೨೦೨೩ರ ಮೊದಲ ಜನಸಂಪರ್ಕ ಸಭೆಯಲ್ಲಿ ೪೫, ೯ ಅಕ್ಟೋಬರ್ ೨೦೨೩ರಂದು ಎರಡನೇ ಸಂಪರ್ಕ ಸಭೆಯಲ್ಲಿ ೨೦, ೨ ನವೆಂಬರ್ ೨೦೨೩ರ ಜನಸಂಪರ್ಕ ಸಭೆಯಲ್ಲಿ ೮ ಒಟ್ಟು ೭೩ ಸಮಸ್ಯೆಗಳು ಸಾರ್ವಜನಿಕರಿಂದ ವ್ಯಕ್ತವಾಗಿದ್ದು ಅವುಗಳಿಂದ ಪರಿಹಾರ ಕಂಡುಕೊಂಡ ಬಗ್ಗೆ ಮಾಹಿತಿ ನೀಡಿ ಎಂದರು.

ಈ ಮಧ್ಯೆ ಸಾರ್ವಜನಿಕರು ನಗರಸಭೆಯಲ್ಲಿ ಎಲ್ಲಾ ದಾಖಲಾತಿಗಳಿದ್ದರೂ ಸಹ ಇ-ಸ್ವತ್ತು ನೀಡುತ್ತಿಲ್ಲ, ಇ-ಸ್ವತ್ತು ನೀಡುವಲ್ಲಿ ವಿಳಂಬದ ಜೊತೆಗೆ ಹಣವನ್ನು ಸಹ ಕೇಳುತ್ತಿದ್ಧಾರೆ. ನವೀಕರಣಕ್ಕೂ ಇಲ್ಲಸಲ್ಲದ ದಾಖಲೆಗಳನ್ನು ಕೇಳುತ್ತಿದ್ಧಾರೆ, ಸಾರ್ವಜನಿಕರಿಗೆ ಇಲ್ಲಿನ ನಗರಸಭೆ ಆಡಳಿತ ಇ-ಸ್ವತ್ತು ನೀಡುವ ವಿಚಾರದಲ್ಲಿ ಮಲತಾಯಿ ಧೋರಣೆ ತೋರುತ್ತಿದೆ. ಹಣಕೊಟ್ಟವರಿಗೆ ಇ-ಸ್ವತ್ತು ಕೂಡಲೇ ಲಭ್ಯವಿದೆ ಎಂದು ಶಾಸಕರ ಸಮ್ಮುಖದಲ್ಲಿ ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್ ಮಾಹಿತಿ ನೀಡಿ, ಇತ್ತೀಚೆಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಶುಲ್ಕ ಪಾವತಿಸಿದ ಇ-ಸ್ವತ್ತು ದಾಖಲಾತಿಗೆ ಕೂಡಲೇ ನೀಡಬೇಕು, ಹೊಸದಾಗಿ ಇ-ಸ್ವತ್ತು ನೀಡಲು ನಿಯಮಗಳನ್ನು ಅನುಸರಿಸಿ ತ್ವರಿತಗತಿಯಲ್ಲಿ ನೀಡಿ. ಅನಗತ್ಯವಾಗಿ ಜನರಿಗೆ ತೊಂದರೆ ನೀಡಬೇಡಿ ಕಾನೂನು ಪ್ರಕಾರ ದಾಖಲಾತಿ ಸಲ್ಲಿಸಿದಲ್ಲಿ ಪರಿಶೀಲನೆ ನಡೆಸಿ ಇ-ಸ್ವತ್ತು ನೀಡಿ. ಯಾವುದೇ ಕಾರಣಕ್ಕೂ ಇ-ಸ್ವತ್ತು ನೀಡಿಕೆಯಲ್ಲಿ ವಿಳಂಬವಾಗಬಾರದು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕೆಲಸ ನಿರ್ವಹಿಸಿ ಎಂದು ಸೂಚನೆ ನೀಡಿದ್ಧಾರೆಂದರು.

ಜಿಲ್ಲಾಧಿಕಾರಿಗಳಿಗೆ ಸ್ಥಳದಲೇ ಕರೆ ಮಾಡಿದ ಶಾಸಕ ಟಿ.ರಘುಮೂರ್ತಿ

ಈ ಮಧ್ಯೆ ಶಾಸಕ ಟಿ.ರಘುಮೂರ್ತಿಯವರು ಜಿಲ್ಲಾಧಿಕಾರಿಯನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ ನಾನು ಸಹ ಅಲ್ಲಿನ ಪೌರಾಯುಕ್ತರಿಗೆ ನಿರ್ದೇಶನ ನೀಡಿದ್ದೇನೆ. ಆದರೂ ವಿಳಂಬವಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಎಲ್ಲಾ ದಾಖಲಾತಿಗಳಿದ್ದಲ್ಲಿ ಇ-ಸ್ವತ್ತು ನೀಡಲು ತೊಂದರೆ ಇಲ್ಲ ಎಂದರು. ಇದಕ್ಕೆ ಕೂಡಲೇ ಶಾಸಕರು ಪೌರಾಯುಕ್ತ ಸಿ.ಚಂದ್ರಪ್ಪನವರಿಗೆ ಜಿಲ್ಲಾಧಿಕಾರಿಗಳ ಆದೇಶವನ್ನು ನೀವು ಪಾಲಿಸಬೇಕು, ಇಲ್ಲವಾದಲ್ಲಿ ನಿಮ್ಮ ಹಠಮಾರಿಧೋರಣೆ ಬಗ್ಗೆ ಸಂಬಂಧಪಟ್ಟ ಸಚಿವರಿಗೆ ಮಾಹಿತಿ ನೀಡಬೇಕಾಗುತ್ತದೆ ಎಂದು ಖಡಕ್ಕಾಗಿ ತಿಳಿಸಿದರು.


ನಗರಸಭೆ ಪೌರಾಯುಕ್ತರೂ ಸೇರಿದಂತೆ ಸಾರ್ವಜನಿಕರೂ ಸಹ ಹಲವಾರು ವಿಭಿನ್ನ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮನವಿ ನೀಡಿದರು. ಮನವಿ ಸ್ವೀಕರಿಸಿದ ಶಾಸಕರು ಕಾನೂನಿನಡಿ ಹಂತ, ಹಂತವಾಗಿ ಇವುಗಳಿಗೆ ಪರಿಹಾರವನ್ನು ನೀಡುವ ಭರವಸೆ ನೀಡಿದರು

ಇದನ್ನೂ ಓದಿ: ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಆಯ್ಕೆಗಾಗಿ ಅರ್ಜಿ ಆಹ್ವಾನ

ಸಭೆಯಲ್ಲಿ ತಹಶೀಲ್ಧಾರ್ ರೇಹಾನ್ ಪಾಷ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇಂದ್ರ, ಸದಸ್ಯರಾದ ಬಿ.ಟಿ.ರಮೇಶ್‌ಗೌಡ, ಆರ್.ರುದ್ರನಾಯಕ, ಎಸ್.ಜಯಣ್ಣ, ಟಿ.ಮಲ್ಲಿಕಾರ್ಜುನ್, ಕವಿತಾ, ಸುಜಾತ, ಸುವi, ಹೊಯ್ಸಳಗೋವಿಂದ, ಜಯಲಕ್ಷ್ಮಿ, ಎಇಇ ಕಾವ್ಯ, ದಯಾನಂದ, ರಾಜು, ಅರಣ್ಯಾಧಿಕಾರಿ ಬಹುಗುಣ, ಬಿಸಿಎಂ ಅಧಿಕಾರಿ ದಿವಾಕರ, ಸಿಡಿಪಿಒ ಹರಿಪ್ರಸಾದ್, ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ, ಠಾಣಾ ಇನ್ಸ್ಪೆಕ್ಟರ್ ಆರ್.ಎಫ್.ದೇಸಾಯಿ, ವ್ಯವಸ್ಥಾಪಕ ಲಿಂಗರಾಜು, ಎಇಇ ಕೆ.ವಿನಯ್, ನರೇಂದ್ರಬಾಬು, ಜೆಇ ಲೋಕೇಶ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

[t4b-ticker]

You May Also Like

More From Author

+ There are no comments

Add yours