ಉದ್ಯೋಗಿನಿ ಯೋಜನೆ ಅರ್ಹ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ: ಉದ್ಯೋಗಿನಿ ಸೌಲಭ್ಯಕ್ಕೆ ಹೆಚ್ಚಿನ ಅರ್ಜಿಗಳು ಸಲ್ಲಿಸಿದ್ದರಿಂದ ಎಲ್ಲಾ ಫಲಾನುಭವಿಗಳ ಸಮ್ಮುಖದಲ್ಲಿ  ಲಾಟರಿ ಮೂಲಕ ಫಲಾನುಭವಿ  ಆಯ್ಕೆ ಮಾಡಲಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು‌.

ನಗರದ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಆವರಣದಲ್ಲಿನ ಬಾಲ ಭವನ ಸಭಾಂಗಣದಲ್ಲಿ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ ಯೋಜನೆ ಮತ್ತು ಪಶುಸಂಗೋಪನೆ ಇಲಾಖೆಯ ಕೃಷಿ ವಿಕಾಸ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳ ಆಯ್ಕೆ ಮಾಡಿ ಮಾತನಾಡಿದರು.
ಉದ್ಯೋಗಿನಿ ಯೋಜನೆಯಡಿ ಮಹಿಳಾ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದರು. ಚಿತ್ರದುರ್ಗ ಮತ್ತು ಹಿರೇಗುಂಟನೂರು ಕಸಬಾ ವ್ಯಾಪ್ತಿಯಲ್ಲಿ    ಪರಿಶಿಷ್ಟ ಜಾತಿ-1 , ಪರಿಶಿಷ್ಟ ಪಂಗಡಕ್ಕೆ- 2, ಇತರೆ ಜನಾಂಗದವರಿಗೆ-3 ಫಲಾನುಭವಿಗಳನ್ನು  ಆಯ್ಕೆ ಮಾಡಲಾಯಿತು.
ಪಶುಸಂಗೋಪನೆ ಇಲಾಖೆಯ ಕೃಷಿ ವಿಕಾಸ ಯೋಜನೆಯಲ್ಲಿ  ಪರಿಶಿಷ್ಟ ಜಾತಿಗೆ -22 , ಪರಿಶಿಷ್ಟ ಪಂಗಡದ- 16 , ಸಾಮಾನ್ಯ ಜಾತಿಯವರಿಗೆ-37 ಫಲಾನುಭವಿಗಳಿಗೆ ರಸಮೇವು ತಯಾರಿಸುವ ಕಿಟ್ ನೀಡಲಾಗಿದೆ. ಪಶು ಸಾಗಣಿಕೆಗಾಗಿ ನೆಲಗಹಾಸನ್ನು  ಪರಿಶಿಷ್ಟ ಜಾತಿ-1 , ಪರಿಶಿಷ್ಟ ಪಂಗಡಕ್ಕೆ- 7 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಪಶುಸಂಗೋಪನೆ ಇಲಾಖೆಯ ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳಿಗೆ ಸೌಲಭ್ಯ ದೊರಕಿಸಲಾಗಿದೆ. ಇದನ್ನು ಸದುಪಯೋಗ ಮಾಡಿಕೊಂಡು ಉತ್ತಮ ಪಶು ಸಾಗಾಣಕೆ  ಮಾಡಿಕೊಳ್ಳಿ ಎಂದರು.
ಮುಖ್ಯಮಂತ್ರಿ ಬಾಲಸೇವ ಯೋಜನೆಯಡಿ ಕೋವಿಡ್ ಸಂದರ್ಭದಲ್ಲಿ ಪೋಷಕರನ್ನು ಕಳೆದುಕೊಂಡ ಎಸ್ ಎಸ್ಎಲ್ ಸಿ ಉತ್ತೀರ್ಣರಾದ ವಿದ್ಯಾರ್ಥಿಗೆ ಲ್ಯಾಪ್ ಟಾಪ್ ವಿತರಣೆ ಮಾಡಲಾಯಿತು.
ಮಹಿಳಾ ಮಕ್ಕಳ ಇಲಾಖೆಯಲ್ಲಿ ವಿವಿಧ ಸೌಲಭ್ಯಗಳನ್ನು ನೀಡಲು  ಜಿಲ್ಲಾ ಕೇಂದ್ರಕ್ಕೆ ಹೆಚ್ಚಿನ ಸೌಲಭ್ಯ ನೀಡಲು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಡಿಪಿಓ ಸುಧಾ, ಜಿಲ್ಲಾ  ಅಭಿವೃದ್ಧಿ ನಿರೀಕ್ಷಕರಾದ ಸುವರ್ಣಮ್ಮ, ಭರಮಸಾಗರ ಸಿಡಿಪಿಓ ಲೋಕೇಶಪ್ಪ, ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಕುಮಾರ್ ಮತ್ತು ಫಲಾನುಭವಿಗಳು ಹಾಜರಿದ್ದರು.
[t4b-ticker]

You May Also Like

More From Author

+ There are no comments

Add yours