ಚನ್ನಕ್ಕಿಹೊಂಡ ಬೋವಿ ಕಾಲೋನಿ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿದ ಶಾಸಕ ಜಿ‌.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ: ನನ್ನ ಕ್ಷೇತ್ರದಲ್ಲಿ  ಕೊಳಗೇರಿ ಪ್ರದೇಶದಲ್ಲಿ  ವಾಸಿಸುತ್ತಿರುವ  ಕುಟುಂಬಗಳಿಗೆ ಹಕ್ಕು ಪತ್ರ   ನೀಡುವ ಮೂಲಕ ಬಡವರ ಹಿತ ಕಾಯುವ ಕೆಲಸ ಮಾಡಿದ್ದೇನೆ  ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ  ನಗರಸಭೆಯ 15 ನೇ ವಾರ್ಡ್ ನ ಚನ್ನಕ್ಕಿಹೊಂಡ, ಭೋವಿ ಕಾಲೋನಿಯ ನಿವಾಸಿಗಳಿಗೆ 230  ಕ್ಕೂ ಹೆಚ್ಚು ಫಲಾನುಭವಿಗಳಿಗೆ  ಹಕ್ಕು ಪತ್ರ ವಿತರಿಸಿ ಮಾತನಾಡಿದರು.

ನಗರದ  ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆಯನ್ನು ಇಂದು ಮಾಡಲಾಗಿದೆ. ನಗರದಲ್ಲಿ  ಎಲ್ಲಾ ಕಡೆ ಹಕ್ಕು ಪತ್ರ  ವಿತರಣೆ ಮಾಡುತ್ತಿದ್ದು ಅದು ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೊಂದಣಿ ಸಹ ಮಾಡಿಕೊಡಲು ಅವಕಾಶ ಇದ್ದು ಎಲ್ಲಾರ  ನೊಂದಣಿ ಮಾಡಿಸಿಕೊಂಡರೆ ನಿಮಗೆ ಹೆಚ್ಚು ಅನುಕೂಲವಾಗುತ್ತದೆ ಎಂದರು.ನಾ

ನಾನು  ಶಾಸಕನಾಗಿ ನಗರದಲ್ಲಿ ನಗರದಲ್ಲಿ 10 ರಿಂದ 11 ಸಾವಿರ ಮತ್ತು  ಗ್ರಾಮೀಣ ಪ್ರದೇಶದಲ್ಲಿ 39 ಸಾವಿರ  ಮನೆಗಳನ್ನು ನೀಡಲು ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ.

ಸ್ಲಂ ಗಳ‌ಲ್ಲಿ ವಾಸಿಸುವ ಜನರಿಗೆ ತಮ್ಮ ಮನೆಯ ಮೇಲೆ ಯಾವುದೇ ದಾಖಲೆ  ಮತ್ತು ಹಕ್ಕು ಇರಲಿಲ್ಲ. ಸರ್ಕಾರ ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ ನೀಡುವುದರಿಂದ ಅವರಿಗೆ ಮನೆಯ ಮೇಲೆ ಸಾಲ ಸೌಲಭ್ಯ ಪಡೆದು  ಕುಟುಂಬ ಆದಾಯ ಹೆಚ್ಚಿಸಲು ಸಹಕಾರಿಯಾಗಲಿದೆ. ಯಾರಿಗೂ ಸಹ ಅನ್ಯಾಯವಾಗದಂತೆ ಎಲ್ಲಾರಿಗೂ ಹಕ್ಕು ಪತ್ರ ವಿತರಣೆ ಮಾಡಲಾಗುತ್ತದೆ ಒಂದು ವೇಳೆ ಯಾರಿಗಾದರೂ ಹಕ್ಕು ಪತ್ರ ಸಿಗದೇ ಇದ್ದರೆ ನಗರಸಭೆ ಸದಸ್ಯರ ಗಮನಕ್ಕೆ ಅಥವಾ ನನ್ನ ಗಮನಕ್ಕೆ ತಂದರೆ ಹಕ್ಕು ಪತ್ರ ನೀಡುವ ಕೆಲಸ ಮಾಡಲಾಗುತ್ತದರ ಯಾರು ಆತಂಕಪಡುವ ಅವಶ್ಯಕತೆ ಇಲ್ಲ ಎಂದರು.

ಈ ಸಂದರ್ಭದಲ್ಲಿ ನಗರಸಸಭೆ ಸದಸ್ಯ ಡಿ.ಮಲ್ಲಿಕಾರ್ಜುನ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಬಿಜೆಪಿ ಮುಖಂಡ ಮಲ್ಲಿಕಾರ್ಜುನ್, ಗರಡಿ ಪ್ರಕಾಶ್ ಮತ್ತು ಫಲಾನುಭವಿಗಳು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours