ಮಿಷನ್ ಶಕ್ತಿ ಯೋಜನೆ: ಜೆಂಡರ್ ಸ್ಪೆಷಲಿಸ್ಟ್ ಹುದ್ದೆ ನೇಮಕಾತಿ ರದ್ದು

 

ಚಿತ್ರದುರ್ಗ(ಕರ್ನಾಟಕ ವಾರ್ತೆ).ಫೆ.17:
ಚಿತ್ರದುರ್ಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಮಿಷನ್ ಶಕ್ತಿ ಯೋಜನೆಯಡಿ ಲಿಂಗ ತಜ್ಞರು (ಜೆಂಡರ್ ಸ್ಪೆಷಲಿಸ್ಟ್) ಹುದ್ದೆಯ ನೇಮಕಾತಿಯನ್ನು ಕೈ ಬಿಡಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಮಿಷನ್ ಶಕ್ತಿ ಯೋಜನೆಯಡಿ ಮಹಿಳಾ ಸಬಲೀಕರಣ ಘಟಕಕ್ಕೆ 2023-24ನೇ ಸಾಲಿಗೆ ಗುತ್ತಿಗೆ ಆಧಾರದ ಮೇಲೆ ಸೇವೆ ಪಡೆಯಲು ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲು ಅರ್ಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಫೆ.6 ರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಫೆ.20 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಫೆ.05 ರಂದು ಹೊರಡಿಸಿದ್ದ ಪ್ರಕಟಣೆಯಲ್ಲಿ  01 ಜಿಲ್ಲಾ ಯೋಜನಾ ಸಂಯೋಜಕ (ಡಿಸ್ಟ್ರಿಕ್ಟ್ ಮಿಷನ್ ಕೋಆಡಿನೇಟರ್), 01 ಹಣಕಾಸು ಸಾಕ್ಷರತೆ ಹಾಗೂ ಲೆಕ್ಕಿಗ ತಜ್ಞ (ಸ್ಪೆಷಲಿμï್ಟ ಇನ್ ಪಿನ್ಯಾಸಿಯಲ್ ಲಿಟ್ರಸಿ ಅಂಡ್ ಅಕೌಂಟೆಟ್) ಹುದ್ದೆಗಳಿಗೆ ಮಾತ್ರ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸಲಾಗುತ್ತದೆ. ಲಿಂಗ ತಜ್ಞರು (ಜೆಂಡರ್ ಸ್ಪೆಷಲಿಷ್ಟ್) ಹುದ್ದೆಯ ನೇಮಕಾತಿ ಪ್ರಕ್ರಿಯೆ ಕೈ ಬಿಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಒನಕೆ ಓಬವ್ವ ಸ್ಟೇಡಿಯಂ ಹತ್ತಿರ, ಜಿಲ್ಲಾ ಬಾಲಭವನ ಆವರಣ, ಚಿತ್ರದುರ್ಗ, ದೂರವಾಣಿ ಸಂಖ್ಯೆ 08194-235259 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

[t4b-ticker]

You May Also Like

More From Author

+ There are no comments

Add yours