ವಿವಿಧ ಯೋಜನೆ : ಚರ್ಮ ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನ

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜುಲೈ 07:
ಡಾ.ಬಾಬು ಜಗಜೀವನ ರಾಂ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಪರಿಶಿಷ್ಟ ಜಾತಿಗೆ ಸೇರಿದ ಚರ್ಮ ಕುಶಲಕರ್ಮಿಗಳಿಗೆ ನಿಗಮದ ವಿವಿಧ ಯೋಜನೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ತರಬೇತಿ ಯೋಜನೆಯಡಿ 60 ದಿನಗಳ ಕೌಶಲ್ಯಾಭಿವೃದ್ಧಿ ತರಬೇತಿ, ಕೌಶಲ್ಯ ಉನ್ನತೀಕರಣ ಯೋಜನೆಯಡಿ 3 ವರ್ಷಗಳ ಡಿಪ್ಲೋಮಾ ಇನ್ ಲೆದರ್ ಟೆಕ್ನಾಲಜಿ, ಪಾದರಕ್ಷೆ ವಿನ್ಯಾಸ ಮತ್ತು ಉತ್ಪಾದನಾ ತಾಂತ್ರಿಕತೆಯಲ್ಲಿ 1 ವರ್ಷದ ಡಿಪ್ಲೋಮಾ, ಪಾದರಕ್ಷೆ ತಯಾರಿಕೆ  ಮತ್ತು ನಿರ್ವಹಣಾ ಅಧ್ಯಯನದಲ್ಲಿ ಒಂದೂವರೆ ವರ್ಷದ ಸ್ನಾತಕೋತ್ತರ ಡಿಪ್ಲೋಮಾಗೆ ತರಬೇತಿ ಪಡೆಯಬಹುದು.
ಸ್ವಯಂ ಉದ್ಯೋಗ ಯೋಜನೆಯಡಿ ಸ್ವಾವಲಂಬಿ ಸಂಚಾರ ಮಾರಾಟ ಮಳಿಗೆ, ನೇರಸಾಲ, ಚರ್ಮ ಶಿಲ್ಪಿ ಯೋಜನೆ, ಮಹಿಳಾ ಕುಶಲಕರ್ಮಿಗಳಿಗೆ ಕಾಯಕ ಸ್ಫೂರ್ತಿ ಯೋಜನೆ, ಪಾದುಕೆ ಕುಟಿರ ಯೋಜನೆ, ಮಾರುಕಟ್ಟೆ ಸಹಾಯ ಯೋಜನೆ ಹಾಗೂ ಡಾ.ಬಾಬು ಜನಜೀವನ್ ರಾಂ ವಸತಿ ಕಾರ್ಯಾಗಾರ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ಕಚೇರಿ, ಸಂಯೋಜಕರ ಕಚೇರಿ ಅಥವಾ ವೆಬ್‍ಸೈಟ್ http://lidkar.com ಗೆ https://suvidha.karnataka.gov.in  ಮೂಲಕ ಅಥವಾ ಕಲ್ಯಾಣ ಮಿತ್ರ ಏಕೀಕೃತ ಎಸ್‍ಸಿ.ಎಸ್‍ಟಿ ಸಹಾಯವಾಣಿ 9482300400, ಜಿಲ್ಲಾ ಸಂಯೋಜಕರು: 9480886279, 9480886272, 9148524231ಗೆ ಸಂಪರ್ಕಿಸಬಹುದು ಎಂದು ಲಿಡ್ಕರ್ ಲೆದರ್ ಎಂಪೋರಿಯಂ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours