ದೇವರು ಎತ್ತುಗಳು ಸೇರಿ‌ ಎಲ್ಲಾ ಜಾನುವಾರುಗಳಿಗೆ ವ್ಯಾಕ್ಸಿನ್ ಹಾಕಿಸಿ:ತಹಶೀಲ್ದಾರ್ ಎನ್.ರಘುಮೂರ್ತಿ ಮನವಿ

 

ಚಿತ್ರದುರ್ಗ:ಬುಡಕಟ್ಟು ಸಂಸ್ಕೃತಿಯ ಜನರಿಗೂ ಮತ್ತು ಇಲ್ಲಿನ ದೇವರ ಎತ್ತುಗಳಿಗೂ ಭಾವನಾತ್ಮಕವಾದ ಸಂಬಂಧವಿದೆ ಹಾಗಾಗಿ ಈ ದೇವರ ಎತ್ತುಗಳಿಗೆ ಮತ್ತು ಆರೋಗ್ಯವಂತ ಜಾನುವಾರುಗಳಿಗೆ ಮುಂಜಾಗ್ರತ ಕ್ರಮವಾಗಿ ಕಡ್ಡಾಯವಾಗಿ ಲಸಿಕೆ ಹಾಕುವಂತ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಎನ್‌.ರಘುಮೂರ್ತಿ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಜಾನುವಾರಗಳಿಗೆ ಕಾಣಿಸಿಕೊಂಡಿರುವಂತ ಗಂಟು ರೋಗಕ್ಕೆ ಸಂಬಂಧಿಸಿದಂತ ಜಾನುವಾರಗಳಿಗೆ ವ್ಯಾಕ್ಸಿನ್ ಹಾಕಿಸುವ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿ ಪ್ರತಿಯೊಬ್ಬ ಸಾರ್ವಜನಿಕರು ಕೂಡ ಜಾಗ್ರತೆ ವಹಿಸಿ ತಾವು ಸಾಕಿರುವಂತಹ ಜಾನುವಾರಗಳಿಗೆ ಮತ್ತು ದೇವರ ಎತ್ತುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ಸಾರ್ವಜನಿಕರಿಗೆ   ಕಳೆದ ಒಂದು ವಾರದಿಂದ ದಿನಂಪ್ರತಿ ಸಾರ್ವಜನಿಕರು ಗ್ರಾಮಗಳಿಗೆ ಭೇಟಿ ನೀಡಿದಂತ ಸಂದರ್ಭದಲ್ಲಿ ಮತ್ತು ಕಚೇರಿಯಲ್ಲಿ ಜಾನುವಾರುಗಳಿಗೆ ಅದರಲ್ಲಿಯೂ ದೇವರ ಎತ್ತುಗಳಿಗೆ ಇಂತಹ ಕಾಯಿಲೆ ಉಲ್ಬಡಿಸಿದ್ದು ತಕ್ಷಣ ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿರುತ್ತಾರೆ.

ಪಶು ಇಲಾಖೆಯ ಅಧಿಕಾರಿಗಳು ಕೂಡ ಈ ನಿಟ್ಟಿನಲ್ಲಿ ಅಗಲಿರಳು ಜಾನುವಾರುಗಳಿಗೆ ವ್ಯಾಕ್ಸಿನ್ ನೀಡುವ ಕೆಲಸ ಮಾಡುತ್ತಿದ್ದಾರೆ. ಆದರೂ ಕೂಡ ತಾಲೂಕಿನ ಸಾರ್ವಜನಿಕರು ಆರೋಗ್ಯವಾಗಿರುವಂತಹ ಜಾನುವಾರುಗಳಿಗೆ ವ್ಯಾಕ್ಸಿನ್ ಹಾಕಿಸದಿದ್ದಲ್ಲಿ ತಕ್ಷಣ ಸ್ಥಳೀಯ ಪಶು ವೈದ್ಯಕೀಯ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಅವರಿಂದ ತಮ್ಮ ತಮ್ಮ ಜಾನುವಾರುಗಳಿಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮನವಿ ಮಾಡಿದರು.

ಪಶುವೈದ್ಯಾಧಿಕಾರಿ ರಾಮನಾಯಕ್ ,ಗೌರಸಮುದ್ರ ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ರಾಜಣ್ಣ ಸದಸ್ಯರಾದಂತಹ ರುದ್ರಮುನಿ ಗೋಪಾಲಪ್ಪ ರಾಜೇಶ್ವ ನಿರೀಕ್ಷಕ ತಿಪ್ಪೇಸ್ವಾಮಿ ತಾಲೂಕ್ ಸರ್ವೆ ಪ್ರಸನ್ನ ಕುಮಾರ್ ಮುಂತಾದವರು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours