ಕರ್ನಾಟಕ ಏಕೀಕರಣಕ್ಕಾಗಿ ಅನೇಕ ಹಿರಿಯರ ತ್ಯಾಗ ಬಲಿದಾನವಿದೆ:ಶಾಸಕ ಎಂ.ಚಂದ್ರಪ್ಪ

 

ಚಿತ್ರದುರ್ಗ: ಕರ್ನಾಟಕ ಏಕೀಕರಣಕ್ಕಾಗಿ ಅನೇಕ ಹಿರಿಯರ ತ್ಯಾಗ, ಬಲಿದಾನಗಳಿರುವುದರಿಂದ 67 ನೇ ಕನ್ನಡ ರಾಜ್ಯೋತ್ಸವವನ್ನು ನಾಡಿನಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ತಿಳಿಸಿದರು
ಸರ್ವಧರ್ಮದ ಆಟೋ ಮಾಲೀಕರು ಹಾಗೂ ಚಾಲಕರ ಸಂಘದಿಂದ ಹೊಳಲ್ಕೆರೆ ಪಟ್ಟಣದಲ್ಲಿ ಗುರುವಾರ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಂಡಾಂಭೆ ಭಾವಚಿತ್ರಕ್ಕೆ ಪಷ್ಪನಮನ ಸಲ್ಲಿಸಿ ಮಾತನಾಡಿದರು.
ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಇವುಗಳನ್ನು ಆಚರಿಸುವುದರ ಜೊತೆಗೆ ಏನೇನು ಅಭಿವೃದ್ದಿಯಾಗಿದೆ ಎನ್ನುವುದನ್ನು ಕ್ಷೇತ್ರದ ಜನರಿಗೆ ತಿಳಿಸುವುದು ಬಹಳ ಮುಖ್ಯ. ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾಗಿದೆ. ಅನೇಕರು ಹೊಳಲ್ಕೆರೆಯಲ್ಲಿ ಎಂ.ಎಲ್.ಎ.ಗಳಾಗಿ ಹೋಗಿದ್ದಾರೆ. ಯಾರ್ಯಾರೂ ಏನೇನು ಅಭಿವೃದ್ದಿ ಮಾಡಿದ್ದಾರೆನ್ನುವುದನ್ನು ಗಮನಿಸಬೇಕಾಗಿರುವುದು ಕ್ಷೇತ್ರದ ಮತದಾರರು ಎನ್ನುವುದನ್ನು ನೀವುಗಳು ಮರೆಯಬಾರದು. ಶಾಶ್ವತವಾಗಿ ಕುಡಿಯುವ ನೀರು ವಿದ್ಯುತ್ ಸಮಸ್ಯೆ ನೀಗಿಸಿದ್ದೇನೆ. ಕ್ಷೇತ್ರಾದ್ಯಂತ ಕೆರೆಕಟ್ಟೆ, ಚೆಕ್‍ಡ್ಯಾಂಗಳನ್ನು ನಿರ್ಮಿಸಿದ್ದೇನೆ. ಸಿ.ಸಿ.ರಸ್ತೆ, ಆಸ್ಪತ್ರೆ ನಿರ್ಮಾಣ, ಬಸ್‍ನಿಲ್ದಾಣ, ಅಂಬೇಡ್ಕರ್ ಭವನ, ಸ್ಟೇಡಿಯಂ, ಶಾಲೆ, ಈಜುಕೊಳ, ಮಿನಿವಿಧಾನಸೌದ, ಕಂದಾಯ ಭವನವಾಗಿದೆ. ಇಡಿ ಹೊಳಲ್ಕೆರೆ ತಾಲ್ಲೂಕನ್ನು ಅಭಿವೃದ್ದಿಪಡಿಸುವಾಗ ಅನೇಕ ತೊಂದರೆಗಳು ಎದುರಾದವು. ಯಾವುದನ್ನು ಲೆಕ್ಕಿಸದೆ ಅಧಿಕಾರ ಇದ್ದಾಗ ಹತ್ತಾರು ಜನಕ್ಕೆ ಒಳ್ಳೆಯದು ಮಾಡಬೇಕೆಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಹಗಲು ರಾತ್ರಿ ಶ್ರಮಿಸಿದ್ದೇನೆಂದು ಹೇಳಿದರು.
ಪರಿಶಿಷ್ಠ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗದ ಮಕ್ಕಳಿಗೆ ವಸತಿ ಶಾಲೆಗಳನ್ನು ಕಟ್ಟಿಸಿದ್ದೇನೆ. ಸರ್ಕಾರಿ ಶಾಲೆಯ ಮಕ್ಕಳು ಗ್ರಾಮಗಳಿಂದ ಬರಲು ತೊಂದರೆಯಾಗುತ್ತದೆಂದು ನನ್ನ ಅನುದಾನದಲ್ಲಿ ಉಚಿತವಾಗಿ ಬಸ್‍ಗಳನ್ನು ನೀಡಿದ್ದೇನೆ. ಚುನಾವಣೆಯಲ್ಲಿ ಮತ ಹಾಕುವುದು ಒಂದು ನಿಮಿಷದ ಕೆಲಸ. ನಿಮ್ಮ ಕಷ್ಠ-ಸುಖ, ಸಮಸ್ಯೆಗಳನ್ನು ಆಲಿಸಿ ಅಭಿವೃದ್ದಿ ಪಡಿಸುವವರು ಯಾರು ಎನ್ನುವುದನ್ನು ಆಲೋಚಿಸಿ ಮತ ನೀಡಿ ಎಂದು ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿದರು.
ಪುರುಸಭೆ ಉಪಾಧ್ಯಕ್ಷ ಕೆ.ಸಿ.ರಮೇಶ್, ಹೊಳಲ್ಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಮೂರ್ತಿ, ಗುತ್ತಿಗೆದಾರ ಮಾರುತೇಶ್, ಪುರಸಭೆ ಸದಸ್ಯ ಮುರುಗೇಶ್, ಕನ್ನಡ ಸಾರಥಿ ಸೈನ್ಯ ಅಧ್ಯಕ್ಷ ಶ್ರೀನಿವಾಸ್, ಲಘು ವಾಹನ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಪಿ.ಹನುಮಂತಪ್ಪ, ಗೂಡ್ಸಿಗಾಡಿ ಸಂಘದ ಉಪಾಧ್ಯಕ್ಷ ಉಸ್ಮಾನ್, ಪಟ್ಟಣದ ಆಟೋ ಮಾಲೀಕರು ಮತ್ತು ಚಾಲಕರು ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು.

[t4b-ticker]

You May Also Like

More From Author

+ There are no comments

Add yours