PWD ಇಂಜಿನಿಯರ್ ಸತೀಶ್ ಬಾಬು ಮನೆ ಮೇಲೆ ಲೋಕಯುಕ್ತ ದಾಳಿ

 

ಬೆಂಗಳೂರು/ಚಿತ್ರದುರ್ಗ: ಲೋಕಾಯುಕ್ತ (Lokayukta) ಅಧಿಕಾರಿಗಳ ತಂಡ ಇಂದು ಸರ್ಕಾರಿ ಅಧಿಕಾರಿಗಳು ಮಲಗಿ ಏಳುವಷ್ಟರಲ್ಲಿ ಹಲವು ಅಧಿಕಾರಿಗಳಿಗೆ ಶಾಕ್​ ಕೊಟ್ಟಿದ್ದಾರೆ. ಬೆಂಗಳೂರು, ಬಳ್ಳಾರಿ, ರಾಮನಗರ, ಚಿತ್ರದುರ್ಗ ಸೇರಿದಂತೆ ರಾಜ್ಯದ 30 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಬೆಂಗಳೂರಿನ ನಾಲ್ಕು ಹಾಗೂ ರಾಮನಗರದ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಈ ದಾಳಿ ನಡೆಸಿದೆ. ಪಿಡಬ್ಯೂಡಿ ಪಿಡಿಓ, ಬೆಸ್ಕಾಂ , ಕೆಆರ್​ಐಡಿಎಲ್ ಹಾಗೂ ಪಂಚಾಯತ್ ಸದಸ್ಯ ಮತ್ತು ಟೌನ್ ಪ್ಲ್ಯಾನಿಂಗ್ ಅಧಿಕಾರಿ​ಗೆ ಸೇರಿದ ಜಾಗಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಲೋಕೋಪಯೋಗಿ (PWD)ಇಲಾಖೆ ಮುಖ್ಯ ಇಂಜಿನಿಯರ್ ಆಗಿರುವ ಚಿತ್ರದುರ್ಗದಲ್ಲೂ ಹಲವು ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದ ಸತೀಶ್ ಬಾಬು ಅವರ ಬೆಂಗಳೂರು ಮತ್ತು ಚಿತ್ರದುರ್ಗ ನಗರದ ಜೆಸಿಆರ್ ಬಡಾವಣೆ ಮನೆಯ ಮೇಲೆ ಲೋಕಾಯುಕ್ತರು ದಾಳಿ ನಡೆಸಿ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಪಿ.ಹೆಚ್.ಡಿ :ಶಾಕ್ತ ಪರಂಪರೆ ಮಹಾಪ್ರಬಂಧ : ಕೆ.ಯು.ಶ್ರೀಧರಮೂರ್ತಿಗೆ ಡಾಕ್ಟರೇಟ್

ಸತೀಶ್ ಬಾಬು ಅವರ ಬೆಂಗಳೂರು ನಿವಾಸದ ಮೇಲೆಯೂ ದಾಳಿ‌ ಮಾಡಿದ್ದಾರೆ.ಲೋಕಾಯುಕ್ತ ಅಧಿಕಾರಿಗಳ ದಾಳಿಯಲ್ಲಿ ಸತೀಶ್​ ಬಾಬು ಅವರ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಸತೀಶ್ ಬಾಬು ಈ ಹಿಂದೆ ಚಿತ್ರದುರ್ಗ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours