ಮಹಾನ್ ಪುರುಷರ ಆದರ್ಶ, ತತ್ವ ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಪಾಲಿಸೋಣ:ಶಾಸಕ‌ ಎಂ.ಚಂದ್ರಪ್ಪ

 

ಚಿತ್ರದುರ್ಗ: ಮಹರ್ಷಿ ವಾಲ್ಮೀಕಿ ವಿರಚಿತ ರಾಮಾಯಣ ಮಹಾಕಾವ್ಯದಲ್ಲಿ ವಿಭಿನ್ನ ರೀತಿಯ ಸಾಕಷ್ಟು ಪಾತ್ರಗಳಿವೆ. ಅಂತಹ ಮಹಾನ್ ಪುರುಷರ ಆದರ್ಶ, ತತ್ವ ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಪಾಲಿಸೋಣ ಎಂದು ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಹಾಗೂ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ನಗರದ ಕೆಎಸ್‌ಆರ್‌ಟಿಸಿ ಘಟಕದ ಆವರಣದಲ್ಲಿ ಕೆಎಸ್‌ಆರ್‌ಟಿಸಿ ನಿಗಮದ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಮ, ಲಕ್ಷಣ, ಸೀತೆ ಯಾವ ರೀತಿಯ ಆದರ್ಶಗಳನ್ನು ಹೊಂದಿದ್ದರೂ, ಅದೇ ರೀತಿಯಲ್ಲಿ ರಾವಣನು ಸಹ ಆದರ್ಶಗಳನ್ನು ಒಳಗೊಂಡಿದ್ದ. ಶ್ರೀರಾಮ ರಾವಣನ ಮೇಲೆ ಯುದ್ಧಕ್ಕೆ ಹೊರಡುವ ಸಂದರ್ಭದಲ್ಲಿ ಬ್ರಾಹ್ಮಣನ ವೇಷದಲ್ಲಿ ರಾವಣ ರಾಮನಿಗೆ ಜಯಶೀಲನಾಗು ಎಂದು ಅರಸಿ ಕಂಕಣ ಕಟ್ಟಿ ಬರುತ್ತಾನೆ. ಇಂತಹ ಉತ್ತಮ ಆದರ್ಶಗಳನ್ನು ರಾವಣ ಒಳಗೊಂಡಿದ್ದ ಎಂದು ಹೇಳಿದರು.

ನಮ್ಮ ಸಾರಿಗೆ ನಿಗಮ ಸಾಕಷ್ಟು ಸಂಕಷ್ಟದಲ್ಲಿದೆ. ಜೊತೆಗೆ ಡೀಸೆಲ್ ದರವು ಸಹ ಜಾಸ್ತಿಯಾಗಿದೆ. ಆದರೂ ಸಹ ಪ್ರಯಾಣಿಕರ ಹಿತ ದೃಷ್ಟಿಯಿಂದ ಬಸ್ ಟಿಕೆಟ್ ದರವನ್ನು ಹೆಚ್ಚಳ ಮಾಡುವುದಿಲ್ಲ. ನಮ್ಮ ನಾಲ್ಕು ನಿಗಮದಿಂದ ಒಂದು ಲಕ್ಷದ ಮೂವತ್ತು ಸಾವಿರ ನೌಕರರಿದ್ದಾರೆ. ಅವರ ಹಿತ ಕಾಪಾಡುವುದೇ ನಮ್ಮ ಆದ್ಯ ಕರ್ತವ್ಯವಾಗಿದೆ. ದೇಶದಲ್ಲಿಯೇ ಅತ್ಯುತ್ತಮವಾದಂತಹ ಸಾರಿಗೆ ನಿಗಮ ಅಂದರೆ ಅದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ೬೦೦ ಬಸ್ ೫೦ ಸ್ಲೀಪರ್ ೫೦ ವೋಲ್ವೋ ಬಸ್ ಖರೀದಿಸುವುದಕ್ಕೆ ಈಗಾಗಲೇ ಹಣ ಬಿಡುಗಡೆ ಮಾಡಿದ್ದಾರೆ. ಸಾರಿಗೆ ನೌಕರರ ಭದ್ರತೆ ಹಿತ ದೃಷ್ಟಿಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಒಡಂಬಡಿಕೆ ಮಾಡಿಕೊಂಡು ಒಂದು ರೂಪಾಯಿ ಹಣ ಕಟ್ಟಿಸಿಕೊಳ್ಳದೇ, ವಿಮಾ ಸೌಲಭ್ಯ ನೀಡಲಾಗುತ್ತಿದೆ. ಇದರಲ್ಲಿ ನೌಕರರು ಅಪಘಾತಕ್ಕೆ ಒಳಗಾದಂತ ಸಂದರ್ಭದಲ್ಲಿ ರೂ.೫೦ ಲಕ್ಷ ಹಾಗೂ ಅಪಘಾತದಲ್ಲಿ ದೇಹದ ಅಂಗಾAಗಗಳನ್ನು ಕಳೆದುಕೊಂಡರೆ ರೂ.೨೦ ಲಕ್ಷ ಸಣ್ಣ ಪುಟ್ಟ ಗಾಯಗಳಾದರೆ ರೂ. ೧೦ ಲಕ್ಷ ವಿಮಾ ಸೌಲಭ್ಯ ಪಡೆಯಬಹುದಾಗಿದೆ ಎಂದರು.

ಹಲವಾರು ವಿಮಾ ಕಂಪನಿಗಳು ಸರ್ಕಾರದ ಮುಂದೆ ಬಂದು ಸಾರಿಗೆ ನೌಕರರ ಹಿತ ದೃಷ್ಟಿಗಾಗಿ ೫೪ ರೂಪಾಯಿಗಳ ವಿಮೆಯನ್ನು ತಿಂಗಳಿಗೆ ನೀಡಿದರೆ ಸಾರಿಗೆ ನೌಕರರಿಗೆ ಅಪಘಾತವಾದಾಗ ೫೦ ಲಕ್ಷ, ದೇಹದ ಅಂಗಾAಗಗಳನ್ನು ಕಳೆದುಕೊಂಡರೆ ೨೦ ಲಕ್ಷ, ಸಣ್ಣಪುಟ್ಟ ಗಾಯಗಳಾದರೆ ೧೦ ಲಕ್ಷ ನೀಡುವುದಕ್ಕೆ ಇನ್ನೊಂದು ವಾರದಲ್ಲಿ ವಿಮಾ ಕಂಪನಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾರಿಗೆ ನೌಕರರ ಅಪಘಾತಕ್ಕೆ ಒಳಗಾದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ರೂ.೧ಕೋಟಿ ವಿಮಾ ಹಣ ಬರುವಂತೆ ಕ್ರಮ ಕೈಗೊಳ್ಳಲಾಗಿದೆ. ಸಾರಿಗೆ ಸಂಸ್ಥೆಯ ಡ್ರೈವರ್ ಹಾಗೂ ಕಂಡಕ್ಟರ್ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಯಾಕೆಂದರೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವಂತಹ ಜವಾಬ್ದಾರಿ ಅವರ ಮೇಲಿದೆ. ಸಾರಿಗೆ ನಿಗಮದಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಲಾಗಿದೆ ಎಂದು ತಿಳಿಸಿದರು.

ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆಯಿಂದ ನಿಗಮಕ್ಕೆ ೫ ರಿಂದ ೬ ಸಾವಿರ ಕೋಟಿ ಆದಾಯ ಬರಲಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ವಿತರಣೆಯಿಂದ ಸಾರಿಗೆ ನಿಗಮಕ್ಕೆ ಆದಾಯ ತರುವಂತಹ ಕೆಲಸ ಮಾಡಲಾಗುತ್ತಿದೆ. ಇದರ ಜೊತೆಗೆ ಪ್ರತಿ ತಿಂಗಳು ಒಂದನೇ ತಾರೀಖಿನಂದು ನಿಮ್ಮ ಖಾತೆಗೆ ಸಂಬಳ ಹಾಕುವುದಕ್ಕೂ ಸಹ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸಾರಿಗೆ ಸಂಸ್ಥೆ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವಂತೆ ಮಾಡಲು ಹಲವಾರು ಯೋಜನೆಗಳನ್ನ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

 

ಸಾಹಿತಿ ಬಿ.ಎಲ್.ವೇಣು ಮಾತನಾಡಿ, ಅಣ್ಣ ತಮ್ಮಂದಿರು ಯಾವ ರೀತಿ ಇರಬೇಕೆಂದರೆ ರಾಮಾಯಣದ ರಾಮ ಲಕ್ಷ್ಮಣ ರೀತಿ ಇರಬೇಕು. ಅವರ ಮಾದರಿ ಅನುಸರಿಸಿದಾಗ ಮಾತ್ರ ಅಣ್ಣ-ತಮ್ಮಂದಿರಿಗೆ ಬೆಲೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ರಾಮನಿಗೆ ಸೇವಕನಾಗಿದ್ದ ಹನುಮಂತ ರಾಮನನ್ನು ತನ್ನ ಹೃದಯ ಭಾಗದಲ್ಲಿ ಇಟ್ಟುಕೊಂಡು ಆರಾಧಿಸುತ್ತಿದ್ದ. ಹನುಮ ನಿಸ್ವಾರ್ಥ ಸೇವಕನಾಗಿ ರಾಮನ ಜೊತೆ ಇದ್ದವನು. ರಾಮನಿಗೋಸ್ಕರ ವಾನರ ಸೇನೆಯಿಂದಲೇ ಲಂಕೆಗೆ ಸೇತುವೆ ಕಟ್ಟಿದರು. ಹನುಮ ತನ್ನ ಬಾಲದಿಂದ ಲಂಕೆಗೆ ಬೆಂಕಿ ಹಚ್ಚಿದ ಅದಕ್ಕೆ ರಾಮನ ಬಂಟನಾಗಿ ಹನುಮ ರಾಮಾಯಣದಲ್ಲಿ ಗುರುತಿಸಿಕೊಂಡಿದ್ದ ಎಂದರು.

ರಾವಣನು ಪರಮ ಶಿವಭಕ್ತನಾಗಿದ್ದ ಅವನು ಮಾಡಿದ ಒಂದು ತಪ್ಪಿಗಾಗಿ ಹತ್ತು ತಲೆಗಳಲ್ಲಿ ಒಂದು ತಲೆಯನ್ನು ಉಳಿಸಿಕೊಳ್ಳುವುದಕ್ಕೂ ಕೂಡ ಆಗಲಿಲ್ಲ. ಇಂತಹ ಆದರ್ಶಮಯ ಪಾತ್ರಗಳನ್ನು ವಾಲ್ಮೀಕಿ ಮಹರ್ಷಿಗಳು ಕೊಟ್ಟಿದ್ದಾರೆ. ಯಾವ ರೀತಿ ಬದುಕಬೇಕೆಂಬ ಆದರ್ಶ ಮೌಲ್ಯಗಳನ್ನು ತಿಳಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಕುವೆಂಪು ಅವರಿಗೆ ರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಿದೆ ಎಂದರೆ ವಾಲ್ಮೀಕಿ ರಚಿಸಿದ ರಾಮಾಯಣ ಗಟ್ಟಿ ಕಾವ್ಯ ಕೃತಿಯಾಗಿ ಅವರಿಗೆ ಸ್ಫೂರ್ತಿ ತುಂಬಿದೆ. ವಾಲ್ಮೀಕಿಯ ರಾಮಾಯಣದಲ್ಲಿ ಯಾವ ರೀತಿ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟಿದೆ ಎಂದರು.
ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗದ

 

ಪ್ರಾಧ್ಯಾಪಕ ಡಾ.ಜೆ. ಕರಿಯಪ್ಪ ಮಾಳಿಗೆ ಉಪನ್ಯಾಸ ನೀಡಿ, ಮಹರ್ಷಿ ವಾಲ್ಮೀಕಿ ಅವರ ಕೃತಿ ದೇಶ, ಗಡಿ, ಧರ್ಮದ ಎಲ್ಲೆ ಮೀರಿ ವಿಶ್ವವ್ಯಾಪಿಯನ್ನು ಪಡೆದಿದೆ. ಇದಕ್ಕೆ ಮುಖ್ಯ ಕಾರಣ ಆ ಕೃತಿಯ ಮಾನವೀಯ ಮೌಲ್ಯಗಳು ಮತ್ತು ಆದರ್ಶಗಳು. ಈ ನೆಲಕ್ಕೆ ಜೀವನದ ನಿಜ ಮಾರ್ಗ ತೋರಿದ ವಾಲ್ಮೀಕಿಯ ತತ್ವಗಳನ್ನು ನಿತ್ಯ ಬದುಕಿನ ಸಂದರ್ಭದಲ್ಲಿ ಅಳವಡಿಸಿಕೊಂಡಾಗ ಬದುಕಿನ ಮೌಲ್ಯ ತಿಳಿಯುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಕೆಎಸ್‌ಆರ್‌ಟಿಸಿ ನಿಗಮದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಯಾವ
ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಮುಖಂಡರಾದ ಭೂತಯ್ಯ, ಕೆ.ಎಸ್.ಆರ್.ಟಿ.ಸಿ ನಿಗಮದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours