ಮಹಿಳೆ ಮೇಲೆ ksrtc ಬಸ್ ಹರಿದು ಸ್ಥಳದಲೇ ಸಾವು

 

ಬೆಂಗಳೂರು:   ಕೆಎಸ್​ಆರ್​ಟಿಸಿ ಬಸ್ (KSRTC bus) ಹರಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಗರದ ಮೆಜೆಸ್ಟಿಕ್​ನ ಸಂಗೊಳ್ಳಿ ರಾಯಣ್ಣ ಸೇತುವೆ ಬಳಿ ನಡೆದಿದೆ. ಲತಾ ಮೃತ ಮಹಿಳೆ. ಕೆಎಸ್​ಆರ್​ಟಿಸಿ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೃತ ಮಹಿಳೆ ಮತ್ತು ಪತಿ ಬೈಕ್​ನಲ್ಲಿ ಬಟ್ಟೆ ಅಂಗಡಿಗೆ ಶಾಪಿಂಗ್​ಗಾಗಿ ತೆರಳುತ್ತಿದ್ದರು.

ಮತ್ತೊಂದು ಬೈಕ್​ನಲ್ಲಿ ಪುತ್ರಿ ಕೂಡ ತೆರಳುತ್ತಿದ್ದರು. ಈ ವೇಳೆ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಇಳಿಯುವ ವೇಳೆ ವೇಗವಾಗಿ ಬಲಕ್ಕೆ ಬಸ್ ಬಂದಿದ್ದು, ಬಸ್​​ ಹಿಂಬದಿ ದ್ವಿಚಕ್ರ ವಾಹನಕ್ಕೆ ಟಚ್ ಆಗಿ ಇಬ್ಬರು ರಸ್ತೆಗೆ ಬಿದ್ದಿದ್ದಾರೆ.ಈ ವೇಳೆ ಮಹಿಳೆ ಮೇಲೆ ಬಸ್​​ ಹರಿದಿದೆ. ಸದ್ಯ ಲತಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಉಪ್ಪಾರಪೇಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

[t4b-ticker]

You May Also Like

More From Author

+ There are no comments

Add yours