ಬುದ್ದ ಬಸವ ಅಂಬೇಡ್ಕರ್ ವಾಲ್ಮೀಕಿ ಹೆಸರಲ್ಲಿ ಕೆ.ಎನ್.ರಾಜಣ್ಣ ಪ್ರಮಾಣ ವಚನ, ಅವರ ಸಂಪೂರ್ಣ ಮಾಹಿತಿ ಇಲ್ಲಿದೆ.

 

ಬೆಂಗಳೂರು, ಮೇ 27: ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಕಗ್ಗಂಟು ಬಗೆಹರಿದಿದ್ದು, ಮಧುಗಿರಿಯ ಶಾಸಕ ಕೆಎನ್‌ ರಾಜಣ್ಣ ಅವರು ಸಚಿವರಾಗಿ ಬುದ್ಧ, ಬಸವ, ಅಂಬೇಡ್ಕರ್‌ ಹಾಗೂ ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ಅಂತಿಮಗೊಂಡಾಗಲೇ ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡು ಸಚಿವ ಸ್ಥಾನಕ್ಕಾಗಿ ತುಮಕೂರು ಜಿಲ್ಲೆಯಿಂದಲೂ ಒತ್ತಡ ತಂತ್ರ ಆರಂಭವಾಗಿತ್ತು. ಈಗ ಕೊನೆಗೆ ಕೆಎನ್‌ ರಾಜಣ್ಣ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ತುಮಕೂರು ತಾಲೂಕಿನ ಕ್ಯಾತಸಂದ್ರದಲ್ಲಿ 1951 ಏಪ್ರಿಲ್​ 13 ರಂದು ಜನಿಸಿದ ಇವರು ಬಿಎಸ್ಸಿ, ಎಲ್​ಎಲ್​ಬಿ ಮುಗಿಸಿದ್ದಾರೆ. ಬಳಿಕ ವಕೀಲ ವೃತ್ತಿ ಮಾಡುತ್ತ ಕೃಷಿಯಲ್ಲಿ ತೊಡಗಿಕೊಂಡರು. ನಂತರ ಶ್ರೀಮತಿ ಎಸ್​ ಆರ್​ ಶಾಂತಲಾ ಅವರನ್ನ ಮದುವೆಯಾದರು. ಇವರಿಗೆ ಇಬ್ಬರು ಪುತ್ರರು ಹಾಗೂ ಒಬ್ಬಳು ಮಗಳಿದ್ದಾಳೆ. ರಾಜಣ್ಣ ಅವರು ಮೊದಲ ಬಾರಿ ಸಚಿವರಾಗಿದ್ದಾರೆ. 1978ರಲ್ಲಿ ರಾಜಕೀಯ ಪ್ರವೇಶ ಮಾಡಿದ್ದ ಕೆಎಚ್‌ ರಾಜಣ್ಣ ಅವರು ಅಪೆಕ್ಸ್‌ ಬ್ಯಾಂಕ್‌ನ ಅಧ್ಯಕ್ಷರಾಗಿದ್ದರು, ಅಲ್ಲದೆ 5 ಬಾರಿ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರೂ ಆಗಿದ್ದರು.

ತುಮಕೂರಿನಿಂದ ಹಿರಿಯ ನಾಯಕ ಟಿಬಿ ಜಯಚಂದ್ರ ಸಚಿವ ಸ್ಥಾನದ ರೇಸ್‌ನಲ್ಲಿದ್ದರು. ಅಲ್ಲದೆ ಕೆ.ಷಡಕ್ಷರಿ ಸಹ ನನಗೂ ಅವಕಾಶ ಕೊಡಿ ಎನ್ನುತ್ತಿದ್ದರು. ಮಧುಗಿರಿ ಕ್ಷೇತ್ರದಲ್ಲಿ ಸುಮಾರು 35ಸಾವಿರಕ್ಕೂ ಅಧಿಕ ಮತಗಳಿಂದ ಜಯಭೇರಿ ಬಾರಿಸಿರುವ ಕ್ಯಾತ್ಸಂದ್ರ ರಾಜಣ್ಣ (ಕೆ.ಎನ್.ರಾಜಣ್ಣ) ಅವರು ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಬಹಿರಂಗವಾಗಿಯೇ ಹೇಳಿದ್ದರು. ರಾಜಣ್ಣ ಬರೀ ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಸಹಕಾರ ಖಾತೆಯೇ ಬೇಕೆಂದು ಹೇಳಿಕೆಯನ್ನು ನೀಡಿದ್ದರು.
1951ರಲ್ಲಿ ಜನಿಸಿದ ಕೆಎನ್‌ ರಾಜಣ್ಣ ಅವರಿಗೆ ಈಗ 72 ವರ್ಷ. 2008ರಿಂದ ಸಾಮಾನ್ಯ ಕ್ಷೇತ್ರವಾದ ಮಧುಗಿರಿಯಲ್ಲಿ ಪರಿಶಿಷ್ಟ ಪಂಗಡ ಸಮುದಾಯದ ಕೆ.ಎನ್. ರಾಜಣ್ಣ 2013ರಲ್ಲಿ ಗೆದ್ದಿದ್ದರು. 2008ರಿಂದ ಮಧುಗಿರಿಯನ್ನು ಮತ್ತೆ ಸಾಮಾನ್ಯ ಕ್ಷೇತ್ರವನ್ನಾಗಿ ಮಾಡಲಾಯ್ತು. ಆ ಚುನಾವಣೆಯಲ್ಲಿ ಮೂರು ಬಾರಿ ಶಾಸಕರಾಗಿದ್ದ ಒಕ್ಕಲಿಗ ಸಮುದಾಯದ ಚೆನ್ನಿಗಪ್ಪನವರ ಪುತ್ರ ಡಿ.ಸಿ ಗೌರಿಶಂಕರ್ ಮತ್ತು ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ವಾಲ್ಮೀಕಿ/ನಾಯಕ ಸಮುದಾಯದ ಕೆ.ಎನ್. ರಾಜಣ್ಣ ಪರಸ್ಪರ ಎದುರಾಳಿಗಳಾದರು.

ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಸಿಕೊಂಡಿದ್ದ ಮತ್ತು ಹಲವು ಸಹಕಾರಿ ಬ್ಯಾಂಕುಗಳ ಅಧ್ಯಕ್ಷರಾಗಿದ್ದ ಕ್ಯಾತ್ಸಂದ್ರ ಎನ್. ರಾಜಣ್ಣನವರು 1988-2002ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು. 2004ರಲ್ಲಿ ಬೆಳ್ಳಾವಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2008ರಲ್ಲಿ ಬೆಳ್ಳಾವಿ ರದ್ದಾದರಿಂದ ಅವರು ಮಧುಗಿರಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದರು. ಆಗ ತೀವ್ರ ಪೈಪೋಟಿ ನಡೆದು ಕೇವಲ 563 ಮತಗಳ ಅಂತರದಲ್ಲಿ ಗೌರಿಶಂಕರ್ ಗೆಲುವು ಕಂಡರು.

ಆದರೆ ಕೆಲವೇ ದಿನಗಳಲ್ಲಿ ಶಾಸಕ ಗೌರಿಶಂಕರ್ ಬಿಜೆಪಿಯ ಆಪರೇಷನ್‌ಗೆ ಒಳಗಾದರು. ಹಾಗಾಗಿ ಇಲ್ಲಿ ಉಪ ಚುನಾವಣೆ ನಡೆಯಿತು. ಆಗ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿಯವರು ಕಾಂಗ್ರೆಸ್‌ನ ಕೆ.ಎನ್. ರಾಜಣ್ಣ, ಬಿಜೆಪಿಯ ಸಿ.ಚೆನ್ನಿಗಪ್ಪನವರ ಎದುರು ಜಯ ಸಾಧಿಸಿದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ಎನ್. ರಾಜಣ್ಣ ಮತ್ತು ಐಎಎಸ್ ಅಧಿಕಾರಿಯಾಗಿದ್ದು ನಂತರ ರಾಜೀನಾಮೆ ನೀಡಿ ಜೆಡಿಎಸ್‌ನಿಂದ ಕಣಕ್ಕಿಳಿದ ಒಕ್ಕಲಿಗ ಸಮುದಾಯದ ವೀರಭದ್ರಯ್ಯನವರ ನಡುವೆ ಹಣಾಹಣಿ ನಡೆಯಿತು. ರಾಜಣ್ಣನವರು 75,086 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ವೀರಭದ್ರಯ್ಯ 60,027 ಮತಗಳನ್ನು ಪಡೆದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಸುಮಿತ್ರದೇವಿ ಕೇವಲ 1,741 ಸಂಪುಟದಲ್ಲಿ ಸಚಿವರಾದ ಮಧುಗಿರಿಯ ಕೆಎನ್‌ ರಾಜಣ್ಣ

 

[t4b-ticker]

You May Also Like

More From Author

+ There are no comments

Add yours