ಮದಕರಿನಾಯಕರ ನೂತನ ಭಾವಚಿತ್ರ ಲೋಕಾರ್ಪಣೆ ಮಾಡಿದ ಚಿತ್ರನಟ ಕಿಚ್ಚ ಸುದೀಪ್

 

 

 

 

ಚಿತ್ರದುರ್ಗ: ನಾಡ ದೊರೆ ಶ್ರೀ ರಾಜವೀರ ಮದಕರಿನಾಯಕ ಅವರ ನೂತನ ಭಾವಚಿತ್ರ ತುಂಬಾ ಸುಂದರವಾಗಿ ಮೂಡಿದ್ದು ನಾನು ಬಿಡುಗಡೆಗೊಳಿಸಿರುವುದು ತುಂಬಾ ಸಂತೋಷ ತಂದಿದೆ ಎಂದು ಚಿತ್ರನಟ ಸುದೀಪ್(sudeep)  ಹೇಳಿದರು.

ಬೆಂಗಳೂರಿನ ಜೆ.ಪಿ.ನಗರದ ಕಿಚ್ಚ ಸುದೀಪ್ ಅವರ ನಿವಾಸದಲ್ಲಿ ಕಿಚ್ಚ ಸುದೀಪ್ ಅವರು ಇಂದು ಬೆಳಗ್ಗೆ ೧೦-೩೦ ಗಂಟೆಗೆ ಖ್ಯಾತ ಚಿತ್ರ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮದಕರಿ ನಾಯಕರ ತಾರುಣ್ಯದ ಭಾವಚಿತ್ರವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಮದಕರಿನಾಯಕ ಅವರ ಭಾವಚಿತ್ರವನ್ನು ಅದ್ಬುತವಾಗಿದೆ. ನೋಡಿ ತುಂಬಾ ಸಂತೋಷವಾಯಿತು. ಮದಕರಿ ಜಯಂತಿ ಉತ್ತಮವಾಗಿ ನಡೆಯಲಿ ಎಲ್ಲಾರಿಗೂ ಶುಭವಾಗಲಿ ಎಂದು ಶುಭ ಹಾರೈಸಿದರು.

 

 

ನಾಯಕ ಸಮಾಜದ ತಾಲೂಕು ಅಧ್ಯಕ್ಷ  ಬಿ.ಕಾಂತರಾಜ್ ಮಾತನಾಡಿ ನಮ್ಮ ಸಮಾಜದವರಾದ ಚಿತ್ರನಟ ಸುದೀಪ್ ಅವರು ನೂತನ ಮದಕರಿನಾಯಕ ಭಾವಚಿತ್ರ ಬಿಡುಗಡೆಗೊಳಿಸಿರವುದು ನಮಗೆಲ್ಲ ಹರ್ಷ ತಂದಿದೆ. ಅವರು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿ ಎಂದು ಪ್ರೋತ್ಸಹಿಸಿದ್ದಾರೆ ಎಂದರು.
ಶ್ರೀ ರಾಜವೀರ ಮದಕರಿನಾಯಕನ ಜಯಂತಿ ಅಂಗವಾಗಿ ಈ ಬಾರಿ ನೂತನವಾದ ಭಾವಚಿತ್ರ ಹೊರ ತರಬೇಕು ಎಂಬ ಉದ್ದೇಶದಿಂದ ಸಮಾಜದ ಅನೇಕ ಮುಖಂಡರ ಜೊತೆ ಚರ್ಚಿಸಿ ನಂತರ ಇತಿಹಾಸಕಾರರು, ಸಾಹಿತಿಗಳು, ಕಲಾವಿದರು, ಸಂಶೋಧಕರಾದ ಬಿ.ಎಲ್.ವೇಣು, ಲಕ್ಷ್ಮಣ ತೆಲಗಾವಿ, ಕಿರಣ್ ಕುಮಾರ್ ಅವರ ಬಳಿ ಅನೇಕ ಬಾರಿ ಚರ್ಚೆ ನಡೆಸಿ ಅವರ ಸಲಹೆ ಪಡೆಯುವ ಮೂಲಕ ಮದಕರಿನಾಯಕರು ವೀರ ಮರಣ ಸಂದರ್ಭದಲ್ಲಿ ಎಷ್ಟು ವರ್ಷ ವಯಸ್ಸು ಆ ಸಂದರ್ಭದಲ್ಲಿ ಅವರು ಭಾವಚಿತ್ರ ಹೇಗಿತ್ತು, ಯಾವೆಲ್ಲ ಆಭರಣಗಳು, ಉಡುಪುಗಳು, ದೇಹದ ಚಿತ್ರಣ ಸಂಪೂರ್ಣ ಮಾಹಿತಿ ಪಡೆದುಕೊಂಡವೆ .ನಂತರ ಚಿತ್ರದುರ್ಗ ನಗರದ ಹೆಸರಾಂತ ಕ್ರಿಯೇಟಿವ್ ವೀರೇಶ್ ಅವರ ಬಳಿ ಚರ್ಚಿಸಿ ಅವರು ಒಪ್ಪಿಕೊಂಡರು.ನAತರ ಅದನ್ನು ಸತತವಾಗಿ ೨೦ ದಿನಗಳ ಸಮಯದಲ್ಲಿ ರಾಜವೀರ ಮದಕರಿನಾಯಕ ಭಾವಚಿತ್ರವನ್ನು ಅದ್ಭುತವಾಗಿ ಚಿತ್ರಿಸಿಕೊಟ್ಟಿದ್ದಾರೆ. ಇದಕ್ಕೆ ಸಂಶೋಧಕರು ಸಾಕಷ್ಟು ನಿತ್ಯ ಸಲಹೆಗಳು ನೀಡಿರುವವುದಕ್ಕೆ ಅವರಿಗೆ ಮತ್ತು ಚಿತ್ರ ಬರೆದ ಕ್ರಿಯೇಟಿವ್ ವೀರೇಶ್ ಅವರಿಗೆ ನಮ್ಮ ಸಮಾಜದ ಪರವಾಗಿ ಧನ್ಯವಾದಗಳು ಅರ್ಪಿಸುತ್ತನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ದೀಪಕ್ , ನಾಯಕ ಸಮಾಜದ ಜಿಲ್ಲಾಧ್ಯಕ್ಷ ಎಚ್.ಜೆ ಕೃಷ್ಣಮೂರ್ತಿ,ಮುಖಂಡರಾದ ಅಂಜಿನಪ್ಪ, ಲಿಂಗನಾಯಕನಹಳ್ಳಿ ತಿಪ್ಪೇಸ್ವಾಮಿ, ಗೋಪಾಲ್ ಸ್ವಾಮಿ ನಾಯಕ್, ತಿಪ್ಪೇಸ್ವಾಮಿ, ಶ್ರೀ ಅಹೋಬಲ ಟಿವಿಎಸ್ ಮಾಲೀಕ ಅರುಣ್ ಕುಮಾರ್, ದರ್ಶನ್ ಇಂಗಳದಾಳ್, ಬ್ಯಾಂಕ್ ಕಿರಣ್ ಕುಮಾರ್, ಗೀರೀಶ್,ಗುರುನಾಥ್ ಸೇರಿ ಸಮಾಜದ ಮುಖಂಡರು ಮತ್ತು ಯುವಕರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours