ಬಿಜೆಪಿಗೆ ಬೆಂಬಲ ಸೂಚಿಸಿದ ಕಿಚ್ಚ ಸುದೀಪ್

 

ಬೆಂಗಳೂರು: ನಾನು ನನ್ನ ಚಿತ್ರರಂಗದ ದಿನಗಳಿಂದ ಕಷ್ಟ, ಸುಖವನ್ನು ಕಂಡು ಬೆಳೆದವನು. ಆ ಸಂದರ್ಭದಲ್ಲಿಯೂ ನನ್ನ ಬೆಂಬಲಕ್ಕೆ ನಿಂತವರು ಬಸವರಾಜ ಬೊಮ್ಮಾಯಿ ಅವರು. ಆ ಕ್ಷಣದಿಂದಲೂ ಬಸವರಾಜ ಬೊಮ್ಮಾಯಿ ಅವರನ್ನು ಮಾಮ ಎಂದೇ ಕರೆದುಕೊಂಡು ಬಂದಿದ್ದೇನೆ.

ಅಂತಹ ಅವರ ಪರವಾಗಿ ನನ್ನ ಬೆಂಬಲವಿದೆ ಎಂಬುದಾಗಿ ಕಿಚ್ಚ ಸುದೀಪ್ ಸ್ಪಷ್ಟಪಡಿಸಿದರು.

ನಗರದ ಅಶೋಕ ಹೊಟೇಲ್ ನಲ್ಲಿ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಆರಂಭದಲ್ಲಿ ಮಾತನಾಡಿದಂತ ಸಿಎಂ ಬಸವರಾಜ ಬೊಮ್ಮಾಯಿ, ನಿಮ್ಮ ಪ್ರಿಡಿಕ್ಷನ್ ಸತ್ಯವಾಗಿದೆ. ನಮ್ಮ ಕಿಚ್ಚ ಸುದೀಪ್, ನಮ್ಮವರ ಅತ್ಯಂತ ಆತ್ಮೀಯರು. ಅವರು ಇವತ್ತು ತಮ್ಮ ವಿಚಾರವನ್ನು ಮತ್ತು ನಿಲುವನ್ನು ಪ್ರಕಟಿಸಲಿದ್ದಾರೆ. ಅವರು ತಮ್ಮ ನಿಲುವನ್ನು ಪ್ರಕಟಿಸಲಿದ್ದಾರೆ. ಆನಂತ್ರ ನಾನು ಮಾತನಾಡುತ್ತೇನೆ. ಸುದೀಪ್ ಅವರು ರಾಜಕಾರಣದಲ್ಲಿ ಇಲ್ಲ. ಚಲನಚಿತ್ರರಂಗದಲ್ಲಿ ಇದ್ದಾರೆ ಎಂದರು.

ಈ ಬಳಿಕ ಮಾತನಾಡಿದಂತ ನಟ ಸುದೀಪ್ ಅವರು, ನನ್ನ ಚಲನಚಿತ್ರದ ಕಷ್ಟದ ದಿನಗಳಲ್ಲಿ ನನಗೆ ಬೆನ್ನೆಲುಭಾಗಿ ನಿಂತವರು ಮಾಮ ಎಂದೇ ಕರೆಯುವಂತ ಬಸವರಾಜ ಬೊಮ್ಮಾಯಿ ಅವರು ಆಗಿದ್ದಾರೆ. ನಾನು ಅವರ ಪರವಾಗಿ ನಿಲ್ಲುತ್ತಿದ್ದೇನೆ. ನಾನು ಬೆಳೆದು ಬಂದ ಹಾದಿಯಲ್ಲಿ ಗಾಡ್ ಫಾದರ್ ಇರುತ್ತಾರೆ. ಆ ಸಮಯದಲ್ಲಿ ನನಗೆ ತುಂಬಾ ಪ್ರೀತಿಯನ್ನು ತೋರಿಸಿದ್ದಾರೆ. ಮಾಮ ಆ ಸಮಯದಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದರು. ಆ ಸಮಯದಿಂದ ನನಗೆ ಪರಿಚಯ. ಅವರ ವ್ಯಕ್ತಿತ್ವಕ್ಕೆ ನಾನು ಬೆಂಬಲಿಸಿದವನು.

ಆ ವ್ಯಕ್ತಿ ಪರ ನನ್ನ ಸಪೋರ್ಟ್ ಕೊಡುತ್ತೇನೆ ಎಂದರು.

ನನ್ನ ಕೆಲವು ಸ್ನೇಹಿತರು ಇದ್ದಾರೆ. ನಾನು ಅವರ ಪರವಾಗಿ ನಿಲ್ಲುತ್ತೇನೆ. ಈ ವ್ಯಕ್ತಿ ನನಗೆ ಬಹಳ ಬೇಕಾಗಿರುವವರು, ನಾನು ಇಷ್ಟ ಪಡುವಂತವರು ಆಗಿದ್ದಾರೆ. ಅವರ ಪರವಾಗಿ ನಾನು ನಿಲ್ಲುತ್ತಿದ್ದೇನೆ ಎಂದರು.

ಈ ನಂತ್ರ ಮತ್ತೆ ಮಾತನಾಡಿದಂತ ಸಿಎಂ ಬೊಮ್ಮಾಯಿ, ಸುದೀಪ್ ಹಾಗೂ ನನ್ನ ಸಂಬಂಧವನ್ನು ಮೊದಲು ರೆಸ್ಪೆಕ್ಟ್ ಮಾಡಿ. ಅವರು ಯಾವುದೇ ಪಕ್ಷಕ್ಕೆ ಸೇರಿದವರು ಅಲ್ಲ. ನಾನು ಅವರ ಹತ್ತಿರ ಮಾತನಾಡಿದ್ದೇನೆ. ಎರಡು ಮೂರು ಬಾರಿ ಮಾತನಾಡಿದ್ದೇನೆ. ನೀವು ನಮ್ಮ ಪಕ್ಷಕ್ಕೆ ಸೇರಿಕೊಳ್ಳದೇ ಇದ್ದರೂ ಕೂಡ ನಿಮ್ಮ ಪ್ರಚಾರದ ಅಗತ್ಯವಿದೆ. ನಾನು ನಿಮಗೋಸ್ಕರ ಬೆಂಬಲ ಕೊಡುತ್ತೇನೆ. ನಿಮಗೋಸ್ಕರ ಮಾಡಲು ಸಿದ್ಧನಿದ್ದೇನೆ ಎಂದಿದ್ದಾರೆ. ನಮ್ಮ ಪಕ್ಷದ ಪರವಾಗಿ ನಟ ಸುದೀಪ್ ಪ್ರಚಾರ ಮಾಡಲಿದ್ದಾರೆ ಎಂಬುದಾಗಿ ಸ್ಪಷ್ಟ ಪಡಿಸಿದರು.

[t4b-ticker]

You May Also Like

More From Author

+ There are no comments

Add yours