ಕವಾಡಿಗರಹಟ್ಟಿ ನೀರಿನ ವರದಿ ಫೈನಲ್, ವಿಷಕಾರಿ ಅಂಶ ಇದೆಯಾ ಎಸ್ಪಿ ಪರಶುರಾಮ್ ಹೇಳಿದ್ದೇನು.

 

ಚಿತ್ರದುರ್ಗ: ಕಾವಾಡಿಗರಹಟ್ಟಿಯಲ್ಲಿ  ಮನೆಗಳಿಗೆ ಪೂರೈಕೆಯಾಗಿದ್ದ ನೀರಿನಲ್ಲಿ ಯಾವುದೇ ವಿಷಕಾರಿ ಅಂಶ ಇಲ್ಲ ಎಂದು ತಿಳಿದು ಬಂದಿದೆ. ಓವರ್ ಹೆಡ್ ಟ್ಯಾಂಕ್ ನ ನೀರು ಹಾಗೂ ದೇಹದ ಮಾದರಿಗಳಲ್ಲಿ ಯಾವುದೇ ವಿಷಕಾರಿ ಅಂಶ ಇಲ್ಲ ಎಂದು‌ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ತಿಳಿಸಿದೆ.

ಕಾವಾಡಿಗರಹಟ್ಟಿಯಲ್ಲಿ ಜು.31 ರಂದು ಪೂರೈಕೆಯಾಗಿದ್ದ ಕಲುಷಿತ ನೀರು ಸೇವಿಸಿ ಮೂವರು ಮೃತಪಟ್ಟು, ಹಲವರು ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಓವರ್ ಹೆಡ್ ಟ್ಯಾಂಕ್ ನ ನೀರು ಹಾಗೂ ಮೃತರ ದೇಹದ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ನಡುವೆ ಬಡಾವಣೆಯಲ್ಲಿ ಒಂದು ವರ್ಷದ ಹಿಂದೆ ನಡೆದಿದ್ದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರಗಂಟಿ ದ್ವೇಷಭಾವನೆಯಿಂದ ವಿಷ ಬೆರೆಸಿದ್ದಾರೆನ್ನುವ ಆರೋಪ ಪ್ರಬಲವಾಗಿ ಕೇಳಿ ಬಂದಿತ್ತು. ಇದೇ ಕಾರಣದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಬೇಕು ಎನ್ನುವ ಒತ್ತಡ ಹೆಚ್ಚಿತ್ತು. ಪೊಲೀಸರು ಕೂಡಾ ನೀರಗಂಟಿಯನ್ನು ಕರೆಸಿ, ವಿಚಾರಣೆ ನಡೆಸಿದ್ದರು. ಮೃತ ಕುಟುಂಬಗಳಿಗೆ ಪರಿಹಾರ ಘೋಷಿಸಲಿಕ್ಕೂ ಇದು ತೊಡಕಾಗಿ ಪರಿಣಮಿಸಿತ್ತು. ಅಂತಿಮವಾಗಿ ಗುರುವಾರ ರಾತ್ರಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹೊರ ಬಂದಿದ್ದು, ಯಾವುದೇ ವಿಷಕಾರಿ ಅಂಶ ಪತ್ತೆಯಾಗಿಲ್ಲ ಎಂದು ಎಸ್ಪಿ ಕೆ. ಪರಶುರಾಂ ಖಚಿತಪಡಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours