ದೆಹಲಿಯಲ್ಲಿ ಬಿಜೆಪಿ ವಿರುದ್ಧ ಕೈ ಹೋರಾಟದಲ್ಲಿ ರಾಜ್ಯದ ನಾಯಕರ ಘರ್ಜನೆ*

 

 

*ದೆಹಲಿಯಲ್ಲಿ ಬಿಜೆಪಿ ವಿರುದ್ಧ ಕೈ ಹೋರಾಟದಲ್ಲಿ ರಾಜ್ಯದ ನಾಯಕರ ಘರ್ಜನೆ*

*ಖರ್ಗೆ, ಡಿಕೆಶಿ, ಹರಿಪ್ರಸಾದ್, ಆಂಜನೇಯ ಮುಂಚೂಣಿ*

*ರಾಹುಲ್ ಜತೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದ ಆಂಜನೇಯ*

ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯ ಸೇರಿದಂತೆ ಸ್ವಾಯತ್ತತೆ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ದೆಹಲಿ ಎಐಸಿಸಿ ಕಚೇರಿ ಆವರಣಲ್ಲಿ ಬುಧವಾರ ಕಾಂಗ್ರೆಸ್ ಪ್ರತಿಭಟನೆ
ನಡೆಸಿತು.
ದೇಶದ ವಿವಿಧ ಭಾಗದಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಮುಖಂಡರು, ಕಾರ್ಯಕರ್ತರು
ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯವಾಗಿ ಪ್ರತಿಭಟನೆ ವೇದಿಕೆಯಲ್ಲಿ ಹಾಗೂ ರಾಹುಲ್ ಗಾಂಧಿ ಪಕ್ಕದಲ್ಲಿ ಕರ್ನಾಟಕ ರಾಜ್ಯದ ನಾಯಕರ ದಂಡು ಕಂಡುಬಂದಿತು.
ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಎಚ್.ಆಂಜನೇಯ, ಬಿ.ಕೆ.ಹರಿಪ್ರಸಾದ್ ಸೇರಿದಂತೆ ಅನೇಕರು ಮುಂಚೂಣಿಯಲ್ಲಿದ್ದರು.
ಪ್ರತಿಭಟನೆ ವೇಳೆ ಮಾಜಿ ಸಚಿವ ಎಚ್.ಆಂಜನೇಯ, ರಾಹುಲ್ ಗಾಂಧಿ ಜತೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು. ಕೆ.ಸಿ.ವೇಣುಗೋಪಾಲ್ ಕೂಡ ಆಂಜನೇಯ ಅವರನ್ನು ತಮ್ಮ ಬಳಿ ಕರೆದು ಜತೆಯಲ್ಲಿ ಫೋಟೋ ತೆಗೆಸಿಕೊಂಡು, ಆಂಜನೇಯ ಅವರ ಉತ್ಸಾಹ ಹೆಚ್ಚಿಸಿದರು.
ಪ್ರತಿಭಟನಾ ವೇದಿಕೆಯಲ್ಲಿ ರಾಹುಲ್ ಅಕ್ಕಪಕ್ಕ ಕುಳಿತಿದ್ದ ರಾಜ್ಯದ ಕಾಂಗ್ರೆಸ್ ನಾಯಕರು,  ಕೇಂದ್ರದ ಬಿಜೆಪಿ ಸರ್ಕಾರ ಏಳು ವರ್ಷದಲ್ಲಿ ಜನವಿರೋಧಿ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಗಮನ ಬೇರೆಡೆ ಸೆಳೆಯಲು ವಿವಾದಗಳು ನಿರಂತರ ಹುಟ್ಟು ಹಾಕುತ್ತಿದೆ ಎಂದು ದೂರಿದರು.
ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರೋಧಿಸುವವರ ಧ್ವನಿ ಅಡಗಿಸುವ ಷಡ್ಯಂತ್ರ ಬಿಜೆಪಿ ನಡೆಸುತ್ತಿದೆ.
ಬ್ರೀಟಿಷರ್ ವಿರುದ್ಧ ಹೋರಾಟ ಹಾಗೂ ಜನಸೇವೆಗೆ ಹೆಸರಾದ ಡೆಕನ್ ಹೆರಾಲ್ಡ್ ಸಂಸ್ಥೆಯ
ಜನಪ್ರಿಯತೆ ಸಹಿಸಲು ಆಗದೆ ಹಾಗೂ ಜನಸಾಮಾನ್ಯರೊಂದಿಗೆ ಬೆರೆಯುತ್ತಿರುವುದು, ಯಾವುದೇ
ಮೂಲೆಯಲ್ಲೂ ಜನರಿಗೆ ಅನ್ಯಾಯವಾದರೆ ಬೀದಿಗಿಳಿದು ಸಾಮಾನ್ಯರಂತೆ ಪ್ರತಿಭಟನೆ
ನಡೆಸುತ್ತಿರುವ ರಾಹುಲ್ ಗಾಂಧಿ ಜನಪ್ರಿಯತೆಗೆ ಕೇಂದ್ರ ಸರ್ಕಾರ ಬೆಚ್ಚಿಬಿದ್ದಿದೆ.
ಈ ಕಾರಣಕ್ಕೆ ಇಡಿಯನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡು ಜನಪರ ಧ್ವನಿ ಅಡಗಿಸುವ
ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ದೇಶಕ್ಕೆ ಅಪಾರ ಕೊಡುಗೆ ನೀಡಿರುವ ಇಂದಿರಾಗಾಂಧಿ, ರಾಜೀವ್ ಗಾಂಧಿ ಕುಟುಂಬ ಕಂಡರೆ ಬಿಜೆಪಿಗೆ ಭೀತಿ
ಎದುರಾಗಿದೆ. ದಿನದಿಂದ ದಿನಕ್ಕೆ ಬಿಜೆಪಿ ಜನವಿರೋಧಿ ಆಡಳಿತ ಜನರಿಗೆ ಮನವರಿಕೆ
ಆಗಿದ್ದು, ಅಧಿಕಾರ ಕಳೆದುಕೊಳ್ಳುವ ಆತಂಕದಿಂದ ರಾಹುಲ್ ಗಾಂಧಿ ಅಂತಹ ಪ್ರಬಲ ಪ್ರತಿಸ್ಪರ್ಧಿ, ಸಜ್ಜನ, ಸರಖ ಜನನಾಯಕರನ್ನು ರಾಜಕೀಯ
ಕ್ಷೇತ್ರದಲ್ಲಿ ಎದುರಿಸಲಾಗದೆ ಇಡಿ ಮೂಲಕ ಷಡ್ಯಂತ್ರ ರೂಪಿಸಿದೆ ಎಂದು ಆಕ್ರೋಶ
ವ್ಯಕ್ತಪಡಿಸಿದರು.
ಅಗ್ನಿಪಥ ಯೋಜನೆ ಕೂಡ ದೇಶವನ್ನು ಅಭದ್ರತೆಗೆ ಸಿಲುಕಿಸುವ ಹಾಗೂ ಉದ್ಯೋಗ ಸಂಖ್ಯೆ
ಹೆಚ್ಚಿಸುವ ಯೋಜನೆ ಆಗಿದೆ. ನಾಲ್ಕು ವರ್ಷ ಸೈನ್ಯದಲ್ಲಿ ಸಂಬಳ ಪಡೆದವರು, ಬಳಿಕ
ನಿರುದ್ಯೋಗಿಗಳಾಗುತ್ತಾರೆ. ಅವರ ಬದುಕು ಬೀದಿಗೆ ಬೀಳಲಿದೆ. 18-21 ಮಧ್ಯೆ
ಶಿಕ್ಷಣದಲ್ಲಿ ತೊಡಗುವ ವಯಸ್ಸು. ಈ ವೇಳೆ ಉದ್ಯೊಗದ ಆಸೆಗೆ ಸೈನ್ಯ ಸೇರಿ ಬಳಿಕ
ನಿರುದ್ಯೋಗಿಗಳಾದರೆ ಅವರ ಶಿಕ್ಷಣವು ಮೊಟಕು ಆಗಿರುತ್ತದೆ. ಜತೆಗೆ ನಿರುದ್ಯೋಗ.
ಆದ್ದರಿಂದ ಇಂತಹ ಅವೈಜ್ಞಾನಿಕ ಹಾಗೂ ದೇಶದ ಭದ್ರತೆಗೆ ಧಕ್ಕೆ ತರುವ ಯೋಜನೆ
ಹಿಂಪಡೆಯಬೇಕು ಎಂದು ಆಗ್ರಹಿಸಿದರು.

[t4b-ticker]

You May Also Like

More From Author

+ There are no comments

Add yours