ಪತ್ರಕರ್ತರು ವಸ್ತು ನಿಷ್ಟ ವರದಿಮಾಡಬೇಕು : ಶಿವಾನಂದ ತಗಡೂರು

 

 

 

 

ಹಿರಿಯೂರು ಆಗಸ್ಟ್ 4: ಇಂದು ಎಲ್ಲರೂ ಪತ್ರಕರ್ತರಾಗುವಂತಹ ಸನ್ನಿವೇಶ ಕಾಣುತ್ತಿದ್ದೇವೆ ಆದರೆ ಸುದ್ದಿಯಲ್ಲಿ ಆಳವಾಗಿ ಅಧ್ಯಯನ ಮಾಡಿ ಬರೆದು ಸುದ್ದಿಮನೆಗೆ ತಲುಪಿಸುವವನು ನಿಜವಾದ ಪತ್ರಕರ್ತನಾಗುತ್ತಾನೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಹೇಳಿದರು. ನಗರದ ವಾಣಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹಿರಿಯೂರು ತಾಲ್ಲೂಕಿನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇಂದು ಸಾಮಾಜಿಕ ಜಾಲತಾಣ ತುಂಬಾ ಬೆಳೆದಿದ್ದು ಉಪಯೋಗಿಸುವಾಗ ತುಂಬಾ ಜಾಗರೂಕರಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು ಶಾಸಕರಾದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ರವರು ಮಾತನಾಡಿ ದಿನಪತ್ರಿಕೆಗಳನ್ನು ಓದುವುದರಿಂದ ಬುದ್ಧಿವಂತಿಕೆ ಬೆಳೆಯುತ್ತದೆ ಕನ್ನಡ ಇಂಗ್ಲೀಷ್ ಎರೆಡೂ ಪತ್ರಿಕೆಗಳನ್ನು ಓದುವ ಹವ್ಯಾಸ ಮಾಡಿಕೊಳ್ಳಬೇಕು ಎಂದರು ಸಮಾಜದಲ್ಲಿ ಪತ್ರಕರ್ತರು ಮಹತ್ತರವಾದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು ಮಾಜಿ ಸಚಿವರಾದ ಡಿ.ಸುಧಾಕರ್ ರವರು ಮಾತನಾಡಿ ಪತ್ರಿಕೋದ್ಯಮ ತೆರೆದಿಟ್ಟ ಪುಸ್ತಕದಂತೆ ಇರಬೇಕು ಸತ್ಯಾಂಶಗಳನ್ನು ಬರೆಯುವ ಮೂಲಕ ಪ್ರಮಾಣಿಕ ಪತ್ರಕರ್ತರಾಗಬೇಕು ಎಂದು ತಿಳಿಸಿದರು. ವಿಜಯವಾಣಿ ಪತ್ರಿಕೆಯ ಸಹಾಯಕ ಸಂಪಾದಕರಾದ ಹರ್ತಿಕೋಟೆ ರುದ್ರಣ್ಣ ಇವರು ಪತ್ರಿಕೆಗಳು ಬೆಳೆದು ಬಂದ ಬಗ್ಗೆ ತಿಳಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ ಸಿ ಲೋಕೇಶ್ ಜಿಲ್ಲಾಧ್ಯಕ್ಷರಾದ ದಿನೇಶ್‌ ಗೌಡಗೆರೆ ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷರಾದ ಡಿ.ಯಶೋಧರ ಮತ್ತಿತರರು ಮಾತನಾಡಿದರು ತಾಲೂಕು ಅಧ್ಯಕ್ಷರಾದ ಪ್ರಶಾಂತ್‌ ಬಬ್ಬೂರು ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಪ್ರಧಾನ ಕಾರ್ಯದರ್ಶಿ, ಬಬ್ಬೂರು ಪ್ರಕಾಶ್ ಹಾಗೂ ಸದಸ್ಯರು ಭಾಗವಹಿಸಿದ್ದರು. ಕಸಾಪ ತಾಲ್ಲೂಕು ಅಧ್ಯಕ್ಷರಾದ ಡಾ.ವಿ.ಎಂ.ನಾಗೇಶ್ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಹನುಮಂತರಾಯಪ್ಪ ರೈತ ಮುಖಂಡರಾದ ಕೆ.ಸಿ.ಹೊರಕೇರಪ್ಪ ಕಸವನಹಳ್ಳಿ ರಮೇಶ್, ಚಮನ್ ಶರೀಫ್

 

 

ಸೇರಿದಂತೆ ಅನೇಕ ಯುವ ಮುಖಂಡರು ಹಾಗೂ ಪತ್ರಕರ್ತರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಪತ್ರಿಕೆ ವಿತರಕರಿಗೆ ಸನ್ಮಾನಿಸಲಾಯಿತು

[t4b-ticker]

You May Also Like

More From Author

+ There are no comments

Add yours