ಚಿಕ್ಕಜಾಜೂರು ಪೋಲಿಸ್ ಠಾಣೆ ವ್ಯಾಪ್ತಿಯ ಅಂತರಾಜ್ಯ ಕಳ್ಳರ ಬಂಧನ

 

ಚಿತ್ರದುರ್ಗ:  ಚಿಕ್ಕಜಾಜೂರು ಪೊಲೀಸ್ ಠಾಣೆಯ ಮೊ.ನಂರಿತ್ಯಾ  ದಾಖಲಾದ ಕಳ್ಳತನ ಪ್ರಕರಣಗಳಲ್ಲಿ ಮಾಲು ಮತ್ತು ಆರೋಪಿಗಳನ್ನು ಪತ್ತೆಮಾಡಲು .ಕೆ.ಪರುಶರಾಮ್  ಐ.ಪಿ.ಎಸ್,  ಪೊಲೀಸ್ ಅಧೀಕ್ಷಕರು ಚಿತ್ರದುರ್ಗ ಜಿಲ್ಲೆ ಹಾಗೂ  ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ .ಎಸ್.ಜೆ.ಕುಮಾರಸ್ವಾಮಿ, ಅನಿಲ್ ಕುಮಾರ್ ಹೆಚ್.ಆರ್‌ರವರ ಮಾರ್ಗದರ್ಶನದಲ್ಲಿ ಹೊಳಲ್ಕೆರೆ ವೃತ್ತದ ವೃತ್ತನಿರೀಕ್ಷಕರಾದ ಕೆ.ಎನ್. ರವೀಶ್ ರವರ ನೇತೃತ್ವದತಂಡವನ್ನು ರಚಿಸಿದ್ದು, ಸದರಿ ತಂಡದವರು ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದು ಸದರಿಯವರು ಅಂತರಾಜ್ಯ ಮನೆಗಳ್ಳರಾಗಿರುತ್ತಾರೆ.೧] ಪುರುಷೋತ್ತಮನಾಯ್ಕ ಎಂ ತಂದೆ ಮಂಜಾನಾಯ್ಕ, ಸು-೧೯ ವರ್ಷ, ಕ್ಯಾಟರಿಂಗ್ ಕೆಲಸ, ನಾಗರಕಟ್ಟೆ ಗ್ರಾಮ, ಕಾಡಜ್ಜಿ ಪೋಸ್ಟ್, ದಾವಣಗೆರೆ ಜಿಲ್ಲೆ. ಹಾಲಿ ವಾಸ: ಸಿಂಗನಕೇರಿ ಗ್ರಾಮ, ಲಂಬಾಣಿ ಓಣಿ, ಧಾರವಾಡ ಜಿಲ್ಲೆ. ೨] ಜೀವನ್ ಸಿ ತಂದೆ ಚಂದ್ರಾನಾಯ್ಕ, ಸು-೧೯ ವರ್ಷ, ಬೈಕ್ ಪಾಲಿಷ್ ಕೆಲಸ, ನಾಗರಕಟ್ಟೆ ಗ್ರಾಮ, ಕಾಡಜ್ಜಿ ಪೋಸ್ಟ್, ದಾವಣಗೆರೆ ಜಿಲ್ಲೆ. ೩] ಸಚಿನ್ ಎ ತಂದೆ ಲೇಟ್: ಅಣ್ಣಪ್ಪನಾಯ್ಕ, ಸು-೨೨ ವರ್ಷ, ಬೈಕ್ ಪಾಲೀಷ್ ಕೆಲಸ, ನಾಗರಕಟ್ಟೆ ಗ್ರಾಮ, ಕಾಡಜ್ಜಿ ಪೋಸ್ಟ್, ದಾವಣಗೆರೆ ತಾಲ್ಲೂಕ್ ಮತ್ತು ಜಿಲ್ಲೆ.೪] ಎಸ್. ಪುನೀತ್‌ನಾಯ್ಕ ತಂದೆ ಸುರೇಶ್‌ನಾಯ್ಕ, ಸು-೧೯ ವರ್ಷ, ಪ್ಲೆಕ್ಸ್ ಅಂಗಡಿಯಲ್ಲಿ ಕೆಲಸ, ನಾಗರಕಟ್ಟೆ ಗ್ರಾಮ, ಕಾಡಜ್ಜಿ ಪೋಸ್ಟ್, ದಾವಣಗೆರೆ ತಾಲ್ಲೂಕ್ ಮತ್ತು ಜಿಲ್ಲೆ ರವರನ್ನು ದಿನಾಂಕ:೦೮.೦೮.೨೦೨೨ ರಂದು ವಶಕ್ಕೆ ಪಡೆದು ಸದರಿ ಆರೋಪಿತರಿಂದ ೯,೫೦,೦೦೦/-ರೂ.ಬೆಲೆ ಬಾಳುವ ೧೮೮ ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಸದರಿ ಆರೋಪಿತರು ಈ ಹಿಂದೆ ಆಂದ್ರಪ್ರದೇಶ ರಾಜ್ಯದ ಓಂಗಲ್ ಪೋಲಿಸ್ ಠಾಣೆಯ ಮೊ.ನಂ:೧೮/೨೦೨೨ ಕಲಂ:೪೫೭,೩೮೦ ಐಪಿಸಿ, ಮೊ.ನಂ:೪೬/೨೦೨೨ ಕಲಂ:೪೫೭,೩೮೦ ಐಪಿಸಿ, ಏಲೂರು ಪೊಲೀಸ್ ಠಾಣೆಯ ವ್ಯಾಪ್ತಿಯವರು ಎಂದು ತಿಳಿದಿದೆ.

[t4b-ticker]

You May Also Like

More From Author

+ There are no comments

Add yours