ಕೈಗಾರಿಕಾ ತರಬೇತಿ ಸಂಸ್ಥೆ: ಆನ್‌ಲೈನ್ ಮೂಲಕ ಅರ್ಜಿ ಅಹ್ವಾನ

 

ಚಿತ್ರದುರ್ಗ(ಕರ್ನಾಟಕ ವಾರ್ತೆ) ಮೇ.29: 2023-24 ನೇ ಸಾಲಿಗೆ ಚಿತ್ರದುರ್ಗ ನಗರದ ಮಹಿಳಾ ಸರ್ಕಾರಿ ಕೈಗಾರಿಕೆ ಸಂಸ್ಥೆ, ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಹಾಗೂ ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರದ  ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರವೇಶಾತಿಗೆ ಅರ್ಜಿ ಅಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಆಸಕ್ತ ವಿದ್ಯಾರ್ಥಿಗಳು ವೆಬ್‌ಸೈಟ್  www.cite.karnataka.gov.in ಮೂಲಕ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು. ಜೂನ್ 7 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಆಭ್ಯರ್ಥಿಗಳ ರ‍್ಯಾಂಕಿAಗ್ ಆಧರಿಸಿ, ದಾಖಲೆಗಳನ್ನು ಪರೀಶಿಲಿಸಿ ಪ್ರವೇಶಾತಿ ನೀಡಲಾಗುವುದು. ದಾಖಲೆಗಳ ಪರಿಶೀಲನೆಗೆ ಇತ್ತೀಚಿನ ಎರಡು ಭಾವಚಿತ್ರ, ಎಸ್‌ಎಸ್‌ಎಲ್‌ಸಿ ಅಥವಾ ಇತರೆ ವಿದ್ಯಾಭ್ಯಾಸದ ಅಂಕಪಟ್ಟಿ, ಜಾತಿ ಹಾಗೂ ಆದಾಯ ದೃಡೀಕರಣ ಪತ್ರ, ಕನ್ನಡ ಮತ್ತು ಗ್ರಾಮೀಣ ವ್ಯಾಸಂಗ ದೃಡೀಕರಣ ಪತ್ರ,  ವಿಕಲಚೇತನ ಅಭ್ಯರ್ಥಿಯಾಗಿದ್ದಲ್ಲಿ ದೃಡೀಕರಣ ಪತ್ರ, ಮಾಜಿ ಯೋಧರ ಅವಲಂಭಿAತರಾದಲ್ಲಿ ಸೈನಿಕ ಕಲ್ಯಾಣ ಮಂಡಳಿ ಅಥವಾ ಡಿಸ್‌ಚಾರ್ಜ್ ಪ್ರಮಾಣ ಪತ್ರಗಳ ಒಂದು ಸೆಟ್ ಛಾಯಾಪ್ರತಿಗಳೊಂದಿಗೆ ಹಾಜರಾಗಬೇಕು. ಹೊರ ರಾಜ್ಯಗಳ ಅಭ್ಯರ್ಥಿಗಳು ಕನಿಷ್ಠ 5 ವರ್ಷ ಕರ್ನಾಟಕದಲ್ಲಿ ವ್ಯಾಸಂಗ ಮಾಡಿದ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ, ಚಿತ್ರದುರ್ಗ ನಗರದ ಮಹಿಳಾ ಸರ್ಕಾರಿ ಕೈಗಾರಿಕೆ ಸಂಸ್ಥೆ ದೂರವಾಣಿ ಸಂಖ್ಯೆ 08194-234515, ಭರಮಸಾಗರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ದೂರವಾಣಿ 08194-200358, ಪರಶುರಾಂಪುರ  ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ದೂರವಾಣಿ ಸಂಖ್ಯೆ  9916242525 ಸಂಪರ್ಕಿಸಬಹುದು. ಐ.ಟಿ.ಐ ಅಡಿ ಲಭ್ಯವಿರುವ ವಿವಿಧ ಕೋರ್ಸಗಳ ಬಗ್ಗೆ ವೆಬ್ ಸೈಟ್‌ನಲ್ಲಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

[t4b-ticker]

You May Also Like

More From Author

+ There are no comments

Add yours