ನೂತನ ಇಂಡಿಯಾನಾ ಹಾರ್ಟ್ ಕ್ಲಿನಿಕ್” ಉದ್ಘಾಟಿಸಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ:ಅ:9 ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿರುವ ಇಂತಹ ಸಮಯದಲ್ಲಿ  ಆಧುನಿಕ ಚಿಕಿತ್ಸೆ ಸೌಲಭ್ಯದೊಂದಿಗೆ “ಇಂಡಿಯಾನಾ ಹಾರ್ಟ್ ಕ್ಲಿನಿಕ್”ಪ್ರಾರಂಭಿಸಿದ್ದು ಜಿಲ್ಲೆಯ ಜನತೆಗೆ ಹೆಚ್ಚು ಅನುಕೂಲವಾಗಲಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ  ಕೆಎಸ್ಆರ್ಟಿಸಿ ಡಿಪೋ ರಸ್ತೆಯಲ್ಲಿ  ನೂತನವಾಗಿ ನಿರ್ಮಿಸಿರುವ “ಇಂಡಿಯಾನಾ ಹಾರ್ಟ್ ಕ್ಲಿನಿಕ್” ಆಸ್ಪತ್ರೆಯನ್ನು  ಉದ್ಘಾಟಿಸಿ ಮಾತನಾಡಿದರು.
ಪಸ್ತುತ ದಿನಗಳಲ್ಲಿ  ಅತಿ ಹೆಚ್ಚು ಜೀವಗಳನ್ನು ಬಲಿ ಪಡೆದುಕೊಂಡಿರುವ ಕಾಯಿಲೆ ಎಂದರೆ ಅದು ಹೃದಯ ಕಾಯಿಲೆಯಾಗಿದೆ. 80 ರ ದಶಕದಲ್ಲಿ ಹೃದಯ ಕಾಯಿಲೆಗಳಿಗೆ  ಚಿಕಿತ್ಸೆಗಾಗಿ  ವಿದೇಶಗಳಿಗೆ ತೆರಳುವ ಪರಿಸ್ಥಿತಿ ಇತ್ತು. ಈಗ ಅಮೇರಿಕಾದ ಚಿಕ್ಕ‌ ನಗರ  ಕೇಂದ್ರಗಳಲ್ಲೂ ಸಹ  ಎಲ್ಲಾ ರೀತಿಯ ಆಪರೇಷನ್ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ  ನಮ್ಮ ದೇಶದಲ್ಲಿ  ಅಂತಹ ಸ್ಥಿತಿ ಬರಲಿ ಎಂದರು.
 ಮೂರು ವರ್ಷದ ಹಿಂದೆ ಬಸವೇಶ್ವರ ಆಸ್ಪತ್ರೆಯಲ್ಲಿ ಹಾರ್ಟ್ ಸೆಂಟರ್ ತೆರೆಯಲಾಗಿತ್ತು. ಈಗ ಹೊಸದಾಗಿ ಮತ್ತೊಂದು ಘಟಕ ತೆರೆಯಲಾಗಿದೆ. ಜಿಲ್ಲೆಯಲ್ಲಿರುವ ಮೂರು ಜನ ನೂರಿತ  ಹೃದಯ ತಜ್ಞತು ಇಂಡಿಯಾನಾ ಹಾರ್ಟ್ ಕ್ಲಿನಿಕ್ ಜೊತೆಗಿದ್ದು ಉತ್ತಮ ಚಿಕಿತ್ಸೆ ಕೊಟ್ಟ ಪ್ರಾಣದ ರಕ್ಷಣೆಗಳನ್ನು ಮಾಡುವಲ್ಲಿ‌ ಯಶಸ್ವಿಯಾಗಲಿ. ಕಳೆದ ತಿಂಗಳು 55 ಆಂಜಿಯೋಗ್ರಾಂ ಚಿಕಿತ್ಸೆ ಸಕ್ಸಸ್  ಆಗಿದೆ. ಚಿತ್ರದುರ್ಗ ಜಿಲ್ಲೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜನಸಂಖ್ಯೆ ಹೆಚ್ಚಿರುವ ಜಿಲ್ಲೆಯಾಗಿದ್ದು ಜನರಿಗೆ ಉತ್ತಮ‌ ಸೇವೆ ಒದಗಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸಲಿ ಎಂದು ಹಾರೈಸಿದರು.
ಇಂಡಿಯಾನಾ ಸಂಸ್ಥೆಯ ಡಾ.ಕುಂಬ್ಳೆ ಅವರ ತಂಡ ಇಲ್ಲಿ ಕ್ಲಿನಿಕ್ ತೆರೆದಿರುವುದರಿಂದ  ದೂರದ ಮಣಿಪಾಲ, ಉಡುಪಿ, ಬೆಂಗಳೂರಿಗೆ ಹೋಗಿ ಚಿಕಿತ್ಸೆ ಪಡೆಯಬೇಕಾಗಿದ್ದ ರೋಗಿಗಳಿಗೆ  ಹೆಚ್ಚು ಅನುಕೂಲಾವಾಗಿದೆ.‌ ಮುಂದಿನ‌ ದಿನದಲ್ಲಿ ಎಲ್ಲಾ‌ ಸಿದ್ದತೆಯೊಂದಿಗೆ ಓಪನ್ ಹಾರ್ಟ್ ಸರ್ಜರಿ ಮಾಡುತ್ತಾರೆ. ಹೃದಯ ಕಾಯಿಲೆಗಳಿಗೆ ಉತ್ತಮ ಚಿಕಿತ್ಸೆಯನ್ನು  ಪಡೆಯುವ ಮೂಲಕ‌ ಎಲ್ಲಾರೂ ಆರೋಗ್ಯ ಕಾಪಡಿಕೊಳ್ಳಬೇಕು ಎಂದು ಜನರಿಗೆ ಸಲಹೆ ನೀಡಿದರು.
ಇಂಡಿಯನ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ  ಡಾ.ಯೂಸುಫ್ ಕುಂಬ್ಳೆ  ಮಾತನಾಡಿ ಬೇರೆ ಬೇರೆ ಜಿಲ್ಲೆಗಳಲ್ಲಿ ನಮ್ಮ ಕೇಂದ್ರಗಳಿವೆ. ಚಿತ್ರದುರ್ಗದಲ್ಲಿ ತೆರೆಯುವಾಗ ಜನರು ಇಲ್ಲಿ ಅದು ಸಾಧ್ಯವಿಲ್ಲ‌ ಎಂಬ ಪ್ರಶ್ನಿಗಳನ್ನು ಇಟ್ಟಿದ್ದರು.ಆದರೆ ನಾನು ಈ ಜಿಲ್ಲೆಯ ಜನರಿಗೋಸ್ಕರ  ಕಾರ್ಡಿಯಾಲಾಜುಸ್ಟ್ ಸೆಂಟರ್ ತೆರೆಯಲಾಯಿತು. ಇದು ಚಿತ್ರದುರ್ಗ ಜಿಲ್ಲೆಯಲ್ಲಿ ಎಲ್ಲೂ ಸಹ ಇರಲಿಲ್ಲ. ಸಾಕಷ್ಟು ಬಂಡವಾಳ‌  ಹಾಕಿ ಪ್ರಾರಂಭ  ಮಾಡಿದ್ದೇವೆ ಎಂದರು.
ರಾಜ್ಯ  ಎಲ್ಲಾ  ಆಸ್ಪತ್ರೆಗಳಲ್ಲಿ ಶೇ.70 ಖಾಸಗಿ, ಶೇ. 30 ಬಿಪಿಎಲ್ ರೋಗಿಗಳು ಬರುತ್ತಾರೆ. ಆದರೆ ಚಿತ್ರದುರ್ಗ ಜಿಲ್ಲೆಯಲ್ಲಿ  ಬಹುತೇಕ ಬಿಪಿಎಲ್ ರೋಗಿಗಳು ಬಂದಿದ್ದಾರೆ. ನಾವು
ಜಿಲ್ಲೆಯಲ್ಲಿ ಒಂದು ತಿಂಗಳಲ್ಲಿ 55 ಸರ್ಜರಿ ಆಗಿರುವುದು ಒಳ್ಳೆಯದಲ್ಲ. ಜೀವನ ಶೈಲಿ ಬದಲಾಗಬೇಕು. ನಿತ್ಯದ ದಿನಚರಿ, ಆಹಾರ ಪದ್ಧತಿ, ವ್ಯಾಯಾಮ,ಕೆಲಸ ಶೈಲಿ ಸೇರಿ ಎಲ್ಲಾವೂ ಬದಲಾವಣೆ ಮಾಡಿಕೊಳ್ಳಬೇಕು.
ಬಸವೇಶ್ವರ ಆಸ್ಪತ್ರಗೆ  ಬರಲು ಆಗದಿದ್ದವರು ಇಲ್ಲಿ ಮುಂಚಿತವಾಗಿ ಚಿಕಿತ್ಸೆ ಪಡೆಯಲು ಅನುಕೂಲ ಆಗಲಿದೆ. ಹಾರ್ಟ್ ಅಟ್ಯಾಕ್ ಆದವರು ನೇರವಾಗಿ ಅಲ್ಲಿಗೆ ಬರಬೇಕು. ಯುವ ಸಮೂಹದಲ್ಲಿ ಹೆಚ್ಚು ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಜನರು ಸ್ವಲ್ಪ  ಆರೋಗ್ಯದಲ್ಲಿ ಏರುಪೇರು ಆದ ತಕ್ಷಣ ತಪಾಸಣೆ ಮಾಡಿಸಿಕೊಂಡರೆ ಪ್ರಾಣವನ್ನು ರಕ್ಷಿಸಿಕೊಳ್ಳುವ ಚಾನ್ಸ್ ಹೆಚ್ಚು ಜನರಲ್ಲಿ ಆರೋಗ್ಯದ ಬಗ್ಗೆ  ಅರಿವು ಮೂಡಿಸಿದರು.
ಈ‌ ಸಂದರ್ಭದಲ್ಲಿ  ಡಾ.ರೂಪೇಶ್ ಶೆಟ್ಟಿ, ಡಾ.ಕಾರ್ತಿಕ್, ಡಾ.ಮಂಜುನಾಥ್, ಡಾ.ಸುಜಯ್, ಆಯುಷ್ಮಾನ್ ಭಾರತ್ ಜಿಲ್ಲಾ ಸಂಯೋಜಕ  ಡಾ.ಚಂದ್ರಶೇಖರ್ ರಾಜು ಇದ್ದರು.
[t4b-ticker]

You May Also Like

More From Author

+ There are no comments

Add yours