ಧಾರ್ಮಿಕ ಭಾವನೆಗಳಿಗೆ ಆಧ್ಯಾತ್ಮಿಕ ಚಿಂತನೆಗಳು ಸೇರಿದರೆ ಮನಸ್ಸು ಪ್ರಸನ್ನವಾಗುತ್ತದೆ: ಎನ್.ರಘುಮೂರ್ತಿ

 

ಚಳ್ಳಕೆರೆ:ಧಾರ್ಮಿಕ ಭಾವನೆಗಳಿಗೆ ಆಧ್ಯಾತ್ಮಿಕ ಚಿಂತನೆಗಳು ಬೆರೆತಾಗ ಮನಸ್ಸು ಪ್ರಸನ್ನವಾಗುತ್ತದೆ ಸಕಾರಾತ್ಮಕವಾದ ಚಿಂತನೆಗಳು ಮೈಗೂಡುತ್ತವೆ ನಮ್ಮ ರಾಷ್ಟ್ರ ಮತ್ತು ಪರಂಪರೆಯ ಬಗ್ಗೆ ಅದ್ವಿತೀಯವಾದ ಮನಸ್ಸು ಕೇಂದ್ರೀಕೃತವಾಗುತ್ತದೆ ಎಂದು ತಹಸಿಲ್ದಾರ್ ಎನ್ ರಘುಮೂರ್ತಿ ಹೇಳಿದರು.

ವೈಕುಂಠ ಏಕಾದಶಿಯ ಪ್ರಯುಕ್ತ ಚಳ್ಳಕೆರೆ ನಗರದ ಗಾಂಧಿನಗರದ ಶ್ರೀ ತಿಮ್ಮಪ್ಪ ಸ್ವಾಮಿ ದೇವಸ್ಥಾನದಲ್ಲಿ ಸಂಸ್ಕಾರ ಸಂಘಟನೆ ಸೇವೆ ವತಿಯಿಂದ ಹಮ್ಮಿಕೊಂಡಿದ್ದಂತ ಯೋಗ ಮತ್ತು ವೈಕುಂಠ ಏಕಾದಶಿಯ ಪೂಜಾ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿ ಧಾರ್ಮಿಕ ಪರಂಪರೆ ಮತ್ತು ಆಧ್ಯಾತ್ಮಿಕ ಪರಂಪರೆಗಳು ಭಾರತೀಯರಾದ ನಮಿಗೆ ಆಸು ಒಕ್ಕಾಗಿದೆ ಮನಸ್ಸಿನಲ್ಲಿರುವಂಥ ಖಿನ್ನತೆ ಇದರಿಂದ ದೂರವಾಗುತ್ತದೆ ದೇಶಾಭಿಮಾನ ಮತ್ತು ರಾಷ್ಟ್ರಾಭಿಮಾನ ಮಣೆ ಮಾಡುತ್ತದೆ ಇದರಿಂದ ಸಹಜವಾಗಿ ಸಹಕಾರ ಸಹಬಾಳ್ವೆ ಮತ್ತು ಭಾತೃತ್ವ ಮನುಷ್ಯನ ಮನಸ್ಸನ್ನು ಆವರಿಸುತ್ತದೆ ಇಂದು ತಾಲೂಕಿನ ಎಲ್ಲ ಜನತೆಯು ಕೂಡ ವೈಕುಂಠ ಏಕಾದಶಿಯನ್ನು ಭಕ್ತಿ ಭಾವ ಪರವಶರಾಗಿ ಆಚರಿಸುತ್ತಿದ್ದಾರೆ ಎಲ್ಲರಲ್ಲಿ ಭಕ್ತಿಯ ಪರಾಕಷ್ಟೇ ಮುಗಿಲ ಮುಟ್ಟಿದೆ 2023ರ ಈ ವರ್ಷ ಇಡೀ ತಾಲೂಕಿನ ಜನತೆಯನ್ನು ನೆಮ್ಮದಿಯ ಉತ್ತುಂಗಕ್ಕೆ ಕೊಂಡಲಿ ಐತಿಹಾಸಿಕ ಪರಂಪರೆಗೆ ಹೆಸರುವಾಸಿ ಆಗಿರುವಂತಹ ಈ ನಾಡು ಮದಕರಿ ನಾಯಕನ ಕಾಲದ ಹೇಳ್ಗೆಗೆ ಮುನ್ನುಡಿ ಬರೆಯಲಿ ಎಂದು ತಾಲೂಕಿನ ಎಲ್ಲ ಜನತೆಗೆ ಆಶಿಸಿದರು ಇದೇ ಸಂದರ್ಭದಲ್ಲಿ ಎಲ್ಲ ಭಕ್ತಾದಿಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours