ಕೃಷಿ ಪಂಪ್ ಸೆಟ್ ಗಳಿಗೆ ಮೀಟರ್ ಹಾಕಿದರೆ ರೈತರ ಅವನತಿ:ಜೆ.ಎಂ.ವೀರಸಂಗಯ್ಯ

 

ಚಿತ್ರದುರ್ಗ: ಕೃಷಿ ಪಂಪುಸೆಟ್ಟುಗಳಿಗೆ ಮೀಟರ್ ಅಳವಡಿಸಿದರೆ ಗ್ರಾಮೀಣ ಭಾರತ ಕರ್ನಾಟಕ ಪೂರ್ಣ ಪ್ರಮಾಣದಲ್ಲಿ
ಅವನತಿ ಹಾದಿ ಹಿಡಿಯುತ್ತದೆ ಎಂದು ಸರ್ವೋದಯ ಕರ್ನಾಟಕದ ರಾಜ್ಯ ಸಂಚಾಲಕ ಜೆ.ಎಂ ವೀರಸಂಗಯ್ಯ
ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸರ್ವೋದಯ ಕರ್ನಾಟಕದ ಜಿಲ್ಲಾ ಕಾರ್ಯಕಾರಿ ಸಮಿತಿ
ಸಭೆಯಲ್ಲಿ ಮಾತನಾಡಿದ ಅವರು ರೈತರಿಂದ ಕೃಷಿ ಭೂಮಿ ಕಸಿದುಕೊಳ್ಳುವ ಹುನ್ನಾರಗಳ ಕೇಂದ್ರ
ಸರ್ಕಾರ ನಡೆಸಿದ್ದು ಈ ನಿಟ್ಟಿನ ಪ್ರಥಮ ಹೆಜ್ಜೆಯಾಗಿ ಕೃಷಿ ಪಂಪುಸೆಟ್ಟುಗಳಿಗೆ ಮೀಟರು
ಅಳವಡಿಸಲಾಗುತ್ತಿದೆ ಎಂದರು.
ಕರ್ನಾಟಕದಲ್ಲಿ ೩೦೩ ಲಕ್ಷ ಎಕರೆ ಕೃಷಿ ಭೂಮಿ ಇದ್ದು ೮೭ ಲಕ್ಷ ರೈತ ಕುಟುಂಬಗಳಿವೆ. ಇದರಲ್ಲಿ ೬೯ಲಕ್ಷ
ರೈತರು ಸಣ್ಣ ಮತ್ತು ಅತಿ ಸಣ್ಣ ಭೂ ಹಿಡುವಳಿದಾರರಾಗಿದ್ದಾರೆ. ಜಲಾಶಯಗಳಿಂದ ಸಾವಿರ ಟಿಎಂಸಿ ನೀರು
ಪಡೆದು ನೀರಾವರಿ ಸೌಲಭ್ಯ ಕಲ್ಪಿಸಿಕೊಂಡಿದ್ದರೆ ೬೦೦ ಟಿಎಂಸಿಯಷ್ಟು ಅಂತರ್ಜಲವನ್ನು ರೈತರು
ಬಳಸುತ್ತಿದ್ದಾರೆ. ೪೫ ಲಕ್ಷ ಕೃಷಿ ಪಂಪುಸೆಟ್ಟÄಗಳಿವೆ. ಮೀಟರು ಆಳವಡಿಸಿದರೆ ಪಂಪುಸೆಟ್ಟುಗಳ
ಮೂಲಕ ಅಗಾಧ ಪ್ರಮಾಣದಲ್ಲಿ ತೋಟಗಾರಿಕೆಯಲ್ಲಿ ತೊಡಗಿರುವ ರೈತರ ಬದುಕಿನ ಮೇಲೆ ಗಂಭೀರ
ಪರಿಣಾಮ ಬೀರಲಿದೆ ಎಂದರು.
ಈಗಾಗಲೇ ಗ್ರಾಮೀಣ ಪ್ರದೇಶದ ಕುಡಿವ ನೀರು ಪೂರೈಕೆ ಘಟಕಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸುವ
ಕಾರ್ಯ ಆರಂಭವಾಗಿದೆ. ಹಳ್ಳಿಗಳಿಗೆ ಕುಡಿವ ನೀರು ಪೂರೈಕೆ ಮಾಡುವುದು ಸರ್ಕಾರದ ಜವಾಬ್ದಾರಿ. ಮೀಟರ್
ಹಾಕಿದರೆ ವಿದ್ಯುತ್ ಬಿಲ್ ನ ಹೊಣೆಯನ್ನು ಹಳ್ಳಿಗರಿಗೆ ವಹಿಸಲಾಗುತ್ತದೆ. ರೈತರು ಹಂತ ಹಂತವಾಗಿ
ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳಲಿ ಎಂಬ ಉದ್ದೇಶ ಸರ್ಕಾರದ್ದಾಗಿದೆ ಎಂದರು.
ಕೇAದ್ರದಲ್ಲಿ ಬಿಜೆಪಿ ಅಽಕಾರಕ್ಕೆ ಬಂದ ನಂತರ ದೇಶದ ಆಡಳಿತ ವ್ಯವಸ್ಥೆ ಆಮೂಲಾಗ್ರವಾಗಿ
ಬದಲಾವಣೆಗೊಂಡಿದೆ. ಜನ ಸೇವೆ ಮಾಡುವವರು ವ್ಯಾಪಾರ ಮಾಡಬಾರದು, ವ್ಯಾಪಾರ ಮಾಡುವವರು ಜನ
ಸೇವೆಗೆ ಬರಬಾರದು. ಅಽಕಾರಸ್ಥರು ವ್ಯಾಪಾರ ಮಾಡಬಾರದು ಎಂಬ ನಂಬಿಕೆಗಳಿದ್ದವು. ಇವೆಲ್ಲ ಕುಸಿತಕ್ಕೆ
ಒಳಗಾಗಿವೆ. ವ್ಯಾಪಾರಸ್ಥರು, ಸೇವೆ ಮಾಡುವವರು ಎಲ್ಲ ಅಽಕಾರಕ್ಕೆ ಬಂದಿದ್ದಾರೆ. ರಾಜಕಾರಣಿಗಳು
ವ್ಯಾಪಾರದಲ್ಲಿ ನಿರತರಾಗಿದ್ದಾರೆ. ಹಾಗಾಗಿ ಗ್ರಾಮೀಣ ಭಾರತ ಉಳಿಸಿಕೊಳ್ಳುವುದು ಕಷ್ಟವೆಂಬ ವಾತಾವರಣ
ಸೃಷ್ಠಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿವಿಧ ಕಾಯ್ದೆಗಳು ಜಾರಿಗೆ ತಂದ ನಂತರ ಇದೀಗ ಜಾನುವಾರು ಸಂತೆಗಳು ನಡೆಯದಂತಹ
ವಾತಾವರಣ ಎದುರಾಗಿದೆ. ರೈತರಾರೂ ಬೇರೆ ಊರುಗಳಿಗೆ ಹೋಗಿ ಜಾನುವಾರುಗಳ ಕೊಳ್ಳುವಂತಿಲ್ಲ,
ಮಾರುವAತಿಲ್ಲ. ಭಯದ ವಾತಾವರಣ ಸೃಷ್ಟಿಯಾಗಿದೆ. ಅನಾದಿಕಾಲದಿಂದರೂ ರೂಢಿಗತವಾಗಿ ಬಂದಿದ್ದ
ಕೊAಡುಕೊಳ್ಳುವಿಕೆಗೆ ಹೊಡೆತ ಬಿದ್ದಿದೆ. ಗೋ ವಧೆ ನಿಷೇಧ ಕಾಯ್ದೆ ಹೆಸರಲ್ಲಿ ರೈತರ
ಒಕ್ಕಲೆಬ್ಬಿಸುವ ಕೆಲಸ ನಡೆದಿದೆ. ಹೈನುಗಾರಿಕೆಗೂ ತೊಂದರೆ ಮಾಡುತ್ತಿವೆ ಎಂದರು.
ಅಮೇರಿಕಾದಲ್ಲಿ ಶೇಕಡಾ ಏಳರಷ್ಟು ಮಂದಿ ಮಾತ್ರಕೃಷಿಯಲ್ಲಿ ತೊಡಗಿದ್ದಾರೆ. ಕಾರ್ಪೋರೇಟ್
ಮಾದರಿಯ ವ್ಯವಸಾಯ ಅಲ್ಲಿನದು. ಅದೇ ರೀತಿಯ ಪ್ರಯೋಗಕ್ಕೆ ಭಾರತ ನಿಧಾನವಾಗಿ
ತೆರೆದುಕೊಳ್ಳುವ ಸುಳಿವುಗಳು ಗೋಚರಿಸಿವೆ. ದೇಶದಲ್ಲಿ ಶೇ.೭೦ ರಷ್ಟಿರುವ ರೈತರ ಕಡಿಮೆ ಮಾಡಿ
ಶೇ.೭ ರಷ್ಟು ಮಂದಿ ಮಾತ್ರಕೃಷಿ ಕ್ಷೇತ್ರವ ಕೈಯಲ್ಲಿ ಹಿಡಿದುಕೊಳ್ಳುವ ಪ್ರಯತ್ನಗಳು
ಆರಂಭವಾಗಿದ್ದು ಕಾರ್ಪೋರೇಟ್ ಕಂಪನಿಗಳು ಭೂಮಿ ಕೊಳ್ಳುತ್ತಿವೆ. ವಿದ್ಯುತ್ ಕಾಯ್ದೆ
ಜಾರಿಗೊಳಿಸಿದರೆ ರೈತರು ಕೃಷಿ ಬಿಟ್ಟು ಓಡಿ ಹೋಗುತ್ತಾರೆ ಎಂಬ ಇಂಗಿತ ಸರ್ಕಾರದ್ದು. ಈ ಬಗ್ಗೆ ರೈತರು
ಎಚ್ಚೆತ್ತುಕೊಳ್ಳಬೇಕು. ಭವಿಷ್ಯದ ದೃಷ್ಠಿಯಿಂದಲಾದರೂ ಗಂಭೀರ ಚಿಂತನೆ ಮಾಡಬೇಕಂದು
ವೀರಸAಗಯ್ಯ ಮನವಿ ಮಾಡಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶAಕರಪ್ಪ, ಸ್ವರಾಜ್ ಇಂಡಿಯಾದ
ಜಿಲ್ಲಾಧ್ಯಕ್ಷ ಜಗಳೂರ ಯಾದವರೆಡ್ಡಿ, ಕಸಾಪ ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ರೈತ
ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು, ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ
ತಿಪ್ಪೇಸ್ವಾಮಿ, ನಿವೃತ್ತ ಪ್ರಾಚಾರ್ಯ ಬಿ.ಆರ್.ಶಿವಕುಮಾರ್, ಕಲ್ಲೇನಹಳ್ಳಿ ಕುಮಾರ್, ಮೋಹನ್ ಎಮ್ಮೆಹಟ್ಟಿ
ಇದ್ದರು.

[t4b-ticker]

You May Also Like

More From Author

+ There are no comments

Add yours