ಸರ್ಕಾರಿ ಜಮೀನು ಒತ್ತವರಿ ಮಾಡಿದರೆ ಸಾಮಾಜಿಕ ಕಾರ್ಯಕ್ಕೆ ಜಮೀನಿರಲ್ಲ, ಒತ್ತುವರಿದಾರರ ವಿರುದ್ದ ಕಾನೂನು ಕ್ರಮ: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ:  ಸರ್ಕಾರಿ ಜಮೀನು ಸಾರ್ವಜನಿಕರಿಗೆ ಅತ್ಯಮೂಲ್ಯ ವಾದಂತಹ ಆಸ್ತಿಗಳ ಆಗಿದ್ದು ಇವುಗಳನ್ನು ಸಂರಕ್ಷಣೆ ಮಾಡುವ ಹೊಣೆ ಕೂಡ ಸಾರ್ವಜನಿಕರದ್ದಾಗಿದೆ ಈ ದಿಸೆಯಲ್ಲಿ ಸರ್ಕಾರವನ್ನು ಅವಲಂಬಿಸಿದೆ ತಾವೇ ಸರ್ಕಾರಿ ಸುತ್ತನ್ನು ಸಂರಕ್ಷಣೆ ಮಾಡಿಕೊಳ್ಳಬೇಕೆಂದು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.

 

 

ಇಂದು ರೇಖಲಗೆರೆ ಗ್ರಾಮದ ಸರ್ವೇ ನಂಬರ್ 23 ರಲ್ಲಿ 56-14 ಎಕರೆ ಗೋಮಾಳ ಮತ್ತು ಸರ್ವೇ ನಂಬರ್ 24 ರಲ್ಲಿ 39-19 ಎಕರೆ ಗೋಮಾಳ ಜಮೀನು ಇದ್ದು, ಇದರಲ್ಲಿ ತಿಪ್ಪೇಸ್ವಾಮಿ ಬಿನ್ ರುದ್ರನಾಯಕ, ಪಾಪನಾಯಕ ಬಿನ್ ರುದ್ರನಾಯಕ, ವೆಂಕಟೇಶ್ ಬಿನ್ ಹರಿಸ್ವಾಮಿ ನಾಯಕ್, ಸುನಿಲ ಬಿನ್ ಹರಿ ಸ್ವಾಮಿ ನಾಯಕ್, ತಿಪ್ಪೇಶ್ ನಾಯಕ್ ಬಿನ್ ಹುನ್ಯ ನಾಯಕ ರೇಖಲಗೆರೆ ಲಂಬಾಣಿ ಹಟ್ಟಿ ಇವರುಗಳು ತಲಾ  4-00 ಎಕರೆ ಜಮೀನು ರಾತ್ರೋರಾತ್ರಿ ಒತ್ತುವರಿ ಮಾಡಿ ಈ ಜಮೀನುಗಳಲ್ಲಿ ಕೃಷಿ ಮಾಡಲು ಮುಂದಾಗಿರುತ್ತಾರೆ. ಈ ವಿಚಾರವನ್ನು ಗ್ರಾಮಸ್ಥರು ತಹಶೀಲ್ದಾರ್  ಗಮನಕ್ಕೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು ತಕ್ಷಣ ಎಚ್ಚೆತ್ತುಕೊಂಡ ತಹಶೀಲ್ದಾರ್  ಕಂದಾಯ ಇಲಾಖೆ ಮತ್ತು ಸರ್ವೆ ಸಿಬ್ಬಂದಿಯೊಂದಿಗೆ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಳತೆ ಮಾಡಿ ಒತ್ತುವರಿಯನ್ನು ತೆರವುಗೊಳಿಸಿ ಸರ್ಕಾರದ ಸುಪರ್ದಿಗೆ ಪಡೆದು  ಈ ಪ್ರದೇಶದಲ್ಲಿ ಸರ್ಕಾರಿ ಬೋರ್ಡ್ ಅಳವಡಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ ಈ ರೀತಿ ಸರ್ಕಾರಿ ಜಮೀನು ಒತ್ತುವರಿ ಆದರೆ ಮುಂದಿನ 30 ವರ್ಷಗಳ ನಂತರ ಆರಡಿ ಮೂರಡಿ ಜಮೀನು ಕೂಡ ಸಾರ್ವಜನಿಕರಿಗೆ ಲಭ್ಯವಾಗುವುದಿಲ್ಲ. ಗ್ರಾಮದ ಉಪಯೋಗಗಳ ಆದ ಶಾಲೆ ಆಟದ ಮೈದಾನ ಅಂಗನವಾಡಿ ಕಟ್ಟಡ ಹಣ ತ್ಯಾಜ್ಯ ವಿಲೇವಾರಿ ಅಂಬೇಡ್ಕರ್ ಭವನ ವಾಲ್ಮೀಕಿ ಭವನ ಇನ್ನೂ ಹಲವು ಹತ್ತು ನಾಗರಿಕ ಸೌಲಭ್ಯಗಳಿಗೆ ಜಮೀನ್ ಇಲ್ಲದಂತಾಗುತ್ತದೆ. ಇದರ ಅರಿವು ಸಾರ್ವಜನಿಕರಿಗೆ ಇರಬೇಕು ಸರ್ಕಾರಿ ಜಮೀನನ್ನು ಯಾರು ಒತ್ತುವರಿ ಮಾಡಲು ಪ್ರಯತ್ನಪಟ್ಟರೆ ಮೊದಲು ಗ್ರಾಮಸ್ಥರು ಒತ್ತುವರಿದಾರರನ್ನು ತಡೆಯಬೇಕು ತದನಂತರ ಕಂದಾಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕು. ಮುಂದಿನ ದಿನಗಳಲ್ಲಿ ಈ ರೀತಿ ಹೊತ್ತುವರೆಗೆ ಪ್ರಯತ್ನಪಟ್ಟರೆ ನಿರ್ದಾಕ್ಣ್ಯವಾಗಿ ಒತ್ತುವರಿ ಮಾಡದವರ  ಮೇಲೆ ಮೊಕದ್ದಮೆ ದಾಖಲಿಸಿ ಕ್ರಮಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ರಾಜಸ್ವನಿರೀಕ್ಷಕರ ಚೇತನ್ ಕುಮಾರ್ ಸರ್ವೆಯರ್ ಪ್ರಸನ್ನಕುಮಾರ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳು ಪೊಲೀಸ್ ಸಿಬ್ಬಂದಿಗಳು ಭಾಗಿಯಾಗಿದ್ದರು

[t4b-ticker]

You May Also Like

More From Author

+ There are no comments

Add yours