ಬಂಗಾರ ಪ್ರಿತರಿಗೆ ಶಾಕ್ ಬೆಲೆಯಲ್ಲಿ ಒಂದೇ ದಿನ ಭಾರಿ ಏರಿಕೆ

 

ಬೆಂಗಳೂರು: Today Gold and Silver Price: ಚಿನಿವಾರ ಪೇಟೆಯಲ್ಲಿ ನಿನ್ನೆ ಇಳಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ(Silver price) ಇಂದು (ಜನವರಿ 4, ಬುಧವಾರ, 2023) ಭಾರಿ ಏರಿಕೆಯಾಗಿದೆ. ನೀವು ಏನಾದರೂ ಇಂದು ಆಭರಣಗಳನ್ನು ಖರೀದಿಸಲು ಪ್ಲಾನ್ ಮಾಡಿದ್ದರೆ ಚಿನ್ನಾಭರಣಗಳ ಬೆಲೆಗಳನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 530 ರೂಪಾಯಿ ಏರಿಕೆಯಾಗಿದೆ. ಆ ಬಳಿಕ 55,630 ರೂಪಾಯಿ ಇದೆ. ನಿನ್ನೆ 55,100 ರೂಪಾಯಿ ಇತ್ತು. ಅದೇ ರೀತಿಯಾಗಿ 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆಯಲ್ಲಿ 500 ರೂಪಾಯಿ ಹೆಚ್ಚಳಗೊಂಡ ನಂತರ 51,000 ರೂಪಾಯಿಗೆ ಬಂದು ನಿಂತಿದೆ. ನಿನ್ನೆ 50,500 ರೂಪಾಯಿ ಇತ್ತು.

ಒಂದು ಕೆಜಿ ಬೆಳ್ಳಿ ಬೆಲೆ ಇಂದು 75,500 ರೂಪಾಯಿ ಇದೆ. ಬೆಳ್ಳಿ ಬೆಲೆಯ ಮೇಲೆ 1000 ರೂಪಾಯಿ ಏರಿಕೆಯಾಗಿದೆ. ನಿನ್ನೆ 74,500 ರೂಪಾಯಿಗೆ ಬಂದು ನಿಂತಿತ್ತು. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಬಹುತೇಕ ಎಲ್ಲಾ ಕಡೆ ಇಂದು ಇದೇ ದರಗಳಲ್ಲಿ ಮಾರಾಟವಾಗುತ್ತಿವೆ.

[t4b-ticker]

You May Also Like

More From Author

+ There are no comments

Add yours