ಜಗದೀಶ್ ಶೆಟ್ಟರ್ ಕ್ಷೇತ್ರದ ಸೋಲು ಗೆಲುವಿನ ಲೆಕ್ಕಚಾರ ಹೇಗಿದೆ.

ಹುಬ್ಬಳ್ಳಿ, ಏಪ್ರಿಲ್‌ 22: ಮೇ 10 ರಂದು ನಡೆಯಲಿರುವ ಕರ್ನಾಟಕ ಚುನಾವಣಾ ಕಣ ರಂಗು ಪಡೆದಿದೆ. ಆಡಳಿತಾರೂಢ ಬಿಜೆಪಿ ಬಂಡಾಯದ ಬೆಂಕಿಯಲ್ಲಿ ನಲುಗುತ್ತಿದೆ. ಪ್ರಮುಖ ಲಿಂಗಾಯತ ನಾಯಕರಾದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಜಗದೀಶ್‌ ಶೆಟ್ಟರ್‌ ಸೇರ್ಪಡೆಯಿಂದ ಬಿಜೆಪಿ ಹಾನಿಯಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ.

ಆರು ಬಾರಿ ಸ್ಪರ್ಧಿಸಿದ್ದ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದಲೇ ಈ ಬಾರಿಯೂ ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ದಶಕಗಳ ಕಾಲ ಹಿಂದೂ ಬಲಬಂಥೀಯ ಸಿದ್ದಾಂತಕ್ಕೆ ಅಂಟಿಕೊಂಡಿದ್ದ ಶೆಟ್ಟರ್‌ ಅವರು ಕಾಂಗ್ರೆಸ್‌ ಸೇರಿರುವುದು ಹುಬ್ಬಳ್ಳಿಯ ರಾಜಕಾರಣದಲ್ಲಿ ಬಹುದೊಡ್ಡ ತಲ್ಲಣಗಳನ್ನೇ ಸೃಷ್ಟಿಸಿದೆ. ಇದು ಕರ್ನಾಟಕದ ಚುನಾವಣೆಯ ಮೇಲೆ ಎಷ್ಟು ಪರಿಣಾಮ ಬೀರಬಹುದೆಂದು ಕಾದುನೋಡಬೇಕಿದೆ.

ಹುಬ್ಬಳ್ಳಿಯಲ್ಲಿ ಪ್ರಬಲ ಹಿಡಿತ ಹೊಂದಿರುವ ಶೆಟ್ಟರ್ ಕುಟುಂಬವು ಬಣಜಿಗ ವ್ಯಾಪಾರಿ ಸಮುದಾಯಕ್ಕೆ ಸೇರಿದೆ. ಇದು ಲಿಂಗಾಯತ ಸಮುದಾಯದ ನಿರ್ಣಾಯಕ ಉಪಪಂಗಡವಾಗಿದ್ದು, ಇದೀಗ ಈ ಪ್ರದೇಶದಲ್ಲಿ ಬಿಜೆಪಿಯ ನೆಲೆಯನ್ನೇ ಅಲ್ಲಾಡಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಜಗದೀಶ್‌ ಶೆಟ್ಟರ್‌ಗೆ ಎದುರಾಳಿಯಾಗಿ ಮಹೇಶ್‌ ತೆಂಗಿನಕಾಯಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಅವರಿಬ್ಬರ ನಡುವಿನ ಗುಣಾತ್ಮಕ ಹಾಗೂ ಋಣಾತ್ಮಕ ಅಂಶಗಳ ವಿಶ್ಲೇಷಣೆಯನ್ನು ಇಲ್ಲಿ ನೀಡಲಾಗಿದೆ.

ಜಗದೀಶ್‌ ಶೆಟ್ಟರ್‌ ಪ್ಲಸ್‌ ಪಾಯಿಂಟ್‌ಗಳೇನು?

1- ಪ್ರಬಲ ಲಿಂಗಾಯತ ಸಮುದಾಯ: ಜಗದೀಶ್‌ ಶೆಟ್ಟರ್‌ ಅವರು ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಪ್ರಾಬಲ್ಯವಿದೆ. ಇದು ಶೆಟ್ಟರ್‌ಗೆ ಸಕಾರಾತ್ಮಕ ಅಂಶವಾಗಿ ಪರಿಣಮಿಸಬಹುದು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರವು ಸುಮಾರು 242,700 ಮತದಾರರನ್ನು ಹೊಂದಿದೆ, ಇದರಲ್ಲಿ 71,000 ಲಿಂಗಾಯತರು, 43,000 ಮುಸ್ಲಿಮರು, 26,500 ಕ್ರಿಶ್ಚಿಯನ್ನರು, 22,000 ಮರಾಠಿಗಳು ಮತ್ತು ಬ್ರಾಹ್ಮಣರು ಮತ್ತು 25,000 ಒಬಿಸಿಗಳು ಸೇರಿದ್ದಾರೆ.

2- ಆಡಳಿತ ವಿರೋಧಿ ಅಲೆ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ   ನೇತೃತ್ವದ ಸರ್ಕಾರವು ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿವೆ. 40 ಪರ್ಸೆಂಟ್‌ ಭ್ರಷ್ಟಾಚಾರ, ಪಿಎಸ್‌ಐ ಹಗರಣ, ನಿಷ್ಕ್ರಿಯತೆ ಸೇರಿದಂತೆ ಹಲವು ಋಣಾತ್ಮಕ ಆರೋಪಗನ್ನು ಬಿಜೆಪಿ ಎದುರಿಸುತ್ತಿದೆ. ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ಜಗದೀಶ್‌ ಶೆಟ್ಟರ್‌ಗೆ ಅಧಿಕಾರ ವಿರೋಧಿ ಅಲೆ ಸಹಾಯ ಮಾಡಬಹುದು.

3- ಮಹೇಶ್‌ ತೆಂಗಿನಕಾಯಿ ಹೊಸ ಪರಿಚಯ: ಜಗದೀಶ್‌ ಶೆಟ್ಟರ್‌ ವಿರುದ್ಧ ಸಂಘಪರಿವಾರದ ಮಹೇಶ್‌ ತೆಂಗಿನಕಾಯಿಯನ್ನು ಕಣಕ್ಕಿಳಿಸಲಾಗಿದೆ. ಅವರು ಶೆಟ್ಟರ್‌ ಅವರ ಶಿಷ್ಯರಾಗಿದ್ದವರು. ಹುಬ್ಬಳ್ಳಿ ಧಾರವಾಡ ಜನಕ್ಕೆ ಅಷ್ಟೇನು ಪರಿಚಿತರಲ್ಲದವರು. ತೆಂಗನಕಾಯಿ ಅವರೂ ಸಹ ಬಣಜಿಗ ಜಾತಿಗೆ ಸೇರಿದವರು. ಬಣಜಿಗ ಸಮುದಾಯದ ಒಂದು ವರ್ಗ ಶೆಟ್ಟರ್ ಅವರನ್ನು ಬೆಂಬಲಿಸಬಹುದು.

4- ಲಿಂಗಾಯತ ವಿರೋಧಿ ಬಿಜೆಪಿ ನಿರೂಪಣೆ: ರಾಜ್ಯದಲ್ಲಿ ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕಿದೆ. ಬಿಜೆಪಿಯ ಪ್ರಮುಖ ಲಿಂಗಾಯತ ನಾಯಕರಾದ ಮಾಜಿ ಸಿಎಂಗಳಾದ ಬಿಎಸ್‌ ಯಡಿಯೂರಪ್ಪ, ಜಗದೀಶ್‌ ಶೆಟ್ಟರ್ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂಬ ನಿರೂಪಣೆಯನ್ನು ಕಾಂಗ್ರೆಸ್‌ ಹುಟ್ಟುಹಾಕುತ್ತಿದೆ. ಲಿಂಗಾಯತ ಪ್ರಾಬಲ್ಯದ ಹುಬ್ಬಳ್ಳಿ ಧಾರವಾಡದಲ್ಲಿ ಜಗದೀಶ್‌ ಶೆಟ್ಟರ್‌ಗೆ ಈ ಅಂಶ ಸಹಾಯ ಮಾಡಬಹುದು.

5- ಮುಸ್ಲಿಂ, ಕ್ರಿಶ್ಚಿಯನ್ನರ ಬೆಂಬಲ: ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಮುಸ್ಲಿಂ ಮತದಾರರ ಬೆಂಬಲ ಶೆಟ್ಟರ್‌ ಅವರಿಗೆ ಸಿಗಬಹುದು. 43,000 ಮುಸ್ಲಿಮರು ಹಾಗೂ 26,500 ಕ್ರಿಶ್ಚಿಯನ್ನರು ಈ ಬಾರಿ ಜಗದೀಶ್‌ ಶೆಟ್ಟರ್‌ಗೆ ಬೆಂಬಲಿಸಬಹುದು.

ಜಗದೀಶ್‌ ಶೆಟ್ಟರ್‌ ಮೈನಸ್‌ ಪಾಯಿಂಟ್‌ಗಳೇನು?

1- ಬಿಜೆಪಿಗೆ ಮೋಸದ ಆರೋಪ: ಶೆಟ್ಟರ್‌ ಅವರು ಶಾಸಕರು, ವಿರೋಧ ಪಕ್ಷದ ನಾಯಕರು, ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಬಿಜೆಪಿ ಈ ಎಲ್ಲ ಅಧಿಕಾರಗಳನ್ನು ನೀಡಿತ್ತು. ಆದರೂ ಅವರು ಬಿಜೆಪಿಗೆ ಮೋಸ ಮಾಡಿ ಕಾಂಗ್ರೆಸ್‌ಗೆ ಸೇರಿದರು ಎಂಬ ನಿರೂಪಣೆಯನ್ನು ಬಿಜೆಪಿ ಹುಟ್ಟುಹಾಕುತ್ತಿದೆ. ಇದು ಶೆಟ್ಟರ್‌ ಅವರಿಗೆ ಅಪಾಯವನ್ನು ತಂದೊಡ್ಡಬಹುದು.

2- ಆರ್‌ಎಸ್‌ಎಸ್‌ ಕೋಪ: ಸಂಘ ಪರಿವಾರದಿಂದ ಬಂದಿರುವ ಜಗದೀಶ್‌ ಶೆಟ್ಟರ್‌ ಅವರ ಕುಟುಂಬ ಹುಬ್ಬಳ್ಳಿಯಲ್ಲಿ ಹಿಂದುತ್ವವನ್ನು ಪಸರಿಸುವಲ್ಲಿ ಹೆಚ್ಚು ಕೆಲಸ ಮಾಡಿದೆ. ಈಗ ಬಿಜೆಪಿ ತೊರೆದಿರುವ ಶೆಟ್ಟರ್‌ ಅವರ ಮೇಲೆ ಆರ್‌ಎಸ್‌ಎಸ್‌ ಕೋಪಗೊಂಡಿದೆ. ಈ ಹಿನ್ನೆಲೆಯಲ್ಲಿ ಶೆಟ್ಟರ್‌ ಅವರನ್ನು ಶತಾಯಗತಾಯ ಸೋಲಿಸಲೇಬೇಕೆಂದು ಆರ್‌ಎಸ್‌ಎಸ್‌ ಪಣತೊಟ್ಟಿದೆ. ನಾಗಪುರದಿಂದ ಸ್ವಯಂಸೇವಕರನ್ನು ಹುಬ್ಬಳ್ಳಿಗೆ ಕಳುಹಿಸಿ ಶೆಟ್ಟರ್‌ ವಿರುದ್ಧ ಕೆಲಸ ಮಾಡಲು ಆರ್‌ಎಸ್‌ಎಸ್ ಹೇಳಿದೆ.

3- ಅಲ್ಪಸಂಖ್ಯಾತರ ನಂಬಿಕೆ ಗೆಲ್ಲುವುದು ಕಷ್ಟ : ಇಷ್ಟು ವರ್ಷಗಳ ಕಾಲ ಹಿಂದು ರಾಷ್ಟ್ರವಾದವನ್ನು ಪ್ರತಿಪಾದಿಸುತ್ತಿದ್ದ ಜಗದೀಶ್‌ ಶೆಟ್ಟರ್‌ ಅವರು ಈಗ ಕಾಂಗ್ರೆಸ್‌ ಸೇರಿದ್ದಾರೆ. ಈ ಹಿಂದೆ ಹುಬ್ಬಳ್ಳಿಯಲ್ಲಿ ನಡೆದಿದ್ದ ಈದ್ಗಾ ಮೈದಾನ ವಿವಾದದಲ್ಲಿ ಶೆಟ್ಟರ್‌ ಮುಸ್ಲಿಮರ ಪರ ನಿಂತಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ನಂಬಿಕೆಯನ್ನು ಗೆಲ್ಲುವುದು ಶೆಟ್ಟರ್‌ಗೆ ಕಷ್ಟವಾಗಬಹುದು

4- ಪ್ರಧಾನಿ ಮೋದಿ ವರ್ಚಸ್ಸು: ಹಿಂದುತ್ವದ ಪ್ರಬಲ ನೆಲೆಯಾಗಿರುವ ಹುಬ್ಬಳ್ಳಿಯಲ್ಲಿ ಮೋದಿ ವರ್ಚಸ್ಸು ಕೆಲಸ ಮಾಡಬಹುದು. ಯುವಕರು ಬಿಜೆಪಿ ಪರ ನಿಲ್ಲಬಹುದು. ಮೊದಲ ಬಾರಿಯ ಮತದಾರರು ಬಿಜೆಪಿಗೆ ಮತ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

5- ಅಭಿವೃದ್ದಿಯಲ್ಲಿ ಹಿನ್ನೆಡೆ: ಶೆಟ್ಟರ್‌ ಅವರು ಆರು ಬಾರಿ ಶಾಸಕರಾಗಿ, ಮುಖ್ಯಮಂತ್ರಿಯಾದರೂ ಹುಬ್ಬಳ್ಳಿ ಧಾರವಾಡದಲ್ಲಿ ಅಭಿವೃದ್ದಿ ಕಾರ್ಯಗಳಾಗಿಲ್ಲ ಎಂಬ ಆರೋಪವಿದೆ. ಇದು ಶೆಟ್ಟರ್‌ಗೆ ಬಹುದೊಡ್ಡ ಸಂಕಷ್ಟವಾಗಿ ಪರಿಣಮಿಸಬಹುದು.

ಮಹೇಶ್‌ ತೆಂಗಿನಕಾಯಿ ಫ್ಲಸ್‌ ಪಾಯಿಂಟ್‌ಗಳೇನು?

1- ಲಿಂಗಾಯತ ಪ್ರಾಬಲ್ಯ: ಶೆಟ್ಟರ್‌ ವಿರುದ್ಧ ಕಣಕ್ಕಿಳಿದಿರುವ ಬಿಜೆಪಿಯ ಮಹೇಶ್‌ ತೆಂಗಿನಕಾಯಿ ಅವರು ಲಿಂಗಾಯತ ಉಪಪಂಗಡವಾದ ಬಣಜಿಗ ಜಾತಿಗೆ ಸೇರಿದವರು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಲಿಂಗಾಯತರು ತೆಂಗಿನಕಾಯಿ ಪರ ನಿಲ್ಲವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

2- ಸಂಘ ಪರಿವಾರದ ಬೆಂಬಲ: ಸಂಘಪರಿವಾರದ ಕಟ್ಟಾಳು ಆಗಿರುವ ಮಹೇಶ್‌ ತೆಂಗಿನಕಾಯಿ ಸಂಘ ಪರಿವಾರದಿಂದ ಬಂದವರು. ಈ ಹಿನ್ನೆಲೆಯಲ್ಲಿ ಸಂಘ ಪರಿವಾರದ ಪೂರ್ಣ ಬೆಂಬಲ ತೆಂಗಿನಕಾಯಿ ಅವರ ಕಡೆಗಿದೆ. ಸಂಘದವರ ಸಂಪನ್ಮೂಲಗಳನ್ನು ತೆಂಗಿನಕಾಯಿ ಬಳಸಿಕೊಳ್ಳುವುದು ನಿಶ್ಚಿತವಾಗಿದೆ. ಇದು ಅವರಿಗೆ ಸಹಾಯ ಮಾಡಬಹುದು.

3- ಹೊಸ ಮುಖಕ್ಕೆ ಮಣೆ: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹೊಸ ಮುಖಗಳಿಗೆ ಮಣೆ ಹಾಕಿದೆ. ಆರು ಬಾರಿ ಶೆಟ್ಟರ್‌ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದ ಹುಬ್ಬಳ್ಳಿ ಧಾರವಾಡ ಕ್ಷೇತ್ರದ ಜನರಿಗೆ ಹೊಸ ಮುಖವೊಂದು ಪರಿಚಿತವಾಗಿರುವುದು ಹೊಸ ಆಶಯವನ್ನು ಹುಟ್ಟುಹಾಕಬಹುದು. ಇದು ಮಹೇಶ್‌ ತೆಂಗಿನಕಾಯಿಗೆ ಸಕಾರಾತ್ಮಕ ಅಂಶವಾಗಿ ಪರಿಣಮಿಸಬಹುದು.

4- ಮೋದಿಯಿಂದ ಪ್ರಚಾರ: ಪ್ರಧಾನಿ ಮೋದಿ ಅವರು ಹುಬ್ಬಳ್ಳಿ ಧಾರವಾಡದಲ್ಲಿ ಪ್ರಚಾರ ನಡೆಸಲಿದ್ದಾರೆ. ತೆಂಗಿನಕಾಯಿ ಗೆಲುವು ಬಿಜೆಪಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರ ವರ್ಚಸ್ಸನ್ನು ಬಿಜೆಪಿ ಬಳಸಿಕೊಳ್ಳಲು ಮುಂದಾಗಿದೆ. ಇದು ಮಹೇಶ್‌ ತೆಂಗಿನಕಾಯಿಗೆ ಆಸರೆ ಒದಗಿಸಬಹುದು.

5- ಹುಬ್ಬಳ್ಳಿಯಲ್ಲಿ ಹಿಂದುತ್ವಕ್ಕೆ ಬಹುದೊಡ್ಡ ನೆಲೆ: 1967 ರಿಂದಲೂ ಹುಬ್ಬಳ್ಳಿಯಲ್ಲಿ ಹಿಂದುತ್ವಕ್ಕೆ ಬಹುದೊಡ್ಡ ನೆಲೆ ಸಿಕ್ಕಿದೆ. ಅಲ್ಲಿನ ನಗರ ಕೇಂದ್ರಿತ ಮತದಾರರು ಹಿಂದುತ್ವಕ್ಕೆ ಒಲಿದಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್‌ ಪರ ನಿಲ್ಲುವುದು ಕಷ್ಟಸಾಧ್ಯ. ಇದು ಮಹೇಶ್‌ ತೆಂಗಿನಕಾಯಿಗೆ ಆಸರೆಯಾಗಬಹುದು.

ಮಹೇಶ್‌ ತೆಂಗಿನಕಾಯಿ ಮೈನಸ್‌ ಪಾಯಿಂಟ್‌ಗಳೇನು?

1- ಪರಿಚಿತರಲ್ಲದ ಮಹೇಶ್‌ ತೆಂಗಿನಕಾಯಿ: ಹುಬ್ಬಳ್ಳಿ ಧಾರವಾಡ ಕ್ಷೇತ್ರದಲ್ಲಿ ಮಹೇಶ್‌ ತೆಂಗನಕಾಯಿ ಅವರು ಜನರಿಗೆ ಅಷ್ಟೊಂದು ಪರಿಚಿತರಲ್ಲ. ಅವರು ಸಂಘಪರಿವಾರದಲ್ಲಿ ಕೆಲಸ ಮಾಡಿದವರು. ಹೀಗಾಗಿ ಜನರು ಅವರಿಗೆ ಮತ ನೀಡದಿರಬಹುದು.

2- ಗುರುವಿಗೆ ದ್ರೋಹದ ನಿರೂಪಣೆ: ಜಗದೀಶ್‌ ಶೆಟ್ಟರ್‌ ಅವರ ಶಿಷ್ಯನೆಂದೇ ಮಹೇಶ್‌ ತೆಂಗಿನಕಾಯಿ ಅವರನ್ನು ಕರೆಯಲಾಗುತ್ತಿದೆ. ಈಗ ಗುರುವಿನ ವಿರುದ್ಧ ಸ್ಪರ್ಧಿಸಲು ಶಿಷ್ಯ ಮುಂದೆ ಬಂದಿರುವುದು ಜನರಿಗೆ ಸರಿಹೋಗದೇ ಇರಬಹುದು.

3- ಸಮುದಾಯದ ಸಮಸ್ಯೆ: ಜಗದೀಶ್‌ ಶೆಟ್ಟರ್‌ ಅವರು ಲಿಂಗಾಯತ ಉಪಪಂಗಡವಾದ ಬಣಜಿಗ ಜಾತಿಗೆ ಸೇರಿದವರು. ಅದೇ ಜಾತಿಯಿಂದ ಮಹೇಶ್‌ ತೆಂಗಿನಕಾಯಿ ಬಂದವರು. ಹೀಗಾಗಿ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಬಣಜಿಗ ಮತಗಳು ತೆಂಗಿನಕಾಯಿ ಅವರಿಗೆ ಸಿಗದೇ ಹೋಗಬಹುದು.

 ನೇತೃತ್ವದ ಬಿಜೆಪಿಗೆ ಆಡಳಿತ ವಿರೋಧ ಅಲೆ ಎದುರಾಗಿದೆ. ಇದು ಮಹೇಶ್‌ ತೆಂಗಿನಕಾಯಿ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು.

5- ಕಾಂಗ್ರೆಸ್‌ ಲಿಂಗಾಯತ ವಿರೋಧಿ ನಿರೂಪಣೆ: ಬಿಜೆಪಿ ನಾಯಕರು ಲಿಂಗಾಯತ ನಾಯಕರಿಗೆ ಅನ್ಯಾಯ ಎಸಗಿದೆ ಎಂಬ ನಿರೂಪಣೆಯೊಂದು ಹುಟ್ಟಿಕೊಂಡಿದೆ. ಇದನ್ನು ಮುನ್ನೆಲೆಗೆ ತರಲು ಕಾಂಗ್ರೆಸ್‌ ಯತ್ನಿಸುತ್ತಿದೆ. ಹೀಗಾಗಿ, ಕ್ಷೇತ್ರದಲ್ಲಿನ ಲಿಂಗಾಯತ ಸಮುದಾಯದವರು ಬಿಜೆಪಿ ವಿರುದ್ಧ ನಿಲ್ಲುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.

[t4b-ticker]

You May Also Like

More From Author

+ There are no comments

Add yours