ಚಿನ್ನದಂಗಡಿ ಮಾಲೀಕನ ಬಟ್ಟೆ ಬಿಚ್ಚಿ ಬೆತ್ತಲೆ ವಿಡಿಯೋ ಮಾಡಿ 50 ಲಕ್ಷ ಪೋಕಿದ ಮಹಿಳೆ ಈಗ ಪೋಲಿಸ್ ಅತಿಥಿ.

 

ದೇಶದಲ್ಲಿ  ಪ್ರಪಂಚದಲ್ಲಿ  ಹಣಕ್ಕೋಸ್ಕರ ಶ್ರೀಮಂತರನ್ನು ಹನಿಟ್ರ್ಯಾಪ್ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡಿ ಹಣ ಪೀಕುವ  ಪ್ರವೃತ್ತಿಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇದೇ ರೀತಿ ಸಕ್ಕರೆ ನಾಡು ಮಂಡ್ಯದಲ್ಲಿ ಮಹಿಳೆಯೊಬ್ಬಳು ಚಿನ್ನದಂಗಡಿಯ ಮಾಲೀಕನಿಗೆ ಹನಿಟ್ರ್ಯಾಪ್ ಮೂಲಕ ಬ್ಲಾಕ್ ಮೇಲ್ ಮಾಡಿ 50 ಲಕ್ಷ ರೂಪಾಯಿ ಹಣ ಪಡೆಯುವ ಮೂಲಕ  ಇದೀಗ ಆಕೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ. 

ಮಹಿಳೆಯ ಹೆಸರು ಸಲ್ಮಾ ಭಾನು , ಈಕೆ ಮಂಡ್ಯದ ಗುತ್ತಲು ಬಡಾವಣೆಯ ನಿವಾಸಿಯಾಗಿದ್ದು, ಇದೀಗ ಮಂಡ್ಯದ ಶ್ರೀನಿಧಿ ಗೋಲ್ಡ್ ಚಿನ್ನದಂಗಡಿಯ ಮಾಲೀಲಿಕ ಜಗನ್ನಾಥ್ ಶೆಟ್ಟಿಗೆ ಬ್ಲಾಕ್‌ ಮೇಲ್ ಮಾಡಿ 50 ಲಕ್ಷ ಪಡೆಯುವ ಮೂಲಕ  ಪೊಲೀಸರ ಅತಿಥಿಯಾಗಿದ್ದಾಳೆ.

ಸಲ್ಮಾ ಭಾನು ಕೆಲ ಸಂಘಟನೆಗಳೊಂದಿಗೆ ಹೋರಾಟ ಮಾಡುವುದಾಗಿ ಆಗಾಗ ಕಾಣಿಸಿಕೊಳ್ಳುತ್ತಿದ್ದಳು. ಈಕೆ ವಿರುದ್ಧ ಕೆಲ ವರ್ಷಗಳ ಹಿಂದೆ ಬ್ಲಾಕ್ ಮೇಲ್ ಆರೋಪವು ಸಹ  ಕೇಳಿ ಬಂದಿತ್ತು. ಇದೀಗ ಮತ್ತೆ ಅದೇ ರೀತಿಯ ಬ್ಲಾಕ್ ಮೇಲ್ ಆರೋಪ ಕೇಳಿ ಬಂದಿರುವ ಕಾರಣ ಈಕೆಯನ್ನು ಮಂಡ್ಯ ಪೊಲೀಸರು ವಶಕ್ಕೆ ಪಡೆದು ಡ್ರೀಲ್ ಮಾಡುತ್ತಿದ್ದಾರೆ.

ಮಂಡ್ಯದ ಶ್ರೀನಿಧಿ ಗೋಲ್ಡ್‌ನ ಮಾಲೀಕ ಜಗನ್ನಾಥ್ ಶೆಟ್ಟಿ ಅವರು  ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿರುವ ಆಧಾರದ ಮೇಲೆ ಇದೀಗ ತನಿಖೆ ನಡೆಯುತ್ತಿದೆ. ಕಳೆದ ಫೆಬ್ರವರಿ 26 ರಂದು ಮೈಸೂರಿನಿಂದ ಮಂಗಳೂರಿಗೆ ತೆರಳಲು ರಾತ್ರಿ 10 ಗಂಟೆಯ ಬಸ್‌ಗೆ ಟಿಕೆಟ್ ಬುಕ್ ಮಾಡಿದ್ದಾರೆ. ಹೀಗಾಗಿ ಅಂದು ಮಂಡ್ಯದಿಂದ ಮೈಸೂರಿಗೆ ತೆರಳಲು ಮಂಡ್ಯದ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಜಗನ್ನಾಥ್ ಶೆಟ್ಟಿ ಕಾಯುತ್ತಿದ್ದು ಈ ವೇಳೆ ಒಂದು ಕಾರು ಬಂದು ಶೆಟ್ರ ಬಳಿ ಬಂದು ನಿಂತುಕೊಳ್ಳುತ್ತದೆ.

ಕಾರಿನಲ್ಲಿ ಸಲ್ಮಾ ಭಾನು ಹಾಗೂ ಇಬ್ಬರು ಪುರುಷರು ಇದ್ದು, ಆಗ ಕಾರಿನಲ್ಲಿದ್ದವರು ನೀವು ಶ್ರೀನಿಧಿ ಗೋಲ್ಡ್ ಮಾಲೀಕರು ಅಲ್ವಾ ಎಂದು ಪರಿಚಯಸ್ಥರ ರೀತಿ  ಮಾತನಾಡುತ್ತಾರೆ. ನಂತರ ನಾವು ಮೈಸೂರಿಗೆ ಹೋಗ್ತಾ ಇದೀವಿ ಬನ್ನಿ ಎಂದು ಕರೆದುಕೊಂಡು ಹೋಗ್ತಾರೆ. ಮಾರ್ಗ ಮಧ್ಯ ಸಲ್ಮಾ ಭಾನು ಮೈಸೂರಿನ ಹೊಟೇಲ್‌ವೊಂದರಲ್ಲಿ ನಮ್ಮ ಪರಿಚಯಸ್ಥರು ಗೋಲ್ಡ್ ಬಿಸ್ಕೇಟ್ ತಂದಿದ್ದಾರೆ ಅದು ಅಸಲಿಯೋ ಅಥವಾ ನಕಲಿಯೋ‌ ನಮಗೆ ಗೊತ್ತಿಲ್ಲ ಬಂದು ನೋಡಿ ಹೇಳಿ ಎನ್ನುತ್ತಾಳೆ. ಆರಂಭದಲ್ಲಿ ಜಗನ್ನಾಥ್ ಶೆಟ್ಟಿ ಬರುವುದಕ್ಕೆ ನಿರಾಕರಿಸಿದ್ರು ನಂತರ ಸಲ್ಮಾ ಭಾನು ಮಾತಿನ ವೈಖರಿಗೆ ಮಾರು ಹೋಗಿ ಹೊಟೇಲ್‌ಗೆ ಕರೆದುಕೊಂಡು ಹೋಗ್ತಾಳೆ.

ಹೊಟೇಲ್‌ನ ರೂಂ ಪ್ರವೇಶ ಮಾಡುತ್ತಿದ್ದಂತೆ ಶೆಟ್ಟರ ಜೊತೆ ಬಂದಿದ್ದ ಸಲ್ಮಾ ಭಾನು ಹಾಗೂ ಪುರುಷರು ಮರೆಯಾಗುತ್ತರೆ‌. ಈ ವೇಳೆ ರೂಂನಲ್ಲಿ 26 ವರ್ಷದ ಯುವತಿ ಇರುತ್ತಾಳೆ‌. ಇದಾದ ನಂತರ ಜಗನ್ನಾಥ್ ಶೆಟ್ಟಿ ಮತ್ತು ಯುವತಿ ರೂಂನಲ್ಲಿರುವ ವಿಡಿಯೋವನ್ನು ಚಿತ್ರೀಕರಣ ಮಾಡಿ 4 ಕೋಟಿ ಬೇಡಿಕೆ ಇಡುತ್ತಾಳೆ.  ಕೊಡಲ್ಲ  ಅಂದ್ರೆ ಈ ವಿಡಿಯೋವನ್ನು ಹರಿಬಿಡುವುದಾಗಿ ಬೆದರಿಕೆಯಾಕುತ್ತಾರೆ. ನಂತರ ಜಗನ್ನಾಥ್ ಶೆಟ್ಟಿ ಚೌಕಾಸಿ ಮಾಡಿ 50 ಲಕ್ಷ ಕೊಡುವುದಾಗಿ ಒಪ್ಪಿಕೊಳ್ತಾರೆ. ಬಳಿಕ ಮೂರು ಕಂತಿನಲ್ಲಿ 50 ಲಕ್ಷವನ್ನು ಸಲ್ಮಾ ಭಾನು ಹಾಗೂ ಅವರ ಜೊತೆಗಿದ್ದವರಿಗೆ ಜಗನ್ನಾಥ್ ಶೆಟ್ಟಿ ನೀಡ್ತಾರೆ‌. ಇದಾದ ನಂತರವು ಹಣಕ್ಕೆ ಸಲ್ಮಾ ಭಾನು ಬೇಡಿಕೆ ಇಡುತ್ತಿದ್ದ ಕಾರಣ ಇದೀಗ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಗೆ ಸಲ್ಮಾ ಭಾನು ಸೇರಿದಂತೆ ನಾಲ್ವರ ವಿರುದ್ಧ ಜಗನ್ನಾಥ್ ಶೆಟ್ಡಿ ದೂರು ನೀಡಿದ್ದಾರೆ‌. ದೂರಿನ ಅನ್ವಯ ಇದೀಗ ಪೊಲೀಸರು ಸಲ್ಮಾ ಭಾನುನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡುತ್ತಿದ್ದು, ಉಳಿದ ಮೂವರು ಇದೀಗ ತಲೆಮರೆಸಿಕೊಂಡಿದ್ದಾರೆ. ಒಟ್ಟಾರೆ ಹಣದ ಆಸೆಗೆ ಹನಿಟ್ರ್ಯಾಪ್ ಮಾಡಿ ಉದ್ಯಮಿಗೆ ಖೆಡ್ಡಾ ತೊಡಲು ಮುಂದಾಗಿದ್ದ  ಮಹಿಳೆ ಇದೀಗ ಪೊಲೀಸರ ವಶದಲ್ಲಿದ್ದು, ವಿಚಾರಣೆಯ ವೇಳೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸತ್ಯಾಸತ್ಯೆ ಬೆಳಕಿಗೆ ತಿಳಿಯಲಿದೆ.

[t4b-ticker]

You May Also Like

More From Author

+ There are no comments

Add yours