ಗ್ರಾಮೀಣ ಜನರು ಸಿರಿಧಾನ್ಯಗಳಿಂದ ದೂರ ಹೋಗುತ್ತಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕೆಲಸ:ದಿನೇಶ್ ಪೂಜಾರಿ

 

೨೮ಹೆಚ್.ಎಲ್.ಕೆ.೨
ಹೊಳಲ್ಕೆರೆ : ಗ್ರಾಮೀಣ ಜನರು ಸಿರಿಧಾನ್ಯಗಳಿಂದ ದೂರ ಹೋಗುತ್ತಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಪ್ರತಿಯೊಂದು ಹಳ್ಳೀಗಳಲ್ಲಿ ಸಿರಿಧಾನ್ಯ ಪ್ರದರ್ಶನ ಕೈಗೊಳ್ಳಲಾಗುತ್ತದೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕರಾದ ದಿನೇಶ್ ಪೂಜಾರಿ ತಿಳಿಸಿದ್ದಾರೆ.

ತಾಲೂಕಿನ ಚಿಕ್ಕಜಾಜೂರು ಯೋಜನಾ ಕಚೇರಿ ವ್ಯಾಪ್ತಿಯ ಮಲ್ಲಾಡಿಹಳ್ಳಿ ವಲಯದ ಕಾಲ್ಕೆರೆ ಗ್ರಾಮದಲ್ಲಿ ನೂತನ ಪ್ರಕೃತಿ ಜ್ಞಾನ ವಿಕಾಸ ಕೇಂದ್ರ ಹಮ್ಮಿಕೊಂಡಿದ್ದ ಸಿರಿಧಾನ್ಯ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಿರಿಧಾನ್ಯಗಳಲ್ಲಿ ಸಾಕಷ್ಟು ಆರೋಗ್ಯಪೂರಕ ಪೌಷ್ಠಿಕಾಂಶಗಳಿವೆ. ಸಂಪ್ರಾದಾಯ ಆಹಾರ ಪದ್ದತಿಗಳು ಆರೋಗ್ಯವನ್ನು ಹೆಚ್ಚು ಸದೃಢಗೊಳಿಸಲಿದೆ. ಸಿರಿ ಧಾನ್ಯಗಳನ್ನು ಬೆಳೆದು ಪ್ರಮುಖವಾದ ಆಹಾರವಾಗಿ ಉಪಯೋಗ ಮಾಡಬೇಕು. ಹಿಂದಿನ ಕಾಲದಲ್ಲಿ ಸಾಕಷ್ಟು ಸಿರಿಧಾನ್ಯ ಬೆಳೆಯುತ್ತಿದ್ದು ಆಧುನಿಕರಣದ ಹಿನ್ನಲೆಯಲ್ಲಿ ಸಿರಿ ಧಾನ್ಯ ಬೆಳೆಯುವವರ ಸಂಖ್ಯೆ ಕುಸಿದು ಹೊಗಿದೆ. ಹಾಗಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಿರಿಧಾನ್ಯಗಳನ್ನು ಕುರಿತು ಜಾಗೃತಿ ಮೂಡಿಸಲು ಮುಂದಾಗಿದೆ. ಸಿರಿಧಾನ್ಯಗಳ ಮಹತ್ವ ಅರಿತು ಅವುಗಳ ಪ್ರಯೋಜನಕ್ಕೆ ಮಹಿಳೆಯರು ಮುಂದಾಗಬೇಕೆಂದರು.
ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ನಿರ್ಧೇಶಕರಾದ ಮಲ್ಲಿಕಾರ್ಜುನಸ್ವಾಮಿ, ಒಕ್ಕೂಟದ ಅಧ್ಯಕ್ಷರಾದ ದೇವೇಂದ್ರಪ್ಪ, ಚಿಕ್ಕಜಾಜೂರು ವಿಭಾಗದ ಯೋಜನಾಧಿಕಾರಿ ವಸಂತ ಎಸ್. ವಲಯ ಮೇಲ್ವಿಚಾರಕರಾದ ಅಭಿಷೇಕ್, ಸಮನ್ವಯಾಧಿಕಾರಿ ತೇಜಸ್ಸಿನಿ, ಸೇವಾಪ್ರತಿನಿಧಿಗಳು, ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

[t4b-ticker]

You May Also Like

More From Author

+ There are no comments

Add yours