ನಾಲ್ಕು ಕೋಟಿ ರೂ ವೆಚ್ಚದಲ್ಲಿ ಬೃಹತ್ ಕೃಷಿ ಮಾರುಕಟ್ಟೆ ಸಂಕಿರ್ಣ: ರಾಜ್ಯ ನಿದೇರ್ಶಕ ಎಸ್.ಆರ್.ಗಿರೀಶ್

 

ವರದಿ: ಎಸ್.ವೇದಮೂರ್ತಿ

೧೪ಹೆಚ್.ಎಲ್.ಕೆ.೧
ಹೊಳಲ್ಕೆರೆ : ತಾಲೂಕು ವ್ಯವಸಾಯೋತ್ವನ್ನಗಳ ಮಾರಾಟ ಸಹಕಾರ ಸಂಘ ದಿಂದ ಪಟ್ಟಣದ ಬಸ್ ನಿಲ್ಧಾಣದ ಹಿಂಭಾಗದ ಸ್ಥಳದಲ್ಲಿ ೪ ಕೋಟಿ ರೂ ವೆಚ್ಚದಲ್ಲಿ  ಬೃಹತ್ ಕೃಷಿ ಮಾರುಕಟ್ಟೆ ಸಂಕಿರ್ಣ ನಿರ್ಮಿಸಿ, ರೈತರಿಗೆ ಕೃಷಿ ಕೆಲಸಕ್ಕೆ ಬೇಕಾಗುವ ಸೌಲಭ್ಯ ಕಲ್ಪಿಸಿಕೊಡಲಾಗುತ್ತದೆ ಎಂದು ಸಂಘದ ಅಧ್ಯಕ್ಷರು ಹಾಗೂ ರಾಜ್ಯ ಸಹಕಾರ ಸಂಘಗಳ ಮರಾಟ ಮಾಹಾ ಮಂಡಳ ರಾಜ್ಯ ನಿದೇರ್ಶಕ ಎಸ್.ಆರ್.ಗಿರೀಶ್ ತಿಳಿಸಿದ್ದಾರೆ.
ಪಟ್ಟಣದ ತಾಲೂಕು ವ್ಯವಸಾಯೋತ್ವನ್ನಗಳ ಮಾರಾಟದ ಸಹಕಾರ ಸಂಘ ನಿಯಮಿತ ಪಟ್ಟಣದ ಗಣಪತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು.
ತಾಲೂಕಿನಲ್ಲಿ ಸಾಕಷ್ಟು ಅಡಿಕೆ ಬೆಳೆ ಬರುತ್ತಿದೆ. ರೈತರಿಗೆ ಅನುಕೂಲಕ್ಕಾಗಿ ಆಡಿಕೆ ಖರೀದಿ ಕೇಂದ್ರ ಪ್ರಾರಂಭಿಸಿ, ಜಿಲ್ಲೆಯಲ್ಲಿ ಉತ್ತಮ ಅಡಿಕೆ ಮಾರುಕಟ್ಟೆಯಾಗಿ ಪರಿವರ್ತಿಸಲಾಗುತ್ತದೆ. ಅಡಿಕೆಗೆ ಖರೀದಿಗೆ ಪೂರಕವಾಗಿ ಹಳೆ ಗೋದಾಮು ತೆರವುಗೊಳಿಸಿ ಸುಮಾರು ೨ ಕೋಟಿ ವ್ಯೆಚ್ಚದಲ್ಲಿ ಗೋದಾಮು ನಿರ್ಮಾಣ ಮಾಡುತ್ತೇವೆ. ಇಲ್ಲಿಗೆ ಬರುವ ರೈತರಿಗೆ ಆರ್ಥಿಕ ಶಕ್ತಿ ನೀಡುವ ಉದ್ದೇಶದಿಂದ ಸಂಘದಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರಲು ಉದ್ದೇಶಿಸಿದೆ. ಮಾರಾಟ ಸಹಕಾರ ಸಂಘದಿAದ ಈಗಿರುವ ಮಾರುಕಟ್ಟೆ ಜತೆ ಇನ್ನೋಷ್ಟು ಕೃಷಿ ಪರಿಕರಗಳನ್ನು ರೈತರ ಕೈಗೆಟುವ ಧರದಲ್ಲಿ ಮಾರಾಟ ಮಾಡಲು ವಿವಿಧ ಗೊಬ್ಬರ, ಕೃಷಿ ಪರಿಕರ ಕಂಪನಿಗಳನ್ನು ಸಂಪರ್ಕಿಸಿ ರಿಯಾಯಿತಿ ಧರದಲ್ಲಿ ಕೃಷಿ ಆಭಿವೃದ್ಧಿಗೆ ಕೃಷಿಕರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಚಿಂತಿಸಲಾಗಿದೆ ಎಂದರು.
ಸಂಘವನ್ನು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸಲು ಒತ್ತು ನೀಡಿದೆ. ಮುಂದಿನ ದಿನಗಳಲ್ಲಿ ರೈತರ ಸಮಸ್ಯೆಗಳಿಗೆ ಬೆನ್ನೇಲುಭಾಗಿ ಕೃಷಿ ಮಾರಾಟ ಸಹಕಾರ ಸಂಘದ ನಿಲ್ಲಲಿದೆ. ರೈತರು ಇಲ್ಲಿರುವ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಕೃಷಿ ಬೇಕಾದ ಎಲ್ಲಾ ಸೌಲಭ್ಯಗಳ ಮಹತ್ವ ಅರಿತು ಉತ್ತಮ ಕೃಷಿ ಕಡೆಗೆ ರೈತರು ಮುಂದಾಗಬೇಕೆAದರು.
ನಿರ್ದೇಶಕ ಶರತ್ ಕುಮಾರ್ ಪಾಟೀಲ್ ಮಾತನಾಡಿ, ಕೃಷಿ ಸಮುದಾಯ ಸೇರಿದಂತೆ ಸಾಮಾಜಿಕ ಪರಿವರ್ತನೆ ಸಹಕಾರ ಸಂಘಗಳಿAದ ಸಾಧ್ಯ. ಸಹಕಾರ ತತ್ವದ ಮುಖ್ಯ ಸಂಧೇಶಗಳು ಮತ್ತು ಶ್ರೇಷ್ಠ ತತ್ವದ ಬುನಾದಿಯ ಮೇಲೆ ಕಟ್ಟಿರುವ ಸಹಕಾರ ಸಂಘಗಳಲ್ಲಿ ಪರಸ್ವರ ಸಹಕಾರ, ನಂಬಿಕೆಯ, ಮೂಲ್ಯ, ತತ್ವಗಳ ಬುನಾದಿಯ ಮೇಲೆ ಆಸ್ತಿತ್ವಕ್ಕೆ ತರಲಾಗಿದೆ. ಸಹಕಾರ ಸಂಘಗಳು ಜನರ ದ್ವನಿಯಾಗಿ ಕೆಲಸ ಮಾಡಿವೆ. ಅರ್ಥಿಕವಾಗಿ ದುರ್ಬಲರಿಗೆ ಸಮಾನತೆಯ ತಳಹದಿಯ ಮೇಲೆ ಸೌಲಭ್ಯಗಳನ್ನು ಕಲ್ಪಿಸಿದೆ. ಹಾಗಾಗಿ ಸಹಕಾರಿ ಬಂದುಗಳು ಸಂಘಟಿತರಾಗಿ ಪರಸ್ವರ ಸಹಕಾರದಿಂದ ಸಾಧನೆ ಮಾಡಲು ಮುಂದಾಗಬೇಕು. ಕೃಷಿ ಕ್ಷೇತ್ರವನ್ನು ಆಭಿವೃದ್ಧಿ ಪಡಿಸುವುದು, ಕೃಷಿ ಉತ್ವಾದನೆಗೆ ಪ್ರೋತ್ಸಾಹ ನೀಡುವುದು, ಉತ್ತಮ ಮಾರುಕಟ್ಟೆ ಕಲ್ಪಿಸುವುದು, ಅಗತ್ಯ ವಸ್ತುಗಳನ್ನು ಖರೀದಿಸುವುದು, ಕೃಷಿ ಮಾರಾಟ ಸಂಘಗಳಿAದ ಸಾಧ್ಯ ಎಂದರು.
ಉಪಾಧ್ಯಕ್ಷರಾದ ಎಂ.ಎಲ್.ರಾಜಶೇಖರ್,. ಎಂ.ಮಹೇಶ್ವರಪ್ಪ, ಆರ್.ಎಂ.ದೇವೇಂದ್ರಪ್ಪ, ಎ.ಇ.ಮೋಹನ್, ಎಂ.ಮಾರುತೇಶ್, ಟಿ.ತಿಪ್ಪೇಸ್ವಾಮಿ, ಸಿ.ಇ.ಮಹೇಶ್, ಆರ್.ಜಗದೀಶ್, ಸರೋಜಮ್ಮ, ಸಿ.ಎನ್.ಕವಿತಾ, ಎನ್.ಜಿ.ಹೇಮಾಕ್ಷಿ, ಕೆ.ಎಂ.ಪ್ರಕಾಶ್, ವ್ಯತ್ತಿಪರ ನಿರ್ಧೇಶಕರಾದ ಪಿ.ಎಂ.ವೀರಭದ್ರಪ್ಪ, ಸೇರಿದಂತೆ ಹಲವಾರು ಸದಸ್ಯರು ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಈ.ಪ್ರತಾಪ್ ಸ್ವಾಗತಿಸಿದರು.

[t4b-ticker]

You May Also Like

More From Author

+ There are no comments

Add yours