ಯುವನಿಧಿ ಯೋಜನೆಗೆ ಯಾರು ಅರ್ಹರು, ಏನು ದಾಖಲೆ ಬೇಕು, ಅಪ್ಲೈ ಮಾಡುವುದು ಹೇಗೆ ಇಲ್ಲಿದೆ ವಿವರ

 

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರೆಂಟಿ ಯೋಜನೆ ಗಳ ಪೈಕಿ ಐದನೆಯದು ಕರ್ನಾಟಕ ಯುವನಿಧಿಈ ಯೋಜನೆ ಕಡೆಗೆ ಯುವಜನರು ಗಮನನೆಟ್ಟಿದ್ದು, ಯೋಜನೆಯ ಸೌಲಭ್ಯಗಳು, ಅರ್ಹತೆ, ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಗಾಗಿ ಹುಡುಕಾಟ ನಡೆಸತೊಡಗಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್‌ ಪಕ್ಷ ಘೋಷಿಸಿದ ಐದು ಗ್ಯಾರೆಂಟಿಗಳ ಪೈಕಿ ಒಂದಾಗಿರುವ ಯುವನಿಧಿ ಯೋಜನೆ ಪ್ರಕಾರ ನಿರುದ್ಯೋಗಿಗಳಿ ಮಾಸಿಕ ಭತ್ಯೆ ನೀಡುವ ಭರವಸೆ ವ್ಯಕ್ತಪಡಿಸಲಾಗಿತ್ತು. ಕಾಂಗ್ರೆಸ್‌ ಪಕ್ಷ ತನ್ನ ಪ್ರಣಾಳಿಕೆಯಲ್ಲೂ ಇದನ್ನು ಘೋಷಿಸಿತ್ತು. ಆದರೆ, ಸರ್ಕಾರ ರಚನೆಯಾದ ಬಳಿಕ ಎಲ್ಲ ಗ್ಯಾರೆಂಟಿ ಯೋಜನೆಗಳಿಗೂ ಷರತ್ತುಗಳನ್ನು ಅನ್ವಯಿಸಿ ಜಾರಿಗೊಳಿಸುತ್ತಿದೆ.

ಇದರಂತೆ ಜೂನ್‌ ತಿಂಗಳು ಕರ್ನಾಟಕ ಸರ್ಕಾರವು ಗ್ಯಾರಂಟಿ ಯೋಜನೆಗಳ ಜಾರಿಗೆ ತೀರ್ಮಾನಿಸಿದ ಬಳಿಕ ಯುವನಿಧಿ ಫಲಾನುಭವಿಗಳ ಅರ್ಹತೆ ವಿಚಾರವಾಗಿ ಅಧಿಕೃತ ಆದೇಶ ಪ್ರಕಟಿಸಿತ್ತು. ಇದರಲ್ಲಿ ಕರ್ನಾಟಕ ಯುವನಿಧಿ ಯೋಜನೆಯ ಅರ್ಹತೆ, ಷರತ್ತುಗಳು, ಅರ್ಜಿಸಲ್ಲಿಸುವ ವಿಧಾನಗಳನ್ನು ನಮೂದಿಸಿದೆ. ಯುವ ನಿಧಿ ಯೋಜನೆ ಕುರಿತಾದ ಎಲ್ಲ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ.

ಕರ್ನಾಟಕ ಯುವ ನಿಧಿ ಯೋಜನೆ ಯಾರಿಗೆ ಏನು ಸೌಲಭ್ಯ

ಕರ್ನಾಟಕ ಯುವ ನಿಧಿ ಯೋಜನೆಯ ಫಲಾನುಭವಿಯಾಗುವುದಕ್ಕೆ ಇರಬೇಕಾದ ಅರ್ಹತೆ ಮತ್ತು ಸಿಗುವ ಭತ್ಯೆ ವಿವರ ಹೀಗಿದೆ. 2022- 23ನೇ ಸಾಲಿನಲ್ಲಿಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದ, ವೃತ್ತಿಪರ ಕೋರ್ಸ್‌ ಒಳಗೊಂಡು ಎಲ್ಲ ಪದವೀಧರರಿಗೆ ಪ್ರತಿ ತಿಂಗಳು 3,000 ರೂ ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ. ಈ ಭತ್ಯೆಯು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳ ಅವಧಿಗೆ ಸಿಗಲಿದೆ.

ಕರ್ನಾಟಕ ಯುವ ನಿಧಿ ಯೋಜನೆ ಷರತ್ತುಗಳೇನು

  1. ‘ಸೇವಾ ಸಿಂಧು’ ಪೋರ್ಟಲ್‌ ಮೂಲಕವೇ ಅರ್ಜಿ ಸಲ್ಲಿಸಬೇಕು
  2. ನಿರುದ್ಯೋಗ ಸ್ಥಿತಿ ಬಗ್ಗೆ ಸ್ವಯಂ ಘೋಷಣೆ ಸಾಕು.
  3. ಪದವಿ/ ಡಿಪ್ಲೊಮಾ ಮುಗಿಸಿದ ಫ್ರೆಷರ್ಸ್‌ಗೆ 6 ತಿಂಗಳಾದರೂ ಉದ್ಯೋಗ ಸಿಗದೆ ಇದ್ದರೆ ಅಂತಹ ಕನ್ನಡಿಗರಿಗೆ ಅನ್ವಯ
  4. ಈ ಯೋಜನೆಯು ಪ್ರತಿ ಫಲಾನುಭವಿಗೆ 2 ವರ್ಷಗಳಿಗೆ ಮಾತ್ರ ಸೀಮಿತ. 2 ವರ್ಷಗಳೊಳಗೆ ಉದ್ಯೋಗ ದೊರೆತರೆ ಯೋಜನೆ ಸೌಲಭ್ಯ ಸ್ಥಗಿತ
  5. ಪ್ರತಿ ತಿಂಗಳು ಡಿಬಿಟಿ ಮೂಲಕ ಹಣ ಪಾವತಿ ಆಗಲಿದೆ.
  6. ಉದ್ಯೋಗ ದೊರೆತ ನಂತರ ಘೋಷಣೆ ಮಾಡಿಕೊಂಡು ಭತ್ಯೆ ಸ್ವೀಕರಿಸುವುದನ್ನು ನಿಲ್ಲಿಸಬೇಕು. ಇಲ್ಲದೇ ಇದ್ದರೆ ದಂಡ ವಿಧಿಸಲಾಗುತ್ತದೆ..

ಯುವನಿಧಿ ಯೋಜನೆಗೆ ಅರ್ಹರಲ್ಲದವರು ಇವರು

ಉನ್ನತ ವ್ಯಾಸಂಗಕ್ಕೆ ದಾಖಲಾಗುವವರು ಮತ್ತು ವಿದ್ಯಾಭ್ಯಾಸ ಮುಂದುವರಿಸುವವರು. ಅದೇ ರೀತಿ, ಶಿಶಿಕ್ಷು (ಅಪ್ರೆಟೀಸ್‌) ವೇತನ ಪಡೆಯುತ್ತಿರುವವರು. ಸರಕಾರಿ/ ಖಾಸಗಿ ಉದ್ಯೋಗ ಪಡೆದಿರುವವರು. ಹಾಗೆಯೇ ಸರಕಾರದ ನಾನಾ ಯೋಜನೆಗಳಡಿ ಅಥವಾ ಬ್ಯಾಂಕ್‌ ಸಾಲ ಪಡೆದು ಸ್ವಯಂ ಉದ್ಯೋಗ ಶುರುಮಾಡಿದವರು.

ಕರ್ನಾಟಕ ಯುವ ನಿಧಿ ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲಾತಿ ಬೇಕು

  1. ಮತದಾರರ ಗುರುತಿನ ಚೀಟಿ.
  2. ಆಧಾರ್‌ ಕಾರ್ಡ್‌
  3. ಬ್ಯಾಂಕ್‌ ಖಾತೆ ಮಾಹಿತಿ
  4. ಪದವಿ ಅಂಕಪಟ್ಟಿ ಹಾಗೂ ವಿಶ್ವವಿದ್ಯಾಲಯ ಪದವಿ ಪ್ರಮಾಣ ಪತ್ರ
  5. ಡಿಪ್ಲೊಮಾ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರ.

ಕರ್ನಾಟಕ ಯುವ ನಿಧಿ ಅರ್ಜಿ ಸಲ್ಲಿಸುವುದು ಎಲ್ಲಿ

ಯುವನಿಧಿಗೆ ಅರ್ಹತೆ ಹೊಂದಿರುವ ಯುವಕ ಯುವತಿಯರು ‘ಸೇವಾ ಸಿಂಧು’ ಪೋರ್ಟಲ್‌ನಲ್ಲಿಅರ್ಜಿ ಸಲ್ಲಿಸಬೇಕು. ಹಲವು ಸರ್ಕಾರಿ ಯೋಜನೆಗಳ ಸವಲತ್ತು ಪಡೆಯುವ ತಾಣ ಇದು. ಇದರಲ್ಲಿ ಈಗ ಯುವ ನಿಧಿ ಕೂಡಾ ಸೇರ್ಪಡೆಯಾಗಿದೆ. ಆದರೆ ಅರ್ಜಿ ಸಲ್ಲಿಕೆಗೆ ಇನ್ನೂ ವಿಂಡೋ ಓಪನ್‌ ಆಗಿಲ್ಲ.

[t4b-ticker]

You May Also Like

More From Author

+ There are no comments

Add yours