ನಿಮಗೆ ಈರುಳ್ಳಿಯ ಮಹತ್ವ ಗೊತ್ತೆ? ಮಿಸ್ ಮಾಡದೇ ಎಲ್ಲಾರೂ ಓದಲೇಬೇಕು.

 

ಸಸ್ಯಾಹಾರ ಮತ್ತು ಮಾಂಸಾಹಾರ ಅಡುಗೆಗೂ ಅನಿವಾರ್ಯವಾಗಿರುವ ಈರುಳ್ಳಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಹಲವು ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.
ಅದರಲ್ಲು ಹಸಿ ಈರುಳ್ಳಿ ಸೇವನೆಯು ಆರೋಗ್ಯಕ್ಕೆ ಅತ್ಯುತ್ತಮ ಎಂಬುದು ಅನೇಕ ಸಂಶೋಧನೆಯಿಂದ ದೃಢಪಟ್ಟಿದೆ. ಕೆಲವರಿಗೆ ಈರುಳಿ ವಾಸನೆ ಆಗಿ ಬರುವುದಿಲ್ಲ. ಆದರೆ ಇದರಿಂದ ಸಿಗುವ ಪ್ರಯೋಜನದ ಬಗ್ಗೆ ತಿಳಿದುಕೊಂಡರೆ ಖಂಡಿತ ನೀವು ನಿಮ್ಮ ಅಭ್ಯಾಸವನ್ನು ಬದಲಿಸಿಕೊಳ್ಳಬಹುದು.
ಏಕೆಂದರೆ ದಿನಕ್ಕೆ ಅರ್ಧ ತುಂಡು ಹಸಿ ಈರುಳ್ಳಿ ಸೇವಿಸಿದ್ರೆ ನಿಮ್ಮ ಇಮ್ಯೂನಿಟಿ ಹೆಚ್ಚಾಗುತ್ತದೆ. ಅಂದರೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
ಈರುಳ್ಳಿಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಇದರ ಸೇವನೆಯಿಂದ ದೇಹದಲ್ಲಿ ಕೆಂಪು ರಕ್ತಕಣಗಳು ಹೆಚ್ಚಾಗುತ್ತವೆ. ಇದು ರೋಗದ ವಿರುದ್ಧ ಹೋರಾಡುವ ದೇಹ ವ್ಯವಸ್ಥೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಇನ್ನು ಪ್ರತಿನಿತ್ಯ ಈರುಳ್ಳಿ ಸೇವನೆಯು ಹೃದಯ ಆರೋಗ್ಯಕ್ಕೂ ಅತ್ಯುತ್ತಮ ಎಂಬುದು ಸಾಬೀತಾಗಿದೆ. ಪ್ರತಿದಿನ ಈರುಳ್ಳಿ ತಿಂದರೆ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ. ಹಾಗೆಯೇ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯವು ಸದಾ ಆರೋಗ್ಯವಾಗಿರುತ್ತದೆ.
ಹೀಗಾಗಿ ಇನ್ಮುಂದೆ ನಿಮ್ಮ ಆಹಾರ ಕ್ರಮದಲ್ಲಿ ಈರುಳ್ಳಿಗೂ ವಿಶೇಷ ಸ್ಥಾನ ನೀಡುವುದು ಆರೋಗ್ಯದ ದೃಷ್ಟಿಯಲ್ಲಿ ಉತ್ತಮ. ಮುಖ್ಯವಾಗಿ ಸಲಾಡ್​ಗಳಲ್ಲಿ ಹಸಿ ಈರುಳ್ಳಿಯನ್ನು ಹೆಚ್ಚಾಗಿ ಬಳಸುವುದರಿಂದ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು
[t4b-ticker]

You May Also Like

More From Author

+ There are no comments

Add yours