20 ವರ್ಷಗಳ ರಸ್ತೆ ವಿವಾದಕ್ಕೆ ಸಂತೋಷದಿಂದ ತೆರೆ ಎಳೆದ ತಹಶೀಲ್ದಾರ್ ಎನ್.ರಘುಮೂರ್ತಿ

 

ಚಳ್ಳಕೆರೆ: ಗೌರಸಮುದ್ರ ಮತ್ತು ಪೂತ್ಲಾರಟ್ಟಿ  ಮಧ್ಯದ  20 ವರ್ಷಗಳ ದಾರಿ ವಿವಾದಕ್ಕೆ ಇಂದು ಚಳ್ಳಕೆರೆ ತಹಶೀಲ್ದಾರ್ ಎನ್.  ರಘುಮೂರ್ತಿ ತೆರೆ ಎಳೆದಿದ್ದಾರೆ.

ಗೌರಸಮುದ್ರ ಗ್ರಾಮದ ಸರ್ವೇ ನಂಬರ್ 66 67 41 40 ಮತ್ತು ಬಂಡೆ ತಿಮ್ಮಲಾಪುರ ಗ್ರಾಮದ ಸರ್ವೇ ನಂಬರ್ 58ಕ್ಕೆ ಸಂಬಂಧಿಸಿದಂತೆ ದಾರಿ ಹೋಗುತ್ತಿದ್ದು ಈ ದಾರಿಯನ್ನು ಕೆಲವು ಖಾತೆದಾರರು ಅಡ್ಡ ಗಟ್ಟಿ ವೃದ್ಧರು ಮತ್ತು ಮಕ್ಕಳು ಓಡಾಡಲು ತುಂಬಾ ಅನಾನುಕೂಲವಾಗಿದ್ದು ಕಳೆದ 20 ವರ್ಷಗಳಿಂದಲೂ ನಿರಂತರವಾಗಿ ತೊಂದರೆ ಅನುಭವಿಸುತ್ತಿದ್ದು ನೆನ್ನೆ ಪುತ್ಲಾರಟ್ಟಿ ಗ್ರಾಮದ ಸುಮಾರು 50 ಜನ ತಹಶೀಲ್ದಾರ್  ಕಚೇರಿಗೆ ಭೇಟಿ ನೀಡಿ ಸದರಿ ದಾರಿ ವಿವಾದವನ್ನು ಬಗೆಹರಿಸುವಂತೆ ಮನವಿ ಮಾಡಿದ್ದು ಈ ಮನವಿಯನ್ನು ಪರಿಶೀಲಿಸಿದ  ಇಂದು ಬೆಳ್ಳಂಬೆಳಗ್ಗೆ ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ಸರ್ವೆಯವರಿಂದ ಅಳತೆ ಮಾಡಿಸಿ ದಾರಿಗೆ ಅಡ್ಡಿಪಡಿಸಿದಂತ ವ್ಯಕ್ತಿಗಳನ್ನು ಕರೆಯಿಸಿ ಅವರ  ಮನವೊಲಿಸಿ ಜೆಸಿಬಿಯಿಂದ  ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದರು.  ಸಾರ್ವಜನಿಕರು ಓಡಾಡುವ ರಸ್ತೆ ಮುಂತಾದ ಕೆಲಸ ಕಾರ್ಯಗಳಿಗೆ ಮುಂದೆ ಯಾರು ಕೂಡ ಅಡ್ಡಿಪಡಿಪಡಿಸಬಾರು  ನರೇಗಾ ಯೋಜನೆಯಡಿ ಅಗತ್ಯವಿರುವ ಅನುದಾನವನ್ನು ಬಳಸಿಕೊಂಡು ಈ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು ಪಿಡಿಒಗಳಿಗೆ ತಾಕೀತು ಮಾಡಿದರು.  ಈ ಸಂದರ್ಭದಲ್ಲಿ  ಗೌರಸಮುದ್ರ ಪಂಚಾಯಿತಿಯ ಉಪಾಧ್ಯಕ್ಷ ರಾಜಣ್ಣ, ಗ್ರಾಮ  ಪಂಚಾಯ್ತಿ ಸದಸ್ಯರಾದ ಓಬಣ್ಣ ಸುಭಾಷಿಣಿ ತಿಪ್ಪೇಸ್ವಾಮಿ ರಾಜಶ್ವ ನಿರೀಕ್ಷಕರಾದ ಮಹಮ್ಮದ್ ರಫಿ ತಾಲೂಕ್ ಸರ್ವೇ ಪ್ರಸನ್ನ ಕುಮಾರ್ ನರೇಂದ್ರಬಾಬು ಕೊರ್ಲಾಯ್ಯ ಹಾಜರಿದ್ದರು

[t4b-ticker]

You May Also Like

More From Author

+ There are no comments

Add yours