ಬಡವರ ಆರ್ಥಿಕತೆ ಸುಧಾರಣೆಗೆ ಗೃಹಲಕ್ಷ್ಮಿ ಸಹಕಾರಿ:ಶಾಸಕ ಟಿ.ರಘುಮೂರ್ತಿ

 

 

ಕಾಂಗ್ರೆಸ್ ಪಕ್ಷ ಬಡವರ ಕಲ್ಯಾಣದ ಪಕ್ಷ

ಚಳ್ಳಕೆರೆ: ತಾಲ್ಲೂಕಿನ ಸುಮಾರು ೭೭೨೧೯ ಜನ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯ ಫಲ ಪಡೆಯಲಿದ್ದಾರೆಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಕಂಬಳಿ ಮಾರುಕಟ್ಟೆ ಆವರಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಶಿಶು ಅಭಿವೃದ್ದಿ ಯೋಜನೆ, ನಗರಸಭೆ ಆಡಳಿತ ಸಹಯೋಗದಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಚಳ್ಳಕೆರೆ ನಗರ ವ್ಯಾಪ್ತಿಯಲ್ಲಿ ಒಟ್ಟು ೬ ಕಡೆ ಈ ಯೋಜನೆ ಒಂದೇ ಹಂತದಲ್ಲಿ ಜಾರಿಯಾಗುತ್ತಿದೆ, ಚುನಾವಣೆ ಸಂದರ್ಭದಲ್ಲಿ ಮಹಿಳೆಯರಿಗೆ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಈಗಾಗಲೇ ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆ ಜಾರಿಯಲಿದ್ದು, ಪ್ರಸ್ತುತ ಯೋಜನೆ ಸರ್ಕಾರ ನಾಲ್ಕನೇ ಗ್ಯಾರಂಟಿಯಾಗಿದೆ. ಮುಂದಿನ ಡಿಸೆಂಬರ್‌ನಲ್ಲಿ ವಿದ್ಯಾನಿಧಿಯನ್ನು ಜಾರಿಗೊಳಿಸಲಾಗುವುದು ಎಂದರು.

ರಾಜ್ಯದಲ್ಲಿ ಸುರ್ಧೀಘ ಕಾಲ ಆಡಳಿತ ನಡೆದ ಏಕೈಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯ ಹೆಸರು ಬಡವರ ಕಲ್ಯಾಣದ ಪಕ್ಷ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿಗೆ ತರುವ ಮೂಲಕ ಬಡವರು, ಕಡುಬಡವರು, ನಿರ್ಗತಿಕರು ಹಾಗೂ ಸೂರು ಇಲ್ಲದೆ ಪರಿತಪಿಸುವ ಜನತೆಗೆ ಕಾಂಗ್ರೆಸ್ ಪಕ್ಷ ಆಸರೆಯಾಗಿದೆ. ಗರೀಬಿ ಹಠಾವೋನಿಂದ ಹಿಡಿದು ಇಂದಿನ ಐದು ಗ್ಯಾರಂಟಿಗಳ ಭರವಸೆಯನ್ನು ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಮತ್ತೊಮ್ಮೆ ಬಡವರ ಹಿತ ಕಾಯುವ ಪಕ್ಷವೆಂದು ಸಾಬೀತು ಪಡಿಸಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿಡಿಪಿಒ ಹರಿಪ್ರಸಾದ್, ಚಳ್ಳಕೆರೆ ತಾಲ್ಲೂಕಿನಾದ್ಯಂತ ಒಟ್ಟು ೮೮೯೨೦ ಫಲಾನುಭವಿಗಳು ಗುರುತಿಸಿದ್ದು, ಈ ಪೈಕಿ ೭೭೨೧೯ ಫಲಾನುಭವಿಗಳು ಮಾತ್ರ ನೊಂದಾವಣೆಯಾಗಿದೆ. ಹ¯ವಾರು ತಾಂತ್ರಿಕ ಕಾರಣಗಳಿಂದ ಸುಮಾರು ೧೧ ಸಾವಿರ ಫಲಾನುಭವಿಗಳು ಈ ಯೋಜನೆ ವ್ಯಾಪ್ತಿಗೆ ಸೇರ್ಪಡೆಯಾಗಿಲ್ಲ. ಕೆಲವೊಂದು ದಾಖಲಾತಿ ಪಡೆದು ಅವರಿಗೂ ಸಹ ಈ ಯೋಜನೆಯ ಸದುಪಯೋಗವನ್ನು ಪಡೆಯುವಂತೆ ಮಾಡಲಾಗುವುದು ಎಂದರು.
ಗೃಹಲಕ್ಷ್ಮಿ ಯೋಜನೆ ಜಾರಿ ಕುರಿತು ನಗರಸಭೆ ಸದಸ್ಯ ಮಂಜುಳಾ, ಮಹಿಳೆಯರಾದ ಉಷಾ, ಪದ್ಮಲತಾ, ರೇಣುಕಾ ಮುಂತಾದವರು ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ಪೌರಾಯುಕ್ತ ಸಿ.ಚಂದ್ರಪ್ಪ, ನಗರಸಭಾ ಸದಸ್ಯರಾದ ರಮೇಶ್‌ಗೌಡ, ಮಲ್ಲಿಕಾರ್ಜುನ, ವಿರೂಪಾಕ್ಷಿ, ಚಳ್ಳಕೆರೆಯಪ್ಪ, ಸಾವಿತ್ರಮ್ಮ, ಕವಿತಾಬೋರಯ್ಯ, ಸುಮ ಭರಮಣ್ಣ, ಸುಮಕ್ಕ, ಕೆ.ವೀರಭದ್ರಪ್ಪ, ಎಂ.ಜೆ.ರಾಘವೇAದ್ರ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಗದ್ದಿಗೆ ತಿಪ್ಪೇಸ್ವಾಮಿ ಉಣ್ಣೆ ಕೈಮಗ್ಗದ ಅಧ್ಯಕ್ಷ ಬಿ.ಮಲ್ಲಿಕಾರ್ಜುನಪ್ಪ ಮುಂತಾದವರು ಉಪಸ್ಥಿತರಿದ್ದರು.

 

ಬಾಕ್ಸ್

ನಮ್ಮ ಸರ್ಕಾರ ನುಡಿದಂತೆ ನಡದಿದೆ.ರಾಜ್ಯದಲ್ಲಿ ಬಡವರ ಪರವಾದ ಸರ್ಕಾರ ರಚನೆಯಾಗಿದೆ.ನಮ್ಮ ಸರ್ಕಾರ ಐದು ಗ್ಯಾರೆಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು ಬದ್ದವಾಗಿದೆ.

ಟಿ.ರಘುಮೂರ್ತಿ ಶಾಸಕರು ಚಳ್ಳಕೆರೆ

 

[t4b-ticker]

You May Also Like

More From Author

+ There are no comments

Add yours