ಇಂಜಿನಿಯರ್ ವೀರೇಶ್ ಬಾಬು ಸಾವಿನ ಕುರಿತು ಸ್ಪೋಟಕ ಹೇಳಿಕೆ ಕೊಟ್ಟ ಗೂಳಿಹಟ್ಟಿ ಶೇಖರ್

 

 

 

 

ಚಿತ್ರದುರ್ಗ : ಇಂಜಿನಿಯರ್ ವೀರೇಶ್ ಬಾಬು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಬೇಸರದ ವಿಚಾರ ಈ ಒಂದು ಸಾವಿಗೆ ನಮ್ಮ ಜಿಲ್ಲೆಯ ಹಾಲಿ ಶಾಸಕರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಶಾಸಕರ ಬೆಂಬಲಿಗರು, ಕೌನ್ಸಿಲರ್ ಬೈಗುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಜಕ್ಕೂ ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿದ್ದರು ಇಂಥ ವ್ಯಕ್ತಿಯ ಸಾವಿಗೆ ನೇರ ಕಾರಣ ಜಿಲ್ಲೆಯ ಶಾಸಕರು ಮತ್ತು ಹೊಸದುರ್ಗ ತಾಲ್ಲೂಕಿನ ಜನಪ್ರತಿನಿಧಿಗಳೇ ಹೊಣೆಯಾಗಿದ್ದಾರೆ.

 

 

ಬಡವರಿಗಾಗಿ ಚಿತ್ರದುರ್ಗ ನಗರ, ಹೊಸದುರ್ಗ ನಗರದಲ್ಲಿ ಹಕ್ಕುಪತ್ರ ವೀರೇಶ್ ಬಾಬು ನೀಡುವುದರಲ್ಲಿ ಮುಂದಾಗಿದ್ದರು ಇದರ ಜೊತೆಗೆ
ಯಾವುದೇ ನಿಯಮ ಬಾಹಿರವಾಗಿ ಹಕ್ಕು ಪತ್ರಗಳನ್ನು ವಿತರಣೆ ಮಾಡಿರಲಿಲ್ಲ.ಇದನ್ನೇ ನೆಪವಾಗಿ ಇಟ್ಟುಕೊಂಡು ಕಿರುಕುಳ ಕೊಟ್ಟಿದ್ದಾರೆ ಎನ್ನುತ್ತಿದ್ದಾರೆ ಮಾಜಿ ಶಾಸಕ ಗೂಳಿ ಹಟ್ಟಿ ಶೇಖರ್.

ವೀರೇಂದ್ರ ಬಾಬು ಸಾವಿನ ಕುರಿತು ಸಮಗ್ರ ತನಿಖೆಯಾಗಬೇಕು ಇಂಥ ಪ್ರಾಮಾಣಿಕ ಅಧಿಕಾರಿ ಸಾವಿಗೆ ನಮ್ಮ ಜಿಲ್ಲೆಯ ಶಾಸಕರೆ ನೇರ ಕಾರಣ ಅವರ ಕುಟುಂಬದ ಗೋಳು ಇವರಿಗೆ ತಟ್ಟುತ್ತದೆ. ಆಡಳಿತ ಪಕ್ಷ ಜನಪ್ರತಿನಿಧಿಗಳೇ ಇದಕ್ಕೆ ಕಾರಣವಾಗಿದ್ದಾರೆ.ಅವರ ಸಾವಿಗೆ ನ್ಯಾಯ ಸಿಗಬೇಕು ಎಂದರೆ CBI ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours