“ದಾವಣಗೆರೆ ವಿವಿ ಘಟಿಕೋತ್ಸವದಲ್ಲಿ ಕೋಟೆನಾಡಿನ ಎಂ.ಆರ್. ಅಮೃತ ಲಕ್ಷ್ಮಿ ಗೆ ಗಣಿತಶಾಸ್ತ್ರದಲ್ಲಿ ಎರಡು ಚಿನ್ನದ ಪದಕಗಳು

 

ದಾವಣಗೆರೆ ವಿಶ್ವವಿದ್ಯಾನಿಲಯದ ಶಿವಗಂಗೋತ್ರಿ ಆವರಣದಲ್ಲಿ 30-9-2020 ರಂದು ನಡೆದ ಏಳನೇ ಘಟಿಕೋತ್ಸವ ಸಮಾರಂಭದಲ್ಲಿ ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಎಂ.ಎಸ್ಸಿ ಗಣಿತಶಾಸ್ತ್ರ ವಿಭಾಗದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ರಾಂಕ್ ಪಡೆದ ವಿದ್ಯಾರ್ಥಿನಿ ಎಂ ಆರ್ ಅಮೃತ ಲಕ್ಷ್ಮಿಯವರು ಎರಡು ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಗಣಿತಶಾಸ್ತ್ರ ವಿಭಾಗದಲ್ಲಿ ಸಾಧನೆ ಮಾಡಿ ಕಾಲೇಜಿಗೂ ಹಾಗೂ ಪೋಷಕರಿಗೂ ಕೀರ್ತಿ ತಂದಿರುತ್ತಾರೆ. ಘಟಿಕೋತ್ಸವ ಸಮಾರಂಭದಲ್ಲಿ ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವರಾದ ಶ್ರೀಮತಿ ಅನಿತಾ ಹಾಗೂ ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಶ್ರೀ ಗೋಪಾಲ್ ಅಡವಿ ರಾವ್ ಇವರು ಅಮೃತ ಲಕ್ಷ್ಮಿಯವರಿಗೆ 2 ಚಿನ್ನದ ಪದಕ ಗಳು ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಅಭಿನಂದಿಸಿದರು. ಹಿರಿಯೂರಿನ ಪತ್ರಕರ್ತರಾದ ಎಂ ರವೀಂದ್ರನಾಥ್ ಮತ್ತು ಪೋಲೀಸ್ ಇಲಾಖೆಯ ಶ್ರೀಮತಿ ಎನ್.ರೇಖಾ ಇವರ ಸುಪುತ್ರಿ ಎಂ.ಆರ್ ಅಮೃತ ಲಕ್ಷ್ಮಿಯವರು ಈ ಹಿಂದೆ ಬಿ.ಎಸ್ಸಿ ಪದವಿಯಲ್ಲಿ ಪ್ರಥಮ ರಾಂಕ್ ಗಳಿಸಿ ಚಿನ್ನದ ಪದಕ ಪಡೆದಿದ್ದರು. ಇವರು ಯಶಸ್ವಿಯಾಗಿ ಎರಡನೇ ಬಾರಿಗೆ ಚಿನ್ನದ ಪದಕಗಳನ್ನು ಪಡೆದಿರುವುದು ಶ್ಲಾಘನೀಯವಾಗಿದೆ. ಪ್ರಸ್ತುತ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಗಣಿತಶಾಸ್ತ್ರ ವಿಭಾಗದಲ್ಲಿ ಪಿ.ಹೆಚ್ ಡಿ ಸಂಶೋಧನೆಯಲ್ಲಿ ತೊಡಗಿರುವ ಎಂ ಆರ್ ಅಮೃತ ಲಕ್ಷ್ಮಿಯವರಿಗೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours