ಮಗುವಿಗೆ ಪೋಲಿಯೋ ಹನಿ ಹಾಕಿಸಿ ರೋಗಗಳಿಂದ ರಕ್ಷಿಸಿ: ಟಿ.ರಘುಮೂರ್ತಿ

 

ರಾಷ್ಟೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ಆರೋಗ್ಯ ಇಲಾಖೆಯೊಂದಿಗೆ ಎಲ್ಲರೂ ಕೈಜೋಡಿಸಿ : ಶಾಸಕ ಟಿ.ರಘುಮೂರ್ತಿ ಮನವಿ.

ಚಳ್ಳಕೆರೆ: ಆಗತಾನೇ ಜನಿಸಿದ ಶಿಶುವಿನಿಂದಐದು ವರ್ಷದ ಪ್ರತಿಯೊಂದು ಮಗುವಿಗೆ ಎರಡು ಹನಿ ಪೋಲಿಯೋ ಡ್ರಾಫ್ ಹಾಕಿಸಿದಲ್ಲಿ ಆ ಮಗುವಿನ ಆರೋಗ್ಯ ಸದೃಢವಾಗುತ್ತದೆ. ಪ್ರಾಣಕ್ಕೆ ಅಪಾಯವನ್ನುಂಟು ಮಾಡುವ ಯಾವುದೇ ರೋಗಗಳು ಮಗುವಿನತ್ತ ಸುಳಿಯುವುದಿಲ್ಲ. ಶಿಶು ಮತ್ತು ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹಾಕಿಸುವ ಮೂಲಕ ಪಲ್ಸ್ ಪೋಲಿಯೋ ರಾಷ್ಟೀಯ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಅವರು, ಭಾನುವಾರ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ಆರೋಗ್ಯ ಘಟಕ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾ¯ನೆ ನೀಡಿ ಮಾತನಾಡಿದರು. ಕಳೆದ ೨೦೨೩-೨೪ನೇ ವರ್ಷ ಅನಿವಾರ್ಯವಾಗಿ ಪೋಲಿಯೋ ಲಸಿಕೆ ಹಾಕಲು ಸಾಧ್ಯವಾಗಲಿಲ್ಲ. ಅದರ ಹಿಂದೆ ನಡೆದ ಎಲ್ಲಾ ಕಾರ್ಯಕ್ರಮಗಳಲ್ಲಿ ಪಲ್ಸ್ ಪೋಲಿಯೋ ಈ ಭಾಗದಲ್ಲಿ ಯಶಸ್ವಿಯಾಗಿ ಮುಕ್ತಯವಾಗಿದೆ. ನಿರೀಕ್ಷೆ ಮೀರಿ ಫಲಿತಾಂಶ ದಾಖಲಿಸಿದೆ. ವೈದ್ಯರು ಮತ್ತು ಸಿಬ್ಬಂದಿ ವರ್ಗ ತಮ್ಮನ್ನು ತಾವೇ ಈ ಪುಣ್ಯ ಕಾರ್ಯಕ್ಕೆ ಸಮರ್ಪಿಸಿಕೊಳ್ಳಬೇಕು. ೨೦೨೪ರ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಕಾಣುವ ನಿಟ್ಟಿನಲ್ಲಿ ನಾವೆಲ್ಲರೂ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದರು.

 

ಇದನ್ನೂ ಓದಿ: ,ಭದ್ರಾ ಮೇಲ್ದಂಡೆ ಯೋಜನೆ: ಹಠ ಬಿಟ್ಟು ಕೆಲಸ ಮಾಡಲು ಅನುವು ಮಾಡ್ಕೋಡಿ ರೈತರಿಗೆ ಡಿಸಿಎಂ ಡಿ.ಕೆ.‌ಶಿವಕುಮಾರ್ ಮನವಿ.

ಈ ಸಂದರ್ಭದಲ್ಲಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಜೆ.ಡಿ.ವೆಂಕಟೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಪ್ಪ, ನಗರಸಭೆ ಸದಸ್ಯೆ ಸುಜಾತ, ಜೈತುಂಬಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ, ಮುಖಂಡರಾದ ಬಿ.ಪಿ.ಪ್ರಕಾಶ್‌ಮೂರ್ತಿ, ಎಂ.ಚೇತನ್‌ಕುಮಾರ್, ಅಂಜಿನಪ್ಪ, ಕೃಷ್ಣಮೂರ್ತಿ, ರುದ್ರಮುನಿ, ಪ್ರಹ್ಲಾದ್, ಖಾದರ್ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours