ಮನೆಯಲ್ಲಿ ಜಾರ್ಜ್ ಇಟ್ಟಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ , ಮನೆಯಲ್ಲಿದ್ದ 5 ಲಕ್ಷಕ್ಕೂ ಹೆಚ್ಚಿನ ವಸ್ತುಗಳ ಲಾಸ್

 

ಈಗೆಲ್ಲಾ ಎಲ್ಲಿ ನೋಡಿದರೂ ಎಲೆಕ್ಟ್ರಿಕ್​ ವಾಹನಗಳದ್ದೇ (Electric Vehicle) ಅಬ್ಬರ. ಬೆಂಗಳೂರು (Bengaluru) ಪ್ರತಿ ಮನೆಯಲ್ಲೂ ಒಂದು ಗಾಡಿ ಎಲೆಕ್ಟ್ರಿಕ್​ ವಾಹನ ಅಂತೂ ಇದ್ದೇ ಇರುತ್ತೆ. ಡಿಮ್ಯಾಂಡ್ (Demand) ಹೆಚ್ಚಿರೋ ಕಾರಣ ಎಲ್ಲಾ ದೊಡ್ಡ ದೊಡ್ಡ ಕಂಪನಿಗಳು ಕೂಡ ಎಲೆಕ್ಟ್ರಿಕ್​ ವಾಹನಗಳನ್ನು ಪರಿಚಯಿಸುತ್ತಿವೆ.

ಆದರೆ ಇದರ ಗುಣಮಟ್ಟ ಎಷ್ಟರ ಮಟ್ಟಿಗೆ ಇದೆ ಎಂಬುದು ಇಲ್ಲಿ ಯಕ್ಷ ಪ್ರಶ್ನೆಯಾಗಿದೆ. ಈ ಹಿಂದೆ ಅದೆಷ್ಟೋ ಎಲೆಕ್ಟ್ರಿಕ್​ ಸ್ಕೂಟರ್​ಗಳು ಸುಟ್ಟು ಕರಕಲಾಗಿದ್ದನ್ನು ನಾವೆಲ್ಲ ನೋಡಿದ್ದೇವೆ. ಇದೀಗ ಇಂಥ ಘಟನೆ ಮರುಕಳಿಸಿದೆ. ಮಂಡ್ಯದಲ್ಲಿ (Mandya) ಚಾರ್ಜ್​ಗೆ ಹಾಕಿದ್ದ ಎಲೆಕ್ಟ್ರಿಕ್​ ಸ್ಕೂಟರ್ ಬ್ಲ್ಯಾಸ್ (Electric Scooter Blast)​ ಆಗಿದೆ.

ಎಲೆಕ್ಟ್ರಿಕ್​ ಸ್ಕೂಟರ್​ ಸ್ಫೋಟ!

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮನೆಯಲ್ಲಿ ಚಾರ್ಜ್​ಗೆ ಹಾಕಿದ್ದ ಎಲೆಕ್ಟ್ರಿಕ್​ ಸ್ಕೂಟರ್​ ಇದಕ್ಕಿದ್ದ ಹಾಗೇ ಸ್ಫೋಟಗೊಂಡಿದೆ. ಇದರಿಂದ ಮನೆಯಲ್ಲಿದ್ದ 5 ಲಕ್ಷ ರೂಪಾಯಿಗೂ ಹೆಚ್ಚಿನ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿದೆ.

E-ROUTE ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ!

ವಳಗೆರೆಹಳ್ಳಿ ನಿವಾಸಿ ಮುತ್ತುರಾಜ್​ ಎಂಬುವರಿಗೆ ಸೇರಿದ್ದ ಎಲೆಕ್ಟ್ರಿಕ್​ ಸ್ಕೂಟರ್​ ಸುಟ್ಟು ಕರಕಲಾಗಿದೆ. ಕಳೆದ 6 ತಿಂಗಳ ಹಿಂದಷ್ಟೆ ಮದ್ದೂರಿನಲ್ಲಿ E-ROUTE ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ರು. ಮನೆಯಲ್ಲಿ ಸ್ಕೂಟರ್ ಚಾರ್ಜ್ ಗೆ

ಹಾಕಿದ್ದ ಸ್ಚಲ್ಪ ಹೊತ್ತಿನಲ್ಲೇ ಸ್ಟೋಟವಾಗಿದೆ. ಸ್ಫೋಟದ ರಭಸಕ್ಕೆ ಮನೆಯ ಕಿಟಕಿ ಗಾಜು ಸ್ಫೋಟಗೊಂಡು, ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಮನೆಯಲ್ಲಿದ್ದ ಟಿವಿ, ಫ್ರಿಡ್ಜ್, ವಾಶಿಂಗ್ ಮಿಷನ್ ಎಲ್ಲವೂ ಸುಟ್ಟು ಭಸ್ಮವಾಗಿದೆ.

ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ಧವಸ ಧಾನ್ಯಗಳು ನಾಶವಾಗಿದೆ. ಸ್ಥಳಕ್ಕೆ ಅಗ್ನಿಶಾಂಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇನ್ನೂ ಇತ್ತೀಚಗೆ ಸಾವಿರಾರು ಕಂಪನಿಗಳು ತಮ್ಮ ಹೆಸರಿನಲ್ಲಿ ಎಲೆಕ್ಟ್ರಿಕ್​ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಗುಣ ಮಟ್ಟದ ಎಲೆಕ್ಟ್ರಿಕ್​ ವಾಹನಗಳನ್ನು ಖರೀದಿ ಮಾಡದಿದ್ರೆ ಇದೇ ಪರಿಸ್ಥಿತಿಯಾಗುತ್ತೆ ಅಂತ ಜನ ಹೇಳುತ್ತಾರೆ.

ಚಾರ್ಜ್​ಗೆ ಇಟ್ಟಿದ್ದ ಎಲೆಕ್ಟ್ರಿಕ್​​ ಸ್ಕೂಟರ್​ ಸುಟ್ಟು ಕರಕಲು!

ಇನ್ನೂ ಇದೇ ರೀತಿಯ ಘಟನೆ ಇತ್ತೀಚೆಗೆ ತಮಿಳುನಾಡಿನಲ್ಲೂ ನಡೆದಿತ್ತು. ತಮಿಳುನಾಡಿನ (Tamilnadu)

ಇನ್ನೂ ಇದೇ ರೀತಿಯ ಘಟನೆ ಇತ್ತೀಚೆಗೆ ತಮಿಳುನಾಡಿನಲ್ಲೂ ನಡೆದಿತ್ತು. ತಮಿಳುನಾಡಿನ (Tamilnadu) ವಾಣಿಯಂಬಡುವಿನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಮನೆಯ ಮುಂಭಾಗದಲ್ಲಿ ಇಟ್ಟಿದ್ದ ಬೈಕ್ ಸುಟ್ಟು ಕರಕಲಾಗಿದೆ. ಹೌದು, ಎಲೆಕ್ಟ್ರಿಕ್​ ವಾಹನವನ್ನು ಚಾರ್ಜ್ ಮಾಡುತ್ತಿರುವಾಗಲೇ ಬೆಂಕಿ ಹೊತ್ತಿಗೊಂಡು ಸಂಪೂರ್ಣ ಸುಟ್ಟು ಕರಕಲಾಗಿತ್ತು.

ಪೊಲೀಸರ ಪ್ರಕಾರ, 32 ವರ್ಷದ ಇನ್ಶಾನುಲ್ಲಾ ಶಕೀರಾಬಾದ್‌ನಲ್ಲಿ ಟೀ ಸ್ಟಾಲ್ ನಡೆಸುತ್ತಿದ್ದಾರೆ. ತಮ್ಮ ಮನೆಯ ವರಾಂಡದಲ್ಲಿದ್ದ ವಿದ್ಯುತ್ ಮೀಟರ್ ಬಾಕ್ಸ್ ಬಳಿ ಬೈಕ್ ನಿಲ್ಲಿಸಿದ್ದರು. ರಾತ್ರಿ ಮಲಗುವ ಮುನ್ನ ಬೈಕ್ ಚಾರ್ಜ್ ಮಾಡಿ ಮಲಗಿದ್ದರು. ರಾತ್ರಿ ಒಂದು ಗಂಟೆಗೆ ಬೈಕ್ ನಿಂದ ಮೊದಲ ಹೊಗೆ ಬರಲು ಆರಂಭವಾಗಿತ್ತು. ಸ್ವಲ್ಪ ಹೊತ್ತಿನಲ್ಲೇ ಬೆಂಕಿ ಕಾಣಿಸಿಕೊಂಡಿದೆ.

[t4b-ticker]

You May Also Like

More From Author

+ There are no comments

Add yours