ಬುಡಕಟ್ಟು ಜನರ ಆರಾಧ್ಯ ದೈವ ಗೌರಸಮುದ್ರ ಮಾರಮ್ಮ ಜಾತ್ರೆಗೆ ಹರಿದು ಬಂದ ಜನಸಾಗರ

 

ಚಳ್ಳಕೆರೆ:  ಮಧ್ಯ ಕರ್ನಾಟಕದ ವೈಭವದ ಜಾತ್ರೆಗಳಲ್ಲಿ ಒಂದಾದ ಗೌರಸಮುದ್ರ ಮಾರಮ್ಮದೇವಿಯ ಜಾತ್ರೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಅದ್ದೂರಿಯಾಗಿ ನಡೆಯಿತು.

ಮಧ್ಯಾಹ್ನ ಮಾರಿ ಎಂದೆ ಖ್ಯಾತಿಯಾದ ಈ ಜಾತ್ರೆಗೆ ಆಂಧ್ರಪ್ರದೇಶವೂ ಸೇರಿದಂತೆ ಕರ್ನಾಟಕದ ಮೂಲೆ, ಮೂಲೆಗಳಿಂದ ಭಕ್ತರ ಆಗಮಿಸಿ ದೇವಿಯ ದರ್ಶನ ಪಡೆದರು. ಗ್ರಾಮದಿಂದ ಸುಮಾರು ಎರಡ್ಮೂರು ಕಿ.ಮೀ ದೂರದ ತುಮಲು ಪ್ರದೇಶಕ್ಕೆ ಬೆತ್ತದ ಪೆಟ್ಟಿಗೆ ಮೇಲೆ ದೇವಿ ಆಗಮಿಸುತ್ತಲ್ಲೇ ಭಕ್ತರು ಜೈಕಾರಗಳೊಂದಿಗೆ ತಾವು ಬೆಳೆದ ಈರುಳ್ಳಿ, ಹೂ, ಬಾಳೆ ಹಣ್ಣು, ಕೋಳಿ ದೇವಿಯ ಮೇಲೆ ತೂರುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿದರು. ನಂತರ ತುಮಲು ಪ್ರದೇಶವನ್ನು ಪ್ರದಕ್ಷಿಣೆ ಹಾಕಿ ತುಮಲುನ ಒಳಗೆ ಪ್ರತಿಷ್ಠಾಪಿಸಿ ಭಕ್ತರಿಗೆ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಕಳೆದ ಬಾರಿಗಿಂತ ಈ ಬಾರಿ ಭಕ್ತರು ಕಡಿಮೆಯಾದರೂ ಭಕ್ತಿಯ ಪಾರಕಾಷ್ಠೆ ಮುಗಿಲು ಮುಟ್ಟಿತ್ತು. ದೇವಿಯ ಮೆರವಣಿಗೆಯುದ್ದಕ್ಕೂ ವಿವಿಧ ಬುಡಕಟ್ಟು ಕಲಾಮೇಳಗಳೊಂದಿಗೆ ದೇವಿ ಮೆರವಣಿಗೆ ಸಾಗಿತು. ದೇವಿಯ ದರ್ಶನಕ್ಕಾಗಿ ಜಿಲ್ಲಾ, ತಾಲ್ಲೂಕು, ಪೊಲೀಸ್ ಇಲಾಖೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಸೋಮವಾರ ರಾತ್ರಿಯಿಂದಲೇ ದೇವಸ್ಥಾನ ಮತ್ತು ತುಮಲು ಪ್ರದೇಶದ ಸುತ್ತಮುತ್ತ ಸೇರುವ ಭಕ್ತರು ಮಂಗಳವಾರ ರಾತ್ರಿ ತುಮಲು ಪ್ರದೇಶದಲ್ಲಿ ಯಾರೂ ಇಲ್ಲದಂತೆ ಖಾಲಿಯಾಗುತ್ತಾರೆ. ಪ್ರತಿವರ್ಷದ ವಾಡಿಕೆಯಂತೆ ದೇವಸ್ಥಾನದ ಮುಂದಿರುವ ಗರಡು ಗಂಭದ ಮೇಲೆ ದೀಪ ಹಚ್ಚಿದ ನಂತರ ಜಾತ್ರೆ ಸಂಪನ್ನವಾಗಲಿದ್ದು, ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ನೆರೆದಿದ್ದ ಲಕ್ಷಾಂತರ ಭಕ್ತರು ಕಾತುರದಿಂದ ಕಾಯುತ್ತಿದ್ದರು.


ಬಿಸಿಲು ದುರ್ಗಿ ಎಂದು ಕರೆಸಿಕೊಳ್ಳುವ ಈ ದೇವಿಯ ಮೂಲ ಸ್ಥಾನವೇ ತುಮಲು, ಭಾದ್ರಪದ ಮಾಸದ ಮಂಗಳವಾರದAದು ನಡೆಯುವ ಈ ಪರಿಷೆಗೆ ಸಾವಿರಾರು ಭಕ್ತರು ದೇವಿಯ ಮೂಲ ಸ್ಥಾನ ತುಮಲು ಪ್ರದೇಶಕ್ಕೆ ಬೆತ್ತದ ಪೆಟ್ಟಿಗೆಯಲ್ಲಿ ದೇವಿ ಆಗಮಿಸುವುದನ್ನು ಕಾಯುತ್ತಾರೆ. ಜಿಲ್ಲಾಡಳಿತ ಬೇವಿನ ಉಡುವುದು, ಪ್ರಾಣಿ ಬಲಿ ನಿಷೇದಿಸಿದ್ದರೂ ಅಲ್ಲಲ್ಲಿ ಪ್ರಾಣಿ ಬಲಿ, ಮಕ್ಕಳು ಬೇವಿನ ಸೀರೆ ಉಟ್ಟು ದೇವಸ್ಥಾನ ಪ್ರದಕ್ಷಿಣೆ ಹಾಕುವುದು ಕಂಡುಬAತು.
ಮಳೆ ಇಲ್ಲದ ಕಾರಣ ವಿಪರೀತ ದೂಳಿಗೆ ಭಕ್ತರು ನಲುಗಿದರು.ಕೆಲ ಕಡೆಗಳಲ್ಲಿ ರಸ್ತೆಗಳು ಗುಂಡಿಯಿAದ ಕೂಡಿದ್ದರಿಂದ ವಾಹನಸವಾರರು ಹೈರಾಣಾದರು.
ಜಿಲ್ಲಾ ರಕ್ಷಣಾಧಿಕಾರಿ ಧರ್ಮೆಂದ್ರಕುಮಾರ್ ಮೀನಾ ಮಾತನಾಡಿ, ಜಾತ್ರೆಗೆ ಬರುವ ಎಲ್ಲಾ ಭಕ್ತರಿಗೂ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ನಾಲ್ಕು ಡಿವೈಎಸ್ಪಿ, ೧೨ ಸಿಪಿಐ, ೨೪ಪಿಎಸ್ಐ, ೫೪ಎಎಸ್ಐ ಸೇರಿದಂತೆ ಸುಮಾರು ೬೦೦ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದರು. ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ, ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಪತ್ನಿ ಗಾಯಿತ್ರಿರಘುಮೂರ್ತಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಎಸ್ಪಿ ಧರ್ಮೇಂದ್ರಕುಮಾರ್ ಮೀನಾ, ತಹಶೀಲ್ಧಾರ್ ರೇಹಾನ್ ಪಾಷ, ಡಿವೈಎಸ್ಪಿ ಟಿ.ಬಿ.ರಾಜಣ್ಣ, ಇನ್ಸ್ಪೆಕ್ಟರ್ ಕೆ.ಸಮೀವುಲ್ಲಾ, ಎನ್.ತಿಮ್ಮಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಓಬಣ್ಣ ಸೇರಿದಂತೆ ಹಲವಾರು ಮುಖಂಡರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

[t4b-ticker]

You May Also Like

More From Author

+ There are no comments

Add yours