ಗಾರ್ಮೆಂಟ್ಸ್ ಮಹಿಳೆಯರಿಗೆ ಮತದಾನ ಜಾಗೃತಿ

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ಏ.21:
ಅಸಂಘಟಿತ  ಕಾರ್ಮಿಕ ವಲಯದಲ್ಲಿರುವ ನೌಕರರಿಗೆ ಹಾಗೂ ಗಾರ್ಮೆಂಟ್ಸ್ ಮಹಿಳೆಯರಿಗೆ ಮತದಾನ ಜಾಗೃತಿ ಅಂಗವಾಗಿ ಶುಕ್ರವಾರ ಮತದಾನದ ಬಗ್ಗೆ ಅರಿವು ಮೂಡಿಸಲಾಯಿತು.
ಚಿತ್ರದುರ್ಗ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಚೋಳಗಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಿರುಬನಕಲ್ಲು ಗ್ರಾಮದ ಹೊರವಲಯದಲ್ಲಿರುವ ಗಾರ್ಮೆಂಟ್ಸ್ ಕೇಂದ್ರಕ್ಕೆ ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾಲ್ಲೂಕು ಪಂಚಾಯಿತಿ ಇಒ ಹೆಚ್.ಹನುಮಂತಪ್ಪ ಅವರು ಭೇಟಿ ನೀಡಿ, ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಅಸಂಘಟಿತ  ಕಾರ್ಮಿಕ ವಲಯದಲ್ಲಿರುವ ನೌಕರರಿಗೆ ಹಾಗೂ ಗಾರ್ಮೆಂಟ್ಸ್ ಮಹಿಳೆಯರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು. ತದನಂತರ ಪ್ರತಿಜ್ಞಾವಿಧಿ ಬೋಧನೆ ಮಾಡಿ ಮೇ 10ರಂದು ಕಡ್ಡಾಯವಾಗಿ ಮತದಾನ ಮಾಡುವಂತೆ ಹಾಗೂ ತಮ್ಮ ಸುತ್ತಮುತ್ತಲಿನ ನಾಗರೀಕರಿಗೆ ಮತ ಚಲಾಯಿಸುವಂತೆ ತಾವುಗಳು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚೋಳಗಟ್ಟ ಪಿಡಿಒ ರೂಪಾಕುಮಾರಿ, ಗಾರ್ಮೆಂಟ್ಸ್ ಕೇಂದ್ರದ ಜನರಲ್ ಮ್ಯಾನೇಜರ್ ಮುತ್ತುಕುಮಾರ್, ತಾ.ಪಂ ಸಹಾಯಕ ಚುನಾವಣಾ ಸಿಬ್ಬಂದಿ ಓ. ಮಂಜುನಾಥ ಸೇರಿದಂತೆ ಇತರರು ಇದ್ದರು.

[t4b-ticker]

You May Also Like

More From Author

+ There are no comments

Add yours